ಸಿಂದಗಿಯಲ್ಲಿ ಡಿ. ೨೮ರಂದು ಕನಕದಾಸರ ಅದ್ದೂರಿ ಜಯಂತ್ಯುತ್ಸವ

Must Read

ಸಿಂದಗಿ : ಪಟ್ಟಣದಲ್ಲಿ ಡಿ. ೨೮ರಂದು ಅದ್ದೂರಿಯಾಗಿ ಜರುಗಲಿರುವ ಸಂತ ಶ್ರೇಷ್ಟ ಕನಕದಾಸರ ೫೩೮ ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಲಮೇಲ ಹಾಗೂ ಸಿಂದಗಿ ತಾಲೂಕಿನ ಹಾಲುಮತ ಸಮುದಾಯದ ಹಿರಿಯರು ಯುವಕರು ಹಾಗೂ ಕನಕದಾಸರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ ಕರೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು ರವಿವಾರ ಬೆಳಿಗ್ಗೆ ೧೧ ಘಂಟೆಗೆ ಶ್ರೀ ಕನಕದಾಸ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ಸ್ವಾಮಿ ವಿವೇಕಾನಂದ ವೃತ್ತದಿಂದ ಡಾ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ ತೆರಳಿ ಟಿಪು ಸುಲ್ತಾನ್ ಸರ್ಕಲ್‌ದಿಂದ ಡಾ, ಅಂಬೇಡ್ಕರ್ ವೃತ್ತ ಪತ್ರಿಕಾ ಭೀಷ್ಮ ರೆ.ಚ ರೇವಡಿಗಾರ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ಶ್ರೀ ಬಸವೇಶ್ವರ ವೃತ್ತ ದಿಂದ ಮಾಜಿ ಸಚಿವ ಎಂ.ಸಿ.ಮನಗೂಳಿ ರಸ್ತೆ ಮೂಲಕ ಸಂಗಮೇಶ್ವರ ಮಂದಿರದ ವರೆಗೆ ವಿವಿಧ ಕಲಾವಿದರಿಂದ ಡೊಳ್ಳು ಕುಣಿತ, ಕುದುರೆ ಕುಂಭಮೇಳದೊಂದಿಗೆ ತಲುಪಿ ಸಾಯಂಕಾಲ ೪ ಘಂಟೆಗೆ ಬಹಿರಂಗ ವೇದಿಕೆ ಮೇಲೆ ವಿವಿಧ ಕಾರ್ಯಕ್ರಮ ಜರುಗಲಿವೆ ವೇದಿಕೆ ಮೇಲೆ ಅಭಿನವ ಶ್ರೀ ಪುಂಡಲಿಂಗ ಮಹಾರಾಜರು ಗೋಳಸಾರ, ಹುಲಜಂತಿ ಪಟ್ಟದ ಪೂಜ್ಯರಾದ ಶ್ರೀ ಮಹಾಲಿಂಗ ಮಹಾರಾಜರು, ಕನ್ನಯ್ಯ ಮಹಾರಾಜರು ಗುಬ್ಬೆವಾಡ, ಶ್ರೀ ಸೋಮರಾಯ ಪೂಜ್ಯರು ಬಳಗಾನೂರ, ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ಶರಣಪ್ಪ ಸುಣಗಾರ, ತಾಲೂಕ ಕುರುಬ ಸಂಘದ ಅಧ್ಯಕ್ಷರು ನಿಂಗಣ್ಣ ಬುಳ್ಳಾ, ತಹಸೀಲ್ದಾರ್ ಕರೆಪ್ಪ ಬೆಳ್ಳಿ,ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group