ಬೃಹತ್ ಸರ್ವ ಧರ್ಮ ವಧು-ವರರ ಮುಖಾಮುಖಿ ಸಮಾವೇಶ

Must Read

ಮೂಡಲಗಿ : ನಮ್ಮ ಕನ್ನಡಿಗರ ಬಳಗ ಹಾಗೂ ಬನವಿ ಫೌಂಡೇಷನ್ ಗೋಕಾಕ್ ಸಂಯುಕ್ತಾಶ್ರಯದಲ್ಲಿ ರವಿವಾರ ದಿ.೧೪ರಂದು ಬೆಳಗಾವಿ ನಗರದಲ್ಲಿ ಉಚಿತವಾಗಿ ಬೃಹತ ಸರ್ವ ಧರ್ಮ ವಧು-ವರರ ಮುಖಾಮುಖಿ ಸಮಾವೇಶ ಏರ್ಪಡಿಸಲಾಗಿದೆ ಎಂದು ನಮ್ಮ ಕನ್ನಡಿಗರ ಬಳಗ ಹಾಗೂ ಬನವಿ ಫೌಂಡೇಶನ್ ರಾಜ್ಯಾಧ್ಯಕ್ಷ ಬಾಲಚಂದ್ರ ಬನವಿ ತಿಳಿಸಿದರು.

ಮಂಗಳವಾರದಂದು ಪಟ್ಟಣದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಧು-ವರರ ಸಮಾವೇಶವನ್ನು ಬೆಳಿಗ್ಗೆ ೧೦-೦೦ ರಿಂದ ಸಂಜೆ ೪-೦೦ ಫಂಟೆಯವರೆಗೆ ಬೆಳಗಾವಿಯ ಶ್ರೀ ಶಿವಬಸವ ಶಿವಾಲಯ ನವಗ್ರಹ ಮಂದಿರ, ದೇವರಾಜ ಅರಸ ಬಡಾವಣೆ, ಬಸವನ ಕುಡಚಿ, (ಸಾಂಬ್ರಾ ರೋಡ)ನಲ್ಲಿ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ವಯೋಮಿತಿ ಮೀರಿದವರು, ವಿಕಲಚೇತನರು, ವಿಚ್ಚೇದಿತರು, ಮರು ವಿವಾಹ ಬಯಸುವ ಗಂಡು ಅಥವಾ ಹೆಣ್ಣು ಭಾಗವಹಿಸಬಹುದು.

ಭಾಗವಹಿಸಲಿಚ್ಚಿಸುವ ವಧು-ವರರು ತಮ್ಮ ಇತ್ತೀಚಿನ ಪೂರ್ಣ ಭಾವಚಿತ್ರ, ದೂರವಾಣಿ ಸಂಖ್ಯೆ, ಸಂಪೂರ್ಣ ವಿವರಗಳೊಂದಿಗೆ ದಿ.೧೧ ರೊಳಗೆ ಮೊಬೈಲ್ ಸಂಖ್ಯೆ ೭೭೬೦೫೨೭೧೪೯, ೯೧೬೪೨೦೬೪೨೧ ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದಾಗಿದ್ದು, ಸಮಾವೇಶದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಮ್ಮ ಕನ್ನಡಿಗರ ಬಳಗದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪರಿದಾ ನದಾಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಶಿಗ್ಗಾಂವಿ, ಮಹಿಳಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಶಿಗ್ಗಾಂವಿ, ಮೂಡಲಗಿ ತಾಲೂಕಾ ಅಧ್ಯಕ್ಷ ಅಜೀತ್ ಬಡಿಗೇರ, ಗೋಕಾಕ ತಾಲೂಕಾ ಅಧ್ಯಕ್ಷ ಅರುಣ ಮಾದರ, ಗೋಕಾಕ ತಾಲೂಕಾ ರೈತ ಘಟಕದ ಅಧ್ಯಕ್ಷ ಯಲ್ಲಪ್ಪ ಬೀರನಗಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group