ಸಿಂದಗಿ – ಮಕ್ಕಳು ನಮ್ಮ ಸುತ್ತಮತ್ತ ಪರಿಸರದ ವಾತಾವರಣದಲ್ಲಿ ಸಸಿ ನೆಡುವುದು ಹಾಗೂ ನೀರುಣಿಸುವುದರ ಜೊತೆಗೆ ಅವುಗಳ ರಕ್ಷಣೆ ಮಾಡುವುದು. ನಮ್ಮ ಆದ್ಯ ಕರ್ತವ್ಯವಾಗಬೇಕು. ಪುರಾಣ ಕಥೆಗಳ ಮೂಲಕ ನಮ್ಮಲ್ಲಿ ಜ್ಞಾನ ಹಾಗೂ ಮೌಲ್ಯಾಧಾರಿತ ಗುಣಗಳು ಬೆಳೆಯಲು ಸಹಕಾರಿಯಾಗುವುದು ಎಂದು ಬೆಂಗಳೂರಿನ ನುರಿತ ಶಿಕ್ಷಣ ತಜ್ಞರಾದ ಡಾ. ಗಣೇಶ ಭಟ್ಟ ಹೇಳಿದರು.
ಪಟ್ಟಣ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಮಾರ್ಗದರ್ಶನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳ ಕಲಿಕೆಯ ಸರಳ ವಿಧಾನ ಜೊತೆಗೆ ಕೌಶಲ್ಯ ಭರಿತ ಶಿಕ್ಷಕರು ಕಲಿಸುವಿಕೆ ವಿಧಾನ, ಸರಳ ಹಾಗೂ ವಿನೂತನ ರೀತಿಯ ತರಬೇತಿಯಲ್ಲಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬೆಂಗಳೂರಿನ ಜೀವಶಾಸ್ತ್ರ ನುರಿತ ತಜ್ಞರಾದ ಪ್ರಕಾಶ ಎಂ.ಬಿ ಮಾತನಾಡಿ, ಜ್ಞಾನವೆಂಬುವುದು ಅತ್ಯಂತ ಹರಿತವಾದ ಆಯುಧ ಜೀವನದಲ್ಲಿ ಯಶಸ್ವು ಗಳಿಸಬೇಕಾದರೆ ಅಕ್ಷರದ ಜ್ಞಾನ ಅವಶ್ಯಕವಾಗಿ ಪಡೆದು ಕೊಳ್ಳಬೇಕು ಹಾಗೂ ಈ ಸುಂದರ ಸಮಾಜದಲ್ಲಿ ನಮ್ಮ ಬದುಕು ಹಸನಾಗಬೇಕಾದರೆ ಶಿಕ್ಷಣ ತುಂಬಾ ಅವಶ್ಯವಾದದ್ದು ಎಂದರು.
ಬೆಂಗಳೂರಿನ ನುರಿತ ಇಂಗ್ಲೀಷ ಪ್ರಾಧ್ಯಾಪಕಿ ಕವಿತಾ ಎಸ್. ಮಾತನಾಡಿ, ಭಾಷಾ ಕೌಶಲ್ಯ ಬೆಳೆಯಲು ಕ್ರಮಬದ್ಧತೆ, ವಾಕ್ಯ ರಚನೆ, ಸರಳ ಮತ್ತು ಸ್ಪಷ್ಟ ತೆಗೆ ವ್ಯಾಕರಣ ಕಲಿಕೆ ತುಂಬಾ ಅವಶ್ಯವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಶಾಲೆಯ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿಗೆ ಕೇವಲ ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು ಅದರ ಜೊತೆ ಸಮಾಜದಲ್ಲಿ ಸಮರ್ಥರಾಗಿ ಬೆಳೆಯಲು ಕೌಶಲ್ಯ ಭರಿತ ತರಬೇತಿ ತುಂಬಾ ಅವಶ್ಯವಾಗಿದೆ, ಏಕೆಂದರೆ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಭರಿತ ಶಿಕ್ಷಣ ನೀಡಬೇಕಾಗಿದೆ ಹಾಗೂ ಮಗು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಶಾಲೆಯ ಪ್ರಾಂಶುಪಾಲೆ ಶಾಹಿನ್ ಶೇಖ್, ಶಿಕ್ಷಕರು ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದರು.

