ಹಾರಕೊಡ ಜಾತ್ರೆ ಕಂಟಕವಾಯಿತೆ ? ಎಕ್ಕಂಬಾ ಗ್ರಾಮದಲ್ಲಿ ಸೇರಿದ ಸಾವಿರಾರು ಜನರಿಂದ ಕರೋನ ಮಹಾ ಸ್ಪೋಟ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕರೋನ ಮಹಾ ಸ್ಪೋಟಕ್ಕೆ ಕಾರಣೀಕರ್ತರು ಯಾರು ಎಂಬುದನ್ನು ಹುಡುಕುತ್ತಾ ಹೋದರೆ ರಾಜಕಾರಣಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರತ್ತ ಬೊಟ್ಟು ಮಾಡಬೇಕಾಗುತ್ತದೆ.

ಮೊದಲನೇ ಕಾರಣ ಹಾರಕೊಡ ಜಾತ್ರೆ:

ಈ ಹಾರಕೊಡ ಜಾತ್ರೆಯಲ್ಲಿ ನಡೆಯಲು ಕಾರಣ ಕರ್ತರು ಯಾರು ? ಈ ಜಾತ್ರೆಯಲ್ಲಿ ಸಾವಿರಾರು ಜನರು ಸೇರಿ ರಥೋತ್ಸವ ಮಾಡುತ್ತಾರೆ ಆದರೆ ಪೊಲೀಸ ಇಲಾಖೆ ಕರೋನ ನಿಯಮ ಉಲಂಘನೆ ಮಾಡಿದವರ ವಿರುದ್ಧ ಇನ್ನೂ ಪ್ರಕರಣ ದಾಖಲು ಮಾಡಲಿಲ್ಲ.

ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದ ಶಾಸಕ ಶರಣು ಸಲಗರ ಮತ್ತು ಬಸವಕಲ್ಯಾಣ ತಾಲೂಕಾ ದಂಡಾಧಿಕಾರಿ ಸಾವಿತ್ರಿ ಸಲಗರ ಹಾಗೂ ಹುಮನಬಾದ ಶಾಸಕ ಕಾಂಗ್ರೆಸ್ ಪಕ್ಷದ ರಾಜಶೇಖರ ಪಾಟೀಲ ಇವರೆಲ್ಲರೂ ಕಾರಣರೆನ್ನಬಹುದು. ಹಾರಕೊಡ ಜಾತ್ರೆಯಲ್ಲಿ ನಿಯಮ ಉಲ್ಲಂಘನೆ ಮಾಡಿದರೂ ಕೂಡ ಜಿಲ್ಲಾ ಆಡಳಿತ ಇವರ ವಿರುದ್ಧ ಪ್ರಕರಣ ದಾಖಲು ಮಾಡಲಿಲ್ಲ ಈ ಬಗ್ಗೆ ಬೀದರ್ ಜನರಲ್ಲಿ ಅಸಮಾಧಾನದ ಚರ್ಚೆ ನಡೆಯುತ್ತಿದೆ ಜಿಲ್ಲಾ ಆಡಳಿತ ರಾಜಕಾರಣಿಗಳ ವಿರುದ್ಧ ಯಾಕೆ ಪ್ರಕರಣ ದಾಖಲು ಮಾಡಲಿಲ್ಲ? ಬಡವರು ರಸ್ತೆಯ ಮೇಲೆ ಬೈಕ್ ತೆಗೆದುಕೊಂಡು ಹೋದರೆ ಒಂದು ಸಾವಿರ ದಂಡ ಹಾಕುತ್ತಾರೆ. ಇವಾಗ ಹಾರಕೊಡ ಜಾತ್ರೆಯಲ್ಲಿ ಕರೋನ ನಿಯಮ ಉಲ್ಲಂಘನೆ ಮಾಡಿದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ ? ಜನರಿಗೊಂದು ನಿಯಮ, ರಾಜಕಾರಣಿಗಳಿಗೊಂದು ನಿಯಮವೇ ಎಂದು ಬೀದರ್ ಜನರಲ್ಲಿ ಚರ್ಚೆ ಗೆ ಗ್ರಾಸವಾಗಿದೆ..

ಹಾರಕೊಡ ಸ್ವಾಮಿಗಳು ಈ ವರ್ಷ ಹಾರಕೊಡ ಜಾತ್ರೆ ನಡೆಯುವುದಿಲ್ಲ ಎಂದು ಹೇಳಿದ್ದರು… ಆದರೆ ಅದ್ದೂರಿ ಯಾಗಿ ಜಾತ್ರೆ ನಡೆಯುತ್ತದೆ.ಭಕ್ತರು ಹಾರಕೊಡ ಜಾತ್ರೆ ನಡೆಯುವುದು ಇಲ್ಲ ಎಂದು ಹೇಳಿದ್ದರೂ ಭಕ್ತರ ದಂಡು ಜಾತ್ರೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯಲ್ಲಿ ಸಾವಿರಾರು ಜನರು ಸೇರಿ ರಥೋತ್ಸವ ಮಾಡಿದರು.ಪೊಲೀಸ ಇಲಾಖೆ ಕಣ್ಣು ಮುಚ್ಚಿ ಕುಳಿತಿತ್ತು. ಇನ್ನೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರೂರು ಎಕ್ಕಂಬಾ ಗ್ರಾಮದಲ್ಲಿ ದಂಡಿ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನು ಸೇರಿಸಿದರು ಅಲ್ಲಿ ಕರೋನ ನಿಯಮ ಉಲಂಘನೆ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿಲ್ಲಾ ಉಸ್ತುವಾರಿ ಸಚಿವ ವಿರುದ್ಧ ಔರಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯ ಮಾಡಿದರು. ಪ್ರಕರಣ ದಾಖಲು ಮಾಡಲಿಲ್ಲ ಜಿಲ್ಲಾ ಆಡಳಿತ.

ಇವು ಎಲ್ಲಾ ಘಟನೆ ನೋಡಿದರೆ ಬೀದರ್ ಜಿಲ್ಲೆಗೆ ಕರೋನ ಮಹಾ ಸ್ಪೋಟಕೆ ಕಾರಣ ಕರ್ತರು ಬೇರಾರೂ ಅಲ್ಲ ಇದೇ ರಾಜಕಾರಣಿಗಳು, ಜನ ಪ್ರತಿನಿಧಿಗಳು. ಇವರು ಮಾಡಿದ ತಪ್ಪಿಗೆ ಇವತ್ತು ಬೀದರ್ ಜಿಲ್ಲೆಯ ಜನರು ಕಷ್ಟ ಅನುಭವಿಸಬೇಕಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group