ಸಂಭ್ರಮದಿಂದ ಜರುಗಿದ ಶ್ರೀ ಮಾರುತೇಶ್ವರ, ಶ್ರೀ ಬಸವೇಶ್ವರ ಜಾತ್ರೆಗಳು

Must Read

ತಿಮ್ಮಾಪೂರ:- ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಕಳೆದ ದಿನಾಂಕ ೨೦ ರಂದು ಪ್ರಾರಂಭಗೊoಡು  ರವಿವಾರ ೨೨ ರಂದು ಸೋಮವಾರದ ವರೆಗೆ ಸಡಗರ ಸಂಭ್ರಮದೊoದಿಗೆ ಹತಾರ ಸೇವೆ ಹೇಳಿಕೆ ಸುತ್ತಗಾಯಿ ಹೊಡೆಯುವ ಕಾರ್ಯಗಳು ನೆರೆವೇರಿದವು

ಕಳೆದ ದಿ. ೨೦ ರಂದು ಶನಿವಾರ ರಾತ್ರಿ ೮ ಗಂಟೆಯ ಸುಮಾರಿಗೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಿಗಾಲಿನಿಂದ ತಿಮ್ಮಾಪೂರದ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ ಕಿರುಸೂರ ಗ್ರಾಮಕ್ಕೆ ತೆರಳಿದವು ನಂತರ ಅಲ್ಲಿನ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಡಗಲಿ ಸಮೀಪದ ಮಲಪ್ರಭ ನದಿಗೆ ಹೋಗಿ ಸ್ನಾನ ಮಾಡಿದ ನಂತರ ನದಿಯಲ್ಲಿ ಪೂಜೆ ಪುನಸ್ಕಾರಗಳು ಜರುಗಿದವು ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ಅಲ್ಲಿಯ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ನಂತರ ಅಲ್ಲಿ ಮುಂಜಾನೆ ನಾಲ್ಕರ ಸುಮಾರಿಗೆ ಹನುಮಂತ ದೇವರ ಕಟ್ಟೆಯ ಮೇಲೆ ಶ್ರೀ ಮಾರುತೇಶ್ವರ ಅರ್ಚಕ ಸಂಜೀವಪ್ಪ ಪೂಜಾರಿ ದೈವಾಧೀನ ಕಾಲೋಚಿತ ಉತ್ತರಿ ಹಸ್ತಚಿತ್ತಿ ಕರೆ ಎತ್ತು ಕಾಲುಕೈದರೈತಿ ಎಂಬ ಹೇಳಿಕೆಯನ್ನು ಹೇಳಿದರು ಇದರ ಅರ್ಥವನ್ನು ವಿವರಿಸಬಹುದು

ಸ್ಥಳೀಯ ಮುಖಂಡ ಹುನಗುಂದ ತಾಲೂಕಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಮಾತನಾಡಿ ನಮ್ಮ ನಮ್ಮ ದೈವಕ ಅನುಸಾರ ಕಾಲಕ್ಕೆ ತಕ್ಕಂತೆ ಉತ್ತರಿ ಹಸ್ತ, ಚಿತ್ತಿ ಮಳೆಗಳು ಅವರ ದೈವಕ್ಕ ಅನುಸಾರವಾಗಿ ಮಳೆಗಳು ಬರಬಹುದೆಂದು ಹೇಳಿದ ಅವರು ಕರೆ ಎತ್ತು ಕಾಲಕೆದರೇತಿ ಎಂದರೆ ಎಣ್ಣೆ ಕಾಳುಗಳಾದ ಸೂರ್ಯಪಾನ, ಕುಸುಬಿ. ಸೇಂಗಾ ಬೆಳೆಗಳು ಹೆಚ್ಚಿ ಫಸಲುಗಳು ಬರುತ್ತದೆ ಎಂಬ ಅರ್ಥವನ್ನು ಹೇಳಬಹುದಾಗಿದೆ.

ಈ ವರ್ಷ ಅತಿಯಾಗಿ ಮಳೆಯಾಗಿದ್ದರು ಸಹ ಎಣ್ಣೆ ಕಾಳುಗಳು ಫಸಲುಗಳು ಬರುತ್ತವೆ ಎಂದು ಹೇಳಬಹುದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಂತರ ಪಲ್ಲಕ್ಕಿ ಹಾಗೂ ಭಕ್ತರು ತಿಮ್ಮಾಪೂರು ಗ್ರಾಮಕ್ಕೆ ಬಂದು ತಲುಪಿದರು.

ದಿ.೨೧ ರಂದು ರವಿವಾರ ಬೆಳಿಗ್ಗೆ ಎರಡು ದೇವರಿಗೆ ರುದ್ರಾಭಿಷೇಕ ಕಳಸದ ಮೆರವಣಿಗೆ ಗೋಪುರಕ್ಕೆ ಕಳಸಾರೋಹಣ ಹೊಳೆಯಿಂದ ತಂದ ನೀರನ್ನು ದೇವರಿಗೆ ಪೂಜೆ ಸಲ್ಲಿಸಲಾಯಿತು ನಂತರ ಪೂಜಾರಿಗಳಿಂದ ರೋಮಾಂಚನಗೊಳಿಸುವ ಹತಾರ ಸೇವೆ ನಡೆಯಿತು , ರಜತ ಮಹೋತ್ಸವದ ನಿಮಿತ್ತ ಸುಮಂಗಲಿಯರಿಂದ ಕುಂಭಮೇಳ ಜರುಗಿತು ಅಂದು ಸಾಯಂಕಾಲ ಪೂಜಾರಿ ಮನೆಯಿಂದ ಮಾವಿನ ಮರತಪ್ಪ ಎಂಬ (ಹನುಮಂತ ದೇವರ ಮೂರ್ತಿಯನ್ನು ಅರ್ಚಕರಿಂದ) ದೇವಸ್ಥಾನಕ್ಕೆ ತರಲಾಯಿತು. ನಂತರ ಐದು ಸುತ್ತು ಹತಾರ ಸೇವೆ ನಂತರ ಇದೆ ಸಂದರ್ಭದಲ್ಲಿ ಸುತ್ತುಗಾಯಿ ಒಡೆಯುವ ಕಾರ್ಯಗಳು ಯುವಕರಿಂದ ಜರುಗಿದವು,

ನಂತರ ಕೊನೆಯ ಅರ್ಚಕ ಬಸವರಾಜ ಹನುಮಂತ ಪೂಜಾರಿ ಬರಮ ದೇವರ ಕಟ್ಟಯೆ ಮೇಲೆ ನಿಂತು ಉತ್ರಿ, ಹಸ್ತ.ಚಿತ್ತಿ ಸಾದಾರಣ ಅನ್ನ ಎಂಬ ಹೇಳಿಯನ್ನು ನುಡಿದರು. ಇದರ ಅರ್ಥ ಬಗ್ಗೆ ಹುನಗುಂದದ ರೈತ ಈರಪ್ಪ ಲೋಕಾಪೂರ ಇವರು ವಿವರಿಸಿದ್ದು ಹೀಗೆ ಉತ್ತರಿ ಹಸ್ತ, ಚಿತ್ತಿ ಸಾಧಾರಣ ಅನ್ನ ಎಂದರೆ ಮುಂಗಾರಿನಲ್ಲಿ ಸುರಿದ ಹೆಚ್ಚು ಮಳೆಗಳಿಂದ ಫಸಲುಗಳು ಅನ್ನದಾತನಿಗೆ ಬೆಳೆಗಳು ಕಡಿಮೆ ಬರುತ್ತವೆ ಎಂಬ ಅರ್ಥ ಹೇಳಬಹುದಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ನಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರತಿ ಮನೆಮನೆಯವರು ಹಾಗೂ ಸುತ್ತಗಾಯಿಯನ್ನು ಒಡೆದು ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಜಾತ್ರೆಯಲ್ಲಿ ಸಾವಿರಾರು ಕಾಯಿಗಳು ಮಾರಾಟವಾದವು ಎಂದು ವ್ಯಾಪಾರಸ್ಥರು ತಿಳಿಸಿದರು ಜಾತ್ರೆಯ ಅಂಗವಾಗಿ ಪ್ರತಿಯೋಂದು ಮನೆಗಳ ಮುಂದೆ ರಂಗೋಲಿ ಓಣಿಗಳಲ್ಲಿ ಕಳಸದ ಮೆರವಣಿಗೆ ಸಂಧರ್ಬದಲ್ಲಿ ಪೂಜೆ , ಕಾಯಿ ಒಡೆಯುವದು ಮುಂತಾದ ಸಂಪ್ರದಾಯ ಪದ್ದತಿಗಳು ಸಾಮಾನ್ಯವಾಗಿ ಕಂಡುಬ೦ದವು.

ಈ ವರ್ಷ ಮಾರುತೇಶ್ವರ ಮತ್ತು ಬಸವೇಶ್ವರ ಜಾತ್ರೆ ಹುಬ್ಬಿ ಮಳೆ ಕೊನೆಯ ವಾರದಲ್ಲಿ ಹಾಗೂ ಉತ್ರಿ ಮಳೆ ಪ್ರಾರಂಭವಾಗುವ ಸಮಯದಲ್ಲಿ ದೇವರಿಗೆ ನೀರು ಹಾಕುವುದರೊಂದಿಗೆ ಆರಂಭವಾಗುವ ಈ ಜಾತ್ರೆಯು ಹಲವು ವಿಧಿ ವಿಧಾನ ಮತ್ತು ಸಂಪ್ರದಾಯಗಳನ್ನು ಆಚರಿಸುವ ವಿಶೇಷತೆ ಇಲ್ಲಿದೆ ಜಾತ್ರೆಯ ವಿಶೇಷತೆ ಯಾವ ಮಳೆಯು ಬಾರದಿದ್ದಕ್ಕು ಉತ್ರಿ ಮಳೆ ಮಾತ್ರ ಈ ಜಾತ್ರೆಯೊಂದಿಗೆ ಆರಂಭವಾಗುವುದು ವಿಶೇಷ ಬಹುಕಾಲದಿಂದ ರೈತರ ಹಾಗೂ ಭಕ್ತರ ನಂಬಿಕೆಯ೦ತೆ ಜಾತ್ರೆಯ ಮುಂದೆ ಹಿಂಗಾರು ಬಿತ್ತನೆಗೆ ಹಸಿ ಯಾಗುವಷ್ಟು ಮಳೆ ಬೀಳುವುದು ಈ ದೇವರ ಮಹಿಮೆಯಾಗಿದೆ. ಎಂದು ಹೇಳಬಹುದಾಗಿದೆ. ಈ ಸಲ ಈ ವರ್ಷದ ಮುಂಗಾರು ಮಳೆಯ ಪ್ರಾರಂಭಕ್ಕಿ೦ತ ಮೊದಲೆ ಪ್ರಾರಂಭಗೊಂಡಿರುವ ಕಾರಣ ಇಲ್ಲಿವರೆಗೂ ಹೆಚ್ಚಿನ ಮಳೆಯಾಗಿದ್ದರಿಂದ ಜಾತ್ರೆಯ ದಿವಸದ ವೆರೆಗೂ ಮಳೆಗಳು ಸುರಿದಿದ್ದವು ಜಾತ್ರೆ ಪ್ರಾರಂಭಗೊ೦ಡ ದಿವಸದಿಂದ ಮುಕ್ತಾಯವಾಗಿರುವ ಮಳೆಯಾಗಲಿಲ್ಲ ಎಂದರೆ ಇಂದು ಮಾರುತೇಶ್ವರ ಹಾಗೂ ಬಸವಣ್ಣನ ಮಹಿಮೆ ಎಂದು ಹೇಳಬಹುದಾಗಿದೆ. ಒಟ್ಟಿನಲ್ಲಿ ಬರಗಾಲವಿದ್ದಾಗ ಮಳೆಯನ್ನು ಕೊಡುವ ಅತಿವೃಷ್ಟಿ ಆದಾಗ ಮಳೆಯನ್ನು ಕಡಿಮೆ ಮಾಡುವ ಆ ದೇವರುಗಳ ಮಹಿಮೆಗಳು ಕಾಲಘಟ್ಟಗಳಲ್ಲಿ ಜರುಗುತ್ತವೆ ಎಂದರೆ ದೇವರು, ಇಲ್ಲ ಎನ್ನುವ ನಾಸ್ತಿಕರಿಗೆ ಈ ದೇವಸ್ಥಾನಗಳು ಸವಾಲು ಎಂದು ಹೇಳಬಹುದು

ಈ ಜಾತ್ರೆ ಮಹೋತ್ಸವದಲ್ಲಿ ಚಿತ್ತರಗೆ ಕಿರಸೂರು ಹಡಗಲಿ, ಬೇವೂರ, ಹಳ್ಳೂರು, ಬಗವತಿ, ಹುನಗುಂದ ಇಲಕಲ್ಲ ಹಿರೆಮಾಗಿ, ಮೆಂದಾಪೂರು ಗಂಗೂರು ಹರೇ ಮಾಗಿ ಹಳ್ಳೂರು ,ಬೇವೂರು ಬಾಗಲಕೋಟ ಬಗವತಿ ಮುಂತಾದ ಸಭ್ತರು ದೇವಸ್ಥಾನಗಳಿಗೆ ತೆರಳಿ. ಭಕ್ತಿಯ ನಮನೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬಂತು.
ಅಂದು ಸಂಜೆ ತಿಮ್ಮಾಪುರ ಗೆಳೆಯರ ಬಳಗದ ವತಿಯಿಂದ ಹುನಗುಂದ ತಾಲೂಕಿನ ಅಡಿವಾಳ ಗ್ರಾಮದ ಕಲಾಸಂಗಮ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group