ಮೂಡಲಗಿ – ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ ಭಾಗವಹಿಸಬೇಕು ಏಕೆಂದರೆ ಒಬ್ಬ ವ್ಯಕ್ತಿ ಸದೃಢವಾದ ಆರೋಗ್ಯವನ್ನು ಹೊಂದಬೇಕಾದರೆ ಅವನಿಗೆ ಮೊದಲು ಕ್ರೀಡೆಯ ಅವಶ್ಯಕತೆ ಇರುತ್ತದೆ ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಯಲ್ಲಿ ಭಾಗವಹಿಸಿದರೆ ಅದು ತನ್ನ ದೇಹವು ಕೂಡ ಸಕಾರಾತ್ಮಕವಾಗಿ ಸ್ಪಂದನೆಯನ್ನು ನೀಡುತ್ತದೆ ಮತ್ತು ಜ್ಞಾನದ ಗ್ರಹಿಕೆ ಹೆಚ್ಚಾಗುತ್ತದೆ ಎಂದು ಮೂಡಲಗಿ ತಾಲೂಕಾ ಪ್ರೌಢಶಾಲಾ ದೈಹಿಕ ಶಿಕ್ಷಕರ ಅಧ್ಯಕ್ಷ ಎಂ ಎಸ್ ಮುತ್ತಣ್ಣವರ ಹೇಳಿದರು.
೨೦೨೫-೨೬ ನೇ ಸಾಲಿನ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು
ಅದೇ ರೀತಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿ ಆರ್ ಸೋನವಾಲ್ಕರ್ ರವರು ಪ್ರತಿ ವಿದ್ಯಾರ್ಥಿಯು ಪಾಠದೊಂದಿಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಕ್ರೀಡೆಯಿಂದ ಶರೀರ ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗುತ್ತದೆ. ಆದರೆ ಈಗಿನ ಕಾಲದ ಮಕ್ಕಳು ಕ್ರೀಡೆಯಿಂದ ದೂರ ಉಳಿಯುತ್ತಿದ್ದಾರೆ ಏಕೆಂದರೆ ಅವರಿಗೆ ಓದು ಮತ್ತು ಮೊಬೈಲ್‌ಗಳಿಂದ ವಿದ್ಯಾರ್ಥಿಗಳ ಜೀವನ ಕ್ರೀಡೆಯಿಂದ ವಿಮುಕ್ತಿಯನ್ನು ಹೊಂದುತ್ತಿದ್ದಾರೆ ಆದರೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಪಾಠದೊಂದಿಗೆ ಭಾಗವಹಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಸನದಿ ದೈಹಿಕ ಉಪನ್ಯಾಸಕರ ಸಂಘದ ಖಜಾಂಚಿ ಚಿಕ್ಕೋಡಿ ಮತ್ತು ಎಂ ಜಿ ಬಾಳೋಜಿ ದೈಹಿಕ ಉಪನ್ಯಾಸಕರು ಬಿ ಎನ್ ಕೆ ಮುಗುಳಖೋಡ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎ ವಿ ಹೊಸಕೋಟಿ , ವಿ ಎ ಸೋನವಾಲ್ಕರ, ಎಸ್ ವಿ ಹೊಸೂರ, ಮತ್ತು ಅನಿಲ ಸತರಡ್ಡಿ ಮತ್ತು ಕಾಲೇಜಿನ ಪ್ರಾಚಾರ್ಯರಾದ ಎಂ ಎಸ್ ಪಾಟೀಲ ಮತ್ತು ಬಿ ಜಿ ಗಡಾದ, ಎಸ್ ಕೆ ಹಿರೇಮಠ, ಡಾಕ್ಟರ್ ಆರ್ ಪಿ ಬಿರಾದಾರ, ಎಚ್ ಡಿ ಚಂದರಗಿ, ಎಲ್ ಆರ್ ಧರ್ಮಟ್ಟಿ, ಎಚ್ ಎಂ ಹತ್ತರಕಿ ಹಾಗೂ ಇತರೆ ದೈಹಿಕ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

