ಮೂಡಲಗಿ – ಪಟ್ಟಣದ ಮಡ್ಡಿ ಶ್ರೀ ಈರಣ್ಣ ದೇವರ ಜಾತ್ರೆಯಲ್ಲಿ ಮಂಗಳವಾರ ವೀರಭದ್ರೇಶ್ವರ ರಥೋತ್ಸವವು ಸಂಭ್ರಮ ಸಡಗರದಿಂದ ಜರುಗಿತು.
ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಶ್ರೀವೀರಭದ್ರನಿಗೆ (ಈರಣ್ಣ) ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ನಂತರ ಸುಂದರ ರಥವು ನಾಗರ ಕಟ್ಟೆಯವರೆಗೂ ಹೋಗಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು.
ರಥೋತ್ಸವ ಸಂಭ್ರಮದಲ್ಲಿ ಪುರವಂತರ ಶಸ್ತ್ರ ಪ್ರದರ್ಶನ ಮೇರಗು,ನಂದಿಕೋಲು, ಪಲ್ಲಕ್ಕಿ ಉತ್ಸವ, ವಾದ್ಯವೃಂದದವರ ನಾದ, ಕಿಕ್ಕಿರಿದ ಭಕ್ತರು. ಭಕ್ತರು ಕಾಯಿ-ಹಣ್ಣು,ಬತ್ತಾಸು ಖಾರೀಕಗಳನ್ನು ಮತ್ತು ಇನ್ನು ವಿವಿಧ ಆಹಾರ ರೂಪದಲ್ಲಿ ನೈವೇದ್ಯ ಅರ್ಪಿಸುವುದು.
ಶ್ರಾವಣ ಮಾಸದಲ್ಲಿ ಪ್ರತಿವರ್ಷದಂತೆ ಈ ವರ್ಷಕೂಡಾ ಜಾತ್ರೆ ಬಲು,ರಾತ್ರಿ ‘ಅಕ್ಕ ಅಂಗಾರ ತಂಗಿ ಸಿಂಗಾರ’ ಎಂಬ ಹಾಸ್ಯ ಭರಿತ ನಾಟಕ ಕೂಡಾ ಪ್ರದರ್ಶನ ಕಂಡತು ಮತ್ತು ಬಂದಂತಾ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಬಿ.ಬಿ.ಹಂದಿಗುಂದ, ಮಲ್ಲಪ್ಪ ಗಾಣಿಗೇರ, ರಾಮಪ್ಪ ಸೋನವಾಲಕರ, ಶಿವಬಸು ಖಾನಟ್ಟಿ, ರಾಮಪ್ಪ ಖಾನಟ್ಟಿ,ರಂಗಪ್ಪ ನಾಯ್ಕ, ದೇವಸ್ಥಾನದ ಪೂಜಾರಿ ಮುತ್ತಪ್ಪ ಪೂಜಾರಿ ಮತ್ತು ಇನ್ನೂ ಅನೇಕ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.