ಮುಗಳಖೋಡದಲ್ಲಿ ಗ್ರಾಮದೇವತಾ ಆರಾಧನೆ: ಜನಪದ ಸಂಸ್ಕೃತಿ ಸಂಭ್ರಮ. ದಿ.6 ರಂದು : ಎಲ್ ಶ್ರೀನಿವಾಸ ಪ್ರಸಾದ

Must Read

ಮುಧೋಳ -ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ ಹಾಗೂ ಬಸವ ಜಾನಪದ ಕಲಾ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮ ದೇವತಾ ಆರಾಧನೆ ವಾರದ ಆಚರಣೆ ನಿಮಿತ್ತ ನಡೆದುಕೊಂಡು ಬಂದಿರುವ ದೇವಿ ಪಾರಾಯಣ ಪುರಾಣದ ಮಂಗಲ‌, ಗ್ರಾಮ ದೇವತೆಗೆ ಅಭಿಷೇಕ, ನವದುಗಿ೯ಯರಿಗೆ ಉಡಿ ತುಂಬುವ ಕಾರ್ಯಕ್ರಮವು ಇದೆ ಶುಕ್ರವಾರ ದಿ. 6 ರಂದು ಬೆಳಿಗ್ಗೆ 10.30 ಕ್ಕೆ ಜರುಗುವುದು.ತನ್ನಿಮಿತ್ತವಾಗಿ ನಮ್ಮ ಗ್ರಾಮೀಣ ಪ್ರದೇಶದ ನೆಲಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಪದ ಸಂಸ್ಕೃತಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಲಿದೆ‌ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯಕರ್ತ ಎಲ್ ಶ್ರೀನಿವಾಸ ಪ್ರಸಾದ ಅವರು ಹೇಳಿದ್ದಾರೆ.

ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಯುವ ನೇತಾರ ಗ್ರಾಮ ಪಂಚಾಯತಿ ಸದಸ್ಯ ಶಂಕರಗೌಡ ಎಸ್ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಯುವ ಧುರೀಣರು ಗ್ರಾಮ ಪಂಚಾಯತ್ ಸದಸ್ಯರಾದ ಪರಮಾನಂದ ಭೀ. ಸುಣಗಾರ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಗ್ರಾಮ ಪಂಚಾಯತ್ ಸದಸ್ಯ ರಂಗನಗೌಡ ಮಂಟೂರ ಜ್ಯೋತಿ ಬೆಳಗಿಸುವರು.

ಹಿರಿಯ ಕಲಾವಿದ ಶ್ರೀಶೈಲ ಪಟ್ಟಣಶಟ್ಟಿ ಅಧ್ಯಕ್ಷತೆ ವಹಿಸುವರು. ಬಸವ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ್ ಸೋಲೋನಿ, ಕುಳಲಿ ಪಿ .ಕೆ.ಪಿ.ಎಸ್.ಸದಸ್ಯ ಮುತ್ತಣ್ಣ ಪೋಳ ಉಪಸ್ಥಿತರಿರುವರು.

ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಎಲ್ ಶ್ಯಾಮಲಾ ಅವರು ಪುಷ್ಪಾರ್ಚನೆ ಮಾಡುವರು. ಸಭೆಯ ಸಾನಿಧ್ಯವನ್ನು ಕುಳಲಿಯ ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು ವಹಿಸುವರು. ಜನಪದ ಸಂಸ್ಕೃತಿ ಸಂಭ್ರಮದಲ್ಲಿ ಡೊಳ್ಳಿನ ಪದಗಳು. ಭಜನೆ, ತತ್ವಪದಗಳು, ಶೋಭಾನೆ ಪದಗಳು, ಚೌಡಕಿ ಪದಗಳ.ಹಂತಿಪದಗಳು, ಭಕ್ತಿ ಸಂಗೀತ ಸೇರಿದಂತೆ ವಿವಿಧ ಕಲಾತಂಡಗಳಿಂದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಜರುಗುವುದು.

ಭಾಗವಹಿಸಿದ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಎಲ್ಲ ಕಾರ್ಯಕ್ರಮಗಳು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಜರುಗುವವು ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9972682938 ಅಥವಾ 97 4291 5714 ಈ ಸಂಖ್ಯೆಗೆ ಸಂಪರ್ಕಿಸಬೇಕೆಂದು ಹೇಳಿದರು.ಮಹಾಲಿಂಗಯ್ಯ ಹಿರೇಮಠ, ಮುತ್ತಣ್ಣ ಬನಾಜಗೋಳ, ಮಲ್ಲಯ್ಯ ಸಿದ್ದಯ್ಯ ಹಿರೇಮಠ, ವಿಠಲ ಬನಾಜಗೋಳ, ವಿಠಲ ಸಿಂಗಾಡಿ, ಸಂಗಮೇಶ ಲಕ್ಷ್ಮೇಶ್ವರ, ಶಿವಾನಂದ ಬಾಡಗಿ [ಜನವಾಡ] ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಪರಿಸರ ಸಂರಕ್ಷಣೆ ಮಾಡಿ, ಮಾನವಕುಲ ರಕ್ಷಿಸಿ ; ಸಾಹಿತಿ ಭೇರ್ಯ ರಾಮಕುಮಾರ

ಮೈಸೂರು - ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ...

More Articles Like This

error: Content is protected !!
Join WhatsApp Group