ಮುನವಳ್ಳಿಃ ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಚನ್ನಬಸವ ಮಹಶಾಸ್ವಾಮೀಜಿ ಪದವಿ ಮಹಾವಿದ್ಯಾಲಯದ ಹಿಂದಿನ ಪ್ರಾಚಾರ್ಯರಾದ ಡಾ.ಅಜೇಯ ಅಬ್ಬಾರ ಅವರಿಗೆ ರಾಷ್ಟ್ರೀಯ ಪ್ರೇರಣಾ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಸೋಮಶೇಖರ ಮಠದಲ್ಲಿ ಪೂಜ್ಯರಾದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಸನ್ಮಾನಿಸಿ ಗುರುರಕ್ಷೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಕೆ.ಬಿ.ನಲವಡೆ, ಎಂ.ಎಚ್.ಪಾಟೀಲ, ಶ್ರೀಶೈಲ ಗೋಪಶೆಟ್ಟಿ, ಶಂಕರ ಅಪ್ಪೋಜಿ, ಶೇಖರ ಮುಪ್ಪೈನವರಮಠ ಮೊದಲಾದವರು ಉಪಸ್ಥಿತರಿದ್ದರು.