ನವಂಬರ್ 20ರಂದು ಹಂಸ ಸಾಂಸ್ಕೃತಿಕ -ಸಾಮಾಜಿಕ ಸಿಂಚನ

Must Read
 70ನೇ ಕನ್ನಡ ನಾಡ ಹಬ್ಬ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ 
     ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಹಂಸ ಜ್ಯೋತಿ ಟ್ರಸ್ಟ್ 70ನೇ ಕನ್ನಡ ನಾಡ ಹಬ್ಬದ ಪ್ರಯುಕ್ತ ಹಂಸ ಸಾಂಸ್ಕೃತಿಕ ಸಾಮಾಜಿಕ ಸಿಂಚನ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಹಣ್ಣು ಹಂಪಲು ಬನ್ನು ಮತ್ತು ಸಿಹಿ ವಿತರಣೆ ಕಾರ್ಯಕ್ರಮವನ್ನು ನವಂಬರ್ 20 ಗುರುವಾರ ಬೆಳಗ್ಗೆ ಒಂಬತ್ತು ಗಂಟೆಗೆ ಆಯೋಜಿಸಿದೆ.
    ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿರ್ದೇಶಕ ಡಾ. ಟಿ ನವೀನ್ ಸಮಾರಂಭ ಉದ್ಘಾಟಿಸಲಿದ್ದು ಹಿರಿಯ ರಂಗ ಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ ಮತ್ತು ನೃತ್ಯಪಟು ಡಾ. ಶ್ರೀಧರ್, ಲವ್ಲಿ ಸ್ಟಾರ್ ಪ್ರೇಮ್, ವಿದ್ಯಾರ್ಥಿ ಭವನದ ಮಾಲೀಕ ರಾಮಕೃಷ್ಣ ಅಡಿಗ, ಮಾಜಿ ಶಾಸಕ ಎಸ್ ಬಾಲರಾಜ್, ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಲ್ ನರಸಿಂಹಮೂರ್ತಿ, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ ನ ವ್ಯವಸ್ಥಾಪಕ ನಿರ್ದೇಶಕ ಕೆ ಬಾಲಾಜಿ ಬಾಬು, ವಾಣಿಜ್ಯೋದ್ಯಮಿ ಎಸ್ ಟಿ ಉದಯಕುಮಾರ್, ಸಮಾಜಸೇವಕ ಎಂ ಜಯಕುಮಾರ್, ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷ ಎನ್ ಜಗದೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಕೆ ಮತ್ತು ಆರ್ ಗೀತಾ, ಚಲನಚಿತ್ರ ನಿರ್ಮಾಪಕಿ ಡಾ.ಸುಕನ್ಯಾ ಹಿರೇಮಠ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ನಿರ್ವಾಹಕಿ ಶ್ರೀ ಲಕ್ಷ್ಮಿ ಪ್ರಸಾದ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
 ಗಾಯಕರಾದ ಸ್ವಪ್ನ,ಮಂಜುನಾಥ್, ಐಶ್ವರ್ಯ, ರವಿ ಇಗ್ಗಲೂರು,ಸದಾನಂದ ಜಿ ಕುರುಡಿಕೆರೆ,ಎಸ್ ಶ್ರೀನಿವಾಸಮೂರ್ತಿ ಕನ್ನಡ ಗೀತೆಗಳ ಗಾಯನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಆಯೋಜಕರಾದ ಹಂಸ ಜ್ಯೋತಿ ಟ್ರಸ್ಟ್ ನ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಎಂ ಮುರುಳಿಧರ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ, ವಿಜಯ ಮುರುಳಿಧರ ತಿಳಿಸಿದ್ದಾರೆ. ವಿವರಗಳಿಗೆ – 9448093409

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group