ಮೂಡಲಗಿ – ದಿ. ರಂದು ಬರ್ಡ್ಸ್ ಬಿ ಎಸ್ ಡಬ್ಲ್ಯೂ ಕಾಲೇಜ್ ಕ್ಯಾಂಪಸ್ ತುಕ್ಕಾನಟ್ಟಿ ಯಲ್ಲಿ ಬರ್ಡ್ಸ್ ಬಿ. ಎಸ್. ಡಬ್ಲ್ಯೂ 2010 ನೇ ಇಸವಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗು ಹಳೇ ವಿದ್ಯಾರ್ಥಿಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು ಹಾಗೂ ಪ್ರಸ್ತುತ ಯಾವ ಇಲಾಖೆಗಳಲ್ಲಿ ಯಾವ ಕಂಪನಿಗಳಲ್ಲಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವ್ಯಕ್ತಪಡಿಸಿದರು ಹಾಗೂ ಸಮಾಜ ಕಾರ್ಯ ಶಿಕ್ಷಣದ ಕುರಿತು ಮುಂದಿನ ಬದಲಾವಣೆಯಲ್ಲಿ ತರುವಲ್ಲಿ ಅವರವರ ಪಾತ್ರದ ಬಗ್ಗೆ ಚರ್ಚೆ ಮಾಡಿದರು. ನಂತರ ಗುರುವಂದನಾ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆರ್. ಎಂ. ಪಾಟೀಲ, ಮುಖ್ಯಅತಿಥಿಗಳಾಗಿ ಬಿ. ಕೆ. ಬರ್ಲಾಯ ಹಾಗು ಎಸ್. ಜಿರಲೆಮಠ ಹಾಗು ಇನ್ನುಳಿದ ಕಾಲೇಜ ಸಿಬ್ಬಂದಿಗಳು ಭಾಗವಹಿಸಿದ್ದರು.
ಹಳೇ ವಿದ್ಯಾರ್ಥಿಗಳಿಂದ ಕಾಲೇಜಿನ ಎಲ್ಲಾ ಶಿಕ್ಷಕರನ್ನು ಸತ್ಕಾರ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿಗೆ ಹಾಗು ಕಷ್ಟದಲ್ಲಿರುವ ಎರಡು ಕುಟುಂಬಗಳಿಗೆ ಧನ ಸಹಾಯ ಮಾಡಲಾಯಿತು.