ಬೆಳಗಾವಿ – ದಿನಾಂಕ 21 ರಂದು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ “ಜನಪದ ಉತ್ಸವ”, ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜರುಗಿತು,
ವಿದ್ಯಾರ್ಥಿನಿಯರಿಂದ ಕುಂಭ ಮೆರವಣಿಗೆ, ಆರತಿ ಸಂಪ್ರದಾಯ ,ಜನಪದ ಮದುವೆ ಪದ್ಧತಿ, ಉಡಿ ತುಂಬುವುದು, ಬಳೆ ಶಾಸ್ತ್ರ ಪದ್ಧತಿ, ಶಾಸಕ್ಕಿ ಸಂಪ್ರದಾಯ ಅಡುಗೆ ಮಾಡುವುದು, ಮಜ್ಜಿಗೆ ಮಾಡುವುದು,ಧಾನ್ಯ ಹಸನು ಮಾಡುವುದು, ಸೊಪ್ಪು ಸೋಸುವುದು, ರಂಗೋಲಿ ಹಾಕುವುದು ಮುಂತಾದ ಪದ್ಧತಿಗಳನ್ನು ವಿದ್ಯಾರ್ಥಿನಿಯರು ಬಹಳ ಅಚ್ಚುಕಟ್ಟಾಗಿ ಮಾಡಿ ತೋರಿಸಿದರು ಹಾಗೂ ಜನಪದ ಆಟಗಳಾದ ಪುಗಡಿ ಆಡುವುದು, ಚಕ್ಕಾ ಆಡುವುದು ಮುಂತಾದ ಆಟಗಳನ್ನು ಆಡಿದರು. “ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಹಿನ್ನೆಲೆಯಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳು ಹಾಗೂ ಪ್ರಾಂಶುಪಾಲರು ಮಾಡಿದರು. ಕುಮಾರಿ ನಿರ್ಮಲಾ ರಾಘನ್ನವರ ಪ್ರಾರ್ಥನಾ ಗೀತೆ ಹಾಡಿದರು, ಸ್ವಾಗತ ಮತ್ತು ಪರಿಚಯವನ್ನು ಕು. ಅಕ್ಷತಾ ನನ್ನೋಜಿ ಮಾಡಿದರು, ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಸಂಚಾಲಕರಾದ ಡಾ. ಬಿ ಎಸ್ ಗಂಗನಳ್ಳಿ ಇವರು ಮಾಡಿದರು.
ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಜವಾಬ್ದಾರಿ ಯುವಕರು ಮೇಲಿದೆ ಎಂದು ತಮ್ಮ ಉಪನ್ಯಾಸದಲ್ಲಿ ಮುಖ್ಯ ಅತಿಥಿಗಳಾದ ಪ್ರಕಾಶ ಮಬನೂರ ಹೇಳಿದರು. ಅಧ್ಯಕ್ಷೀಯ ಭಾಷಣವನ್ನು ಡಾ. ರಮೇಶ ಮಾಂಗಳೇಕರ ಪ್ರಾಂಶುಪಾಲರು ಮಾಡಿದರು. ನಿರೂಪಣೆಯನ್ನು ಕು. ಸುಧಾ ಬನಜಗೋಳ ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕಾಲೇಜಿನ ರೇಂಜರ್ ಘಟಕ ಹಾಗೂ ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕಿಯರು ಮಾಡಿದರು.
ಕಾರ್ಯಕ್ರಮದಲ್ಲಿ ಜನಪದ ವಸ್ತು ಪ್ರದರ್ಶನ ಮತ್ತು ಜನಪದ ಅಡುಗೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು ಎಲ್ಲಾ ಚಟುವಟಿಕೆಗಳು ಅರ್ಥಪೂರ್ಣವಾಗಿ ಜರುಗಿದವು. ಕಾಲೇಜಿನ ಎಲ್ಲ ಭೋದಕ ಮತ್ತು ಬೋಧಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿತು.