ಮೂಡಲಗಿ : ಪಟ್ಟಣದ ಗಾಂಧಿ ಚೌಕ ಢವಳೇಶ್ವರ ಓಣಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ರಾತ್ರಿ ಡೊಳ್ಳಿನ ಪದಗಳು ಜರುಗಿದವು. ಜಾತ್ರೆ ಕೂಡ ವಿಜೃಂಭಣೆಯಿಂದ ಜರುಗಿತು.
ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಅಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ ಅನ್ನ ಪ್ರಸಾದ ಜರುಗಿತು. ಭಕ್ತರು ಭಂಡಾರದಲ್ಲಿ ಮಿಂದೆದ್ದು ಸಡಗರದಿಂದ ಜಾತ್ರೆಯಲ್ಲಿ ಪಾಲ್ಗೊಂಡರು.
ಜಾತ್ರಾ ಮಹೋತ್ಸವದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮಲ್ಲಿಕಾರ್ಜುನ ಢವಳೇಶ್ವರ, ಗಿರೀಶ ಢವಳೇಶ್ವರ, ಚನ್ನಪ್ಪಾ ಢವಳೇಶ್ವರ , ಪ್ರದೀಪ್ ಪೂಜೇರಿ, ಈರಪ್ಪಾ ಸತರಡ್ಡಿ, ಈಶ್ವರ ಢವಳೇಶ್ವರ, ಚೇತನ ಮದಗನ್ನವರ, ವಿನಾಯಕ ಮಂದ್ರೋಳಿ, ಸುಪ್ರೀತ ನಿಡಸೋಸಿ, ಹಣಮಂತ ಸತರಡ್ಡಿ, ಮಹಾಂತೇಶ ಖಾನಾಪುರ ಭರತೇಶ ಬೆಳವಿ, ಚಂದ್ರು ಬಗಾಡಿ, ಸಂತೋಷ ಕೊಳವಿ ಅನೇಕರು ಇದ್ದರು.