ದೇಶವನ್ನು ಭಯೋತ್ಪಾದಕರಿಂದ ರಕ್ಷಣೆ ಮಾಡುತ್ತಿರುವ ನಮ್ಮ ಸೈನಿಕರಿಗೊಂದು ಸಲಾಂ ಎಂದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ – ದೇಶದ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬುವ, ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಂಗಳವಾರದಂದು ತಿರಂಗಾ ಯಾತ್ರೆಯು ಯಶಸ್ವಿಯಾಗಿ ನಡೆಯಿತು.
ಇಲ್ಲಿನ ಶಿವಬೋಧರಂಗ ಕಾಲೇಜಿನಿಂದ ಆರಂಭಗೊಂಡ ತಿರಂಗಾ ಯಾತ್ರೆಯು ಕಲ್ಮೇಶ್ವರ ವೃತ್ತದವರೆಗೆ ಸಂಚರಿಸಿತು. ಸೈನಿಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ದೇಶದ ಪರ ಘೋಷಣೆಗಳು ಮೊಳಗಿದವು. ಭಾರತ ಮಾತಾ ಕೀ ಜೈ, ವಂದೇ ಮಾತರಂ, ಟೀಚರ ಟೀಚರ್ ಲಿಟಲ ಸ್ಟಾರ್ ಇಂಡಿಯನ್ ಆರ್ಮಿ ಸೂಪರ್ ಸ್ಟಾರ್, ಜೈ ಜವಾನ್, ಜೈ ಕಿಸಾನ್ ಎಂಬ ಘೋಷ ವಾಕ್ಯದೊಂದಿಗೆ ಬ್ರಹತ್ ಗಾತ್ರದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಂಘ – ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಪಕ್ಷಾತೀತವಾಗಿ ಹೆಮ್ಮೆಯ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಿದರು.
ಸಂಜೆಯ ಹೊತ್ತಿಗೆ ಇಲ್ಲಿನ ಕಲ್ಮೇಶ್ವರ ವೃತ್ತದ ಬಳಿ ದೇಶಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಮ್ಮ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಿಂದ ಕೆಚ್ಚೆದೆಯ ಹೋರಾಟದಿಂದ ನಮ್ಮ ಸೈನಿಕರು ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದ ಮೇಲೆ ಅಪರೇಷನ್ ಸಿಂಧೂರ ನಡೆಸುವ ಮೂಲಕ ನಮಗಾದ ನೋವಿಗೆ ಪ್ರತೀಕಾರ ತೀರಿಸಿಕೊಂಡರು. ನಮ್ಮ ಸೈನಿಕರ ದಾಳಿಗೆ ಅಕ್ಷರಶಃ ಪಾಕ್ ಕಂಗಲಾಯಿತು. ಅಷ್ಟೊಂದು ತಾಕತ್ತು ನಮ್ಮ ಸೈನಿಕರಲ್ಲಿದೆ. ನಮ್ಮ ದೇಶವನ್ನು ಭಯೋತ್ಪಾದಕರಿಂದ ರಕ್ಷಣೆ ಮಾಡುತ್ತಿರುವ ನಮ್ಮ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಲು ಮೂಡಲಗಿಯಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಮಳೆಯನ್ನು ಸಹ ಲೆಕ್ಕಿಸದೆ ಸೈನಿಕರಿಗೆ ಗೌರವ ನೀಡಲು ಯಾತ್ರೆಯಲ್ಲಿ ಭಾಗವಹಿಸಿದ ಸಾರ್ವಜನಿಕರು, ಮತ್ತು ದೇಶ ಪ್ರೇಮಿಗಳಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು.
ನಮ್ಮ ದೇಶವು ನಿಂತಿರುವುದೇ ನಮ್ಮ ಸೈನಿಕರಿಂದ, ತಮ್ಮ ಜೀವದ ಹಂಗು ತೊರೆದು ದೇಶದ ರಕ್ಷಣೆಯನ್ನು ಮಾಡುತ್ತಿರುವ ಸೈನಿಕರಿಗೊಂದು ಸಲಾಂ ಎಂದ ಬಾಲಚಂದ್ರ ಜಾರಕಿಹೊಳಿ ಅವರು, ಭಾರತ ಮಾತೆಯನ್ನು ಪೂಜಿಸುತ್ತಿರುವ ಜವಾನ್ ರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕಾಗಿದೆ. ಜವಾನ್ ಮತ್ತು ಕಿಸಾನ್ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ,
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಶ್ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಮೂಡಲಗಿ ಪುರಸಭೆ ಅಧ್ಯಕ್ಷೆ ಖುರ್ಷದಾ ಅನ್ವರ್ ನದಾಫ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಮುಖಂಡರಾದ ರವೀಂದ್ರ ಸೋನವಾಲ್ಕರ, ಆರ್. ಬೀ. ಹಂದಿಗುಂದ, ಗೋವಿಂದ ಕೊಪ್ಪದ, ರವಿ ಸಣ್ಣಕ್ಕಿ, ಸಂತೋಷ ಸೋನವಾಲ್ಕರ, ಹಣಮಂತ ಗುಡ್ಲಮನಿ, ಈರಣ್ಣ ಅಂಗಡಿ, ಈರಣ್ಣ ಬನ್ನೂರ, ಲಕ್ಷ್ಮಣ ಅಡಿಹುಡಿ, ಮರೆಪ್ಪ ಮರೆಪ್ಪಗೋಳ, ಪ್ರಶಾಂತ್ ನಿಡಗುಂದಿ, ಮಹಾಂತೇಶ ಕುಡಚಿ, ಪುರಸಭೆಯ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಮೂಡಲಗಿ ಮತ್ತು ಸುತ್ತಮುತ್ತಲಿನ ಪ್ರಮುಖರು ಸೇರಿದಂತೆ ಹಲವರು ಉಪಸ್ಥಿತರಿದ್ದರು.