ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಗಿ ಎಚ್ ಆರ್ ಪೆಟ್ಲೂರ್ ಆಯ್ಕೆ

Must Read

ಸವದತ್ತಿ: ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಎಚ್. ಆರ್. ಪೆಟ್ಲೂರ್ ಆಯ್ಕೆ ಯಾದರು. ನಿಕಟ ಪೂರ್ವ ಅಧ್ಯಕ್ಷ ರಾದ ಸುರೇಶ ಬೆಳವಡಿಯವರು ನಿವೃತ್ತಿ ಯಿಂದ ತೆರವಾದ ಸ್ಥಾನಕ್ಕೆ ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕ ಆನಂದ ಮಾಮನಿಯವರ ಮಧ್ಯಸ್ಥಿಕೆ ಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಜಯಕುಮಾರ್ ಹೆಬಳಿ.ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ ಸೇರಿದಂತೆ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಸೇರಿ ಅವಿರೋಧವಾಗಿ ಎಚ್. ಆರ್. ಪೆಟ್ಲೂರ್ ರನ್ನು ಆಯ್ಕೆ ಮಾಡಲಾಯಿತು.

ಕ್ರಿಯಾಶೀಲ ವ್ಯಕ್ತಿ ಯಾದ ಪೆಟ್ಲೂರ್ ರವರು ಶಿಕ್ಷಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಜನಿತ ರಾಗಿದ್ದು ಕಲಾವಿದರೂ ಉತ್ತಮ ಬೋಧಕರೂ ಆಗಿರುವರು. ಅವಿರೋಧವಾಗಿ ಆಯ್ಕೆ ಯಾದ ಪೆಟ್ಲೂರ್ ಅವರನ್ನು ಜಿಲ್ಲಾ ಅಧ್ಯಕ್ಷ ಜಯಕುಮಾರ್ ಹೆಬಳಿ. ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ. ಸುರೇಶ ಬೆಳವಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಆನಂದ ಮೂಗಬಸವ ಸಿ. ವ್ಹಿ. ಬಾರ್ಕಿ.ನಾಗರತ್ನ ಕುಸುಗಲ್ ಜಗದೀಶ ಗೋರೋಬಾಳ ಸೇರಿದಂತೆ ಎಲ್ಲರೂ ಸೇರಿ ಮೈಸೂರು ಪೇಟ ಹಾಕಿ ಸನ್ಮಾನ ಮಾಡಿ ಅಭಿನಂದಿಸಿ ಶುಭ ಕೋರಿದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group