ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಆಯೋಜಿಸಿರುವ ಕರ್ನಾಟಕ ಧ್ವನಿ ಸಂಚಿಕೆ ಒಂದು ಈ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆಯನ್ನು ವಿಜಯನಗರ ಜಿಲ್ಲೆ, ಹೊಸಪೇಟೆಯ ಬುದ್ಧ ಬಸವ ಭವನದಲ್ಲಿ ದಿ. 26-10-2025ರ ಭಾನುವಾರದಂದು ಆಯೋಜಿಸಲಾಗಿದೆ
ಈ ಗಾಯನ ಸ್ಪರ್ಧೆಯಲ್ಲಿ 38 ಜನ ಗಾಯಕ/ಗಾಯಕಿಯರಿದ್ದು ಚಲನಚಿತ್ರ ಯುಗಳ ಗೀತೆಗಳನ್ನು ಹಾಡಲಿದ್ದಾರೆ ಅಂತಿಮವಾಗಿ ಆಯ್ಕೆಯಾಗುವ ಗಾಯಕರಿಗೆ ಬೆಳಗಾವಿಯಲ್ಲಿ ಮುಂದಿನ ವರ್ಷ ಫೆಬ್ರವರಿ ಮಾಹೆಯಲ್ಲಿ ನಡೆಯಲಿರುವ ಕನ್ನಡ ನುಡಿ ವೈಭವ 2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು
ಈ ಕಾರ್ಯಕ್ರಮದ ಉದ್ಘಾಟನೆಯನ್ನು
ಶ್ರೀಮತಿ ಆಶಾರಾಣಿ ನಡೋಣಿ ಸದಸ್ಯರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ರಾಷ್ಟ್ರಮಟ್ಟದ ಚಿತ್ರ ಕಲಾವಿದರು ಬೆಳಗಾವಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ ಎಸ್ ನಾಯ್ಕರವರು ವಹಿಸಲಿದ್ದಾರೆ.
ಗೂರೂರು ಅನಂತರಾಜು ಅವರ ಕೃತಿ ‘ನಿಂತು ಹೋದ ರಂಗ’ ವೈಭವ ಪುಸ್ತಕದ ಲೋಕಾರ್ಪಣೆಯನ್ನು ಡಾ.ಸಿ ಸೋಮಶೇಖರ್, ಐ ಎ ಎಸ್ ಬಸವ ವೇದಿಕೆ, ಬೆಂಗಳೂರು ಅಧ್ಯಕ್ಷರು ನೆರವೇರಸುವರು. ‘ಸಿಂಗಾರ, ಎಂಬ ಹಾಡನ್ನು ಶ್ರೀಮತಿ ಕಮಲ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ ಮಧುನಾಯ್ಕ.ಲಂಬಾಣಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ನೋಂ), ಹೂವಿನ ಹಡಗಲಿ. ಮುಖ್ಯ ಅತಿಥಿಗಳಾಗಿ ಶ್ರೀ ಗೊರೂರು ಅನಂತರಾಜು ಗೌರವ ಅಧ್ಯಕ್ಷರು ಹಾಗೂ ಸಾಹಿತಿಗಳು ಹಾಗೂ ವಿರುಪಾಕ್ಷಪ್ಪ.ಯು ಉಪಾಧ್ಯಕ್ಷರು, ಉದೇದಪ್ಪ ಕ್ಯಾದಿಗೆಹಾಳ್, ಹೊಸಪೇಟೆ ತಾಲೂಕು ಅಧ್ಯಕ್ಷರು. ಪಿ ವಿ ವೆಂಕಟೇಶ ವಕೀಲರು ಕರುನಾಡ ಕ್ರಿಯಾಶೀಲ ಸಮಿತಿ ಅಧ್ಯಕ್ಷರು ಹೊಸಪೇಟೆ ಇವರು ಭಾಗವಹಿಸುವರು.
ಈ ಸ್ಪರ್ದೆಯ ತೀರ್ಪುಗಾರರಾಗಿ ಕುಬೇರನಾಯ್ಕ, ದಾವಣಗೆರೆ ಹಾಗೂ ಸ್ವರೂಪ ಭಾರದ್ವಾಜ್, ಚಿಕ್ಕಮಗಳೂರುರವರು ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದ ನಿರೂಪಣೆ ಎಲ್ ವಾಲ್ಯನಾಯ್ಕ ಸ್ವಾಗತ ಜೂಟೂರು ರಾಘವೇಂದ್ರ ಪ್ರಾರ್ಥನೆ ಶ್ರೀಮತಿ ರೀನಾ ನಂದನ್ ವಂದನಾರ್ಪಣೆ ಎಚ್ ಶ್ರೀನಿವಾಸ ಹಾಗೂ ವೇದಿಕೆ ನಿರ್ವಹಣೆಯನ್ನು ಶ್ರೀಮತಿ ಜಿ ನೀಲಗಂಗಮ್ಮ ಶ್ರೀಮತಿ ಆರ್ ಪ್ರಿಯಾಂಕಾ ಹಾಗೂ ಶ್ರೀಮತಿ ಹೆಚ್ ಲಕ್ಷ್ಮಿ ನಿರ್ವಹಿಸಲಿದ್ದಾರೆ.
ಭಾಗವಹಿಸುವ ಗಾಯಕ/ಗಾಯಕಿಯರು: ಕಮಲಾ ಕುಲಕರ್ಣಿ, ಅಶ್ವಿನಿ ಅರಕಲಗೂಡು, ವಿಜಯ್ ಕುಮಾರ್ ಸಿ. ಆರ್. ಪ್ರಿಯಾಂಕ, ಸುಮಂಗಲಾ ದೇಸಾಯಿ, ರೀನಾ ನಂದನ್, ಪ್ರಶಾಂತ್ ಕುಲಕರ್ಣಿ, ಕಾಂಚನಾ ವಿಜಯ ಕುಮಾರ, ಉಮೇಶ ಕುಮಾರ ಎಚ್. ಎನ್.
ಲಲಿತಾ ಸಿದ್ದಿ, ಜೂಟೂರು ರಾಘವೇಂದ್ರ, ಪೂಜಾ ಕುಲಕರ್ಣಿ, ರಮೇಶ ಲಮಾಣಿ, ಟಿ. ದೀಪ, ತಿಮ್ಮಾ ನಾಯ್ಕ್, ಕವಿತಾಬಾಯಿ ವೈ ಪಿ. ಮಲ್ಲಿಕಾರ್ಜುನ
ಎಚ್. ಲಕ್ಷ್ಮಿ, ಬಿ. ಎನ್. ನಾಗೇಶ್
ಭಾಗ್ಯ. ಎಸ್, ಡಾ. ಅಶೋಕ್ ಬಾಬು ಎ. ಆರ್.
ವಾಸವಿ ಸತೀಶ, ಶಶಿಧರ ಹಿರೇಮಠ, ವಿಜಯಶಾಂತಿ. ಕೆ. ಎಚ್. ಶ್ರೀನಿವಾಸ, ಜಿ.ನೀಲಗಂಗಮ್ಮ, ವಾಲ್ಯನಾಯ್ಕ ಎಲ್. ಸ್ನೇಹ ತೀರ್ಥಹಳ್ಳಿ, ರಾಮನಾಥ್ ಜೆ ನಾಯ್ಕ
ಗೌರಿ ಅರಸ, ಹನುಮಂತ ನಾಯ್ಕ್ ಸಿ., ಶ್ರೀದೇವಿ ತೇರದಾಳ, ರಾಕೇಶ್ ಸಿಂಗ್, ಡಾ. ವಿದ್ಯಾ. ಕೆ., ಎಲ್. ಗಣೇಶ, ಮಹಾನಂದ ಮಠಪತಿ, ವೀಣಾ ನಟರಾಜ್
ಎನ್ ಗಂಗಾಧರ
ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಈ ರೀತಿಯ ಕಾರ್ಯಕ್ರಮವನ್ನು ವಿಶೇಷವಾಗಿ ಆನ್ ಲೈನ್ ಮೂಲಕ ಹಾಗೂ ಚಿಕ್ಕಮಗಳೂರುನಲ್ಲಿ ಒಂದು ಹಂತದಲ್ಲಿ ವೇದಿಕೆಯಲ್ಲಿ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ ಅಂತಿಮ ಹಂತದ ಸ್ಪರ್ಧೆ ನಡೆಸಲಾಗುತ್ತಿದ್ದು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಾಯಕ ಗಾಯಕಿಯರನ್ನು ಪ್ರೋತ್ಸಾಹಿಸಬೇಕೆಂದು ರಾಜ್ಯಾಧ್ಯಕ್ಷರು ಮಧು ನಾಯ್ಕ ಲಂಬಾಣಿಯವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.