Homeಸುದ್ದಿಗಳುವಿಕಲಚೇತರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ - ಶಾಸಕ ಮನಗೂಳಿ

ವಿಕಲಚೇತರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ – ಶಾಸಕ ಮನಗೂಳಿ

ಸಿಂದಗಿ: ವಿಕಲಚೇತನರು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾ ಪಂ ಕಾರ್ಯಾಲಯದಲ್ಲಿ ಭಾರತ ಸರಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯ ನವದೆಹಲಿ ಹಾಗೂ ಅಲಿಮ್ಕೋ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಅಡಿಪ್ ಯೋಜನೆಯ ‘ಸಾಮಾಜಿಕ ಅಧಿಕಾರಿತಾ ಶಿಬಿರ’ ಅಡಿಯಲ್ಲಿ ವಿಕಲಚೇತನರಿಗೆ ವೈದ್ಯಕೀಯ ಶಿಬಿರಗಳನ್ನು ನಡೆಸಿ ಅವರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಸಿಂದಗಿ ನಗರದ ತಾಲೂಕ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಜರುಗಿತು.

ಸಿಂದಗಿ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಇವರು ಸದರಿ ಕಾರ್ಯಕ್ರಮ ಉದ್ಘಾಟಿಸಿ ವಿಕಲಚೇತನರು ಮುಖ್ಯವಾಹಿನಿಗೆ ಬರಬೇಕಾದರೆ ಅವರಿಗೆ ಅವಶ್ಯವಿರುವ ಸಾಧನ ಸಲಕರಣೆ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕವಾಗಿ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ್ದದ್ದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಾತನಾಡಿದರು. ಹಾಗೂ ಸುಮಾರು 275 ಜನ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳಾದ ಟ್ರೈಸಿಕಲ್, ಬ್ಯಾಟರಿಚಾಲಿತ್ ವ್ಹೀಲ್ ಚೇರ್, ವ್ಹೀಲ್ ಚೇರ್, ಕ್ಯಾಲಿಪರ್, ಬಗಲು ಬಡಿಗೆ, ವಾಕಿಂಗ್ ಸ್ಟಿಕ್, ವಾಕರ್, ಕಮಾಡ ಚೇರ್, ಶ್ರವಣ ಸಾಧನ ಯಂತ್ರ ಹಾಗೂ ಇನ್ನೀತರ ಅವಶ್ಯವಿರುವ ಸಾಧನ ಸಲಕರಣೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಅವರು ಮಾತನಾಡಿ ಸಿಂದಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ 21 ಬಗೆಯ ವಿಕಲಚೇತನರ ಸರ್ವೆ ಕಾರ್ಯ ವ್ಹಿ.ಆರ್.ಡಬ್ಲೂ ಗಳ ಮೂಲಕ ಮಾಡಲಾಗಿದ್ದು, ಯಾರಿಗೆ ಯಾವ ತರಹದ ಸಾಧನ ಸಲಕರಣೆಗಳ ಅವಶ್ಯಕತೆ ಎಂಬುದನ್ನು ಗುರುತಿಸಲಾಗಿದ್ದು ಮುಂದಿನ ದಿನಮಾನಗಳಲ್ಲಿ ಇನ್ನುಳಿದ ಎಲ್ಲ ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ಸಂಪೂರ್ಣವಾಗಿ ವಿತರಿಸಿ ಅವರಿಗೆ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಸ್.ಎನ್. ಕೋರವಾರ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಲಿಮ್ಕೋ ಸಂಸ್ಥೆಯ ಜನರಲ್ ಮ್ಯಾನೇಜರ್ ಆದರ್ಶ, ಜೂನಿಯರ್ ಮ್ಯಾನೇಜರ್ ಅಂಕಿತರಾಯ್, ಮುತ್ತು ಸಾತಿಹಾಳ ಎಂ.ಆರ್. ಡಬ್ಲೂ ಸಿಂದಗಿ ಹಾಗೂ ತಾಲೂಕಿನ ಎಲ್ಲಾ ವ್ಹಿ.ಆರ್.ಡಬ್ಲೂ ಗಳು, ಸಾಧನ ಸಲಕರಣೆಗೆ ಆಯ್ಕೆಯಾದ ಫಲಾನುಭವಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

close
error: Content is protected !!
Join WhatsApp Group