ಮೂಡಲಗಿ:-ಪಟ್ಟಣದ ಗುರ್ಲಾಪೂರ ರಸ್ತೆ, ಕುಮಾರ ಗಿರಡ್ಡಿಯವರ ಜಾಗದಲ್ಲಿ ಹಾಕಿರುವ ಸುಂದರ ರಂಗ ಮಂದಿರದಲ್ಲಿ ಸಂತ ಶ್ರೀ ಶಿವಯೋಗಿ ಶರೀಫ ನಾಟ್ಯ ಸಂಘ, ತೆಗ್ಗಿಹಳ್ಳಿ ಆಶ್ರಯದಲ್ಲಿ “ಹಸಿರು ಬಳೆ” ಎಂಬ ಸುಂದರ ಸಾಮಾಜಿಕ ಹಾಸ್ಯಭರಿತ ನಾಟಕದ ಉದ್ಘಾಟನಾ ಸಮಾರಂಭವು ಗುರುವಾರ ದಿನಾಂಕ ಅ.16 ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ.
ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಅವರು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸುವರು, ಬೆಮುಲ್ ಅಧ್ಯಕ್ಷರು ಹಾಗೂ ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸುವರು,ವಿಶೇಷ ಆಹ್ವಾನಿತರಾಗಿ ಗೋಕಾಕ ಲಕ್ಷ್ಮೀ ಎಜ್ಯುಕೇಶನ್ ಸೊಸಾಯಿಟಿ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ , ಉಪ್ಪಾರ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಭರಮಣ್ಣ ಉಪ್ಪಾರ ಆಗಮಿಸುವರು ಮತ್ತು ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಕಾಶೀಮಅಲಿ ಸೊಸಾಯಿಟಿ ಅಧ್ಯಕ್ಷ ಅನ್ವರ ನದಾಫ್, ಜಾನಪದ ಕಲಾವಿದ ಶಬ್ಬೀರ್ ಡಾಂಗೆ, ಉದ್ದಿಮೆದಾರ ಕುಮಾರ ಗಿರಡ್ಡಿ, ತುಕ್ಕಾನಟ್ಟಿಯ ಗಂಗಾರಾಮ ಗುಡಗುಡಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಪಿ ಎಸ್ ಐ ರಾಜು ಪೂಜೇರಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ. ಎಸ್. ನಾಗನ್ನವರ, ಪುರಸಭೆ ಮಾಜಿ ಉಪಾಧ್ಯಕ್ಷ ಅಜೀಜ ಡಾಂಗೆ, ಹಿರಿಯ ಪತ್ರಕರ್ತರಾದ ಬಾಲಶೇಖರ ಬಂದಿ, ಅಲ್ತಾಫ್ ಹವಾಲ್ದಾರ್, ಹೆಸರಾಂತ ನಿರೂಪಕ ಶಿಕ್ಷಕ ಬಸವರಾಜ ಸಸಾಲಟ್ಟಿ, ಹಿರಿಯ ಕಲಾವಿದ ಗಿರೀಶ ಕರಡಿ ಮತ್ತು ಕಲಾ ಪೋಷಕ ಚನವೀರ(ಅಜ್ಜಪ್ಪ) ಅಂಗಡಿ ಉಪಸ್ಥಿತರಿರುವರು.
ಕೇವಲ ಎರಡು ದಿನ ಮಾತ್ರ ಅ.16 ಮತ್ತು 17 ರಂದು ಎರಡು ದಿನ ಸಂಚಾಲಕಿ ಆಶಾರಾಣಿ ವಿಜಯಪುರ ಅವರ ನೇತೃತ್ವದಲ್ಲಿ ನಡೆಯುವ ಹಸಿರು ಬಳೆ ನಾಟಕದಲ್ಲಿ “ಮಜಾ ಭಾರತ” “ಮಜಾ ಟಾಕೀಸ್” “ಗಿಚ್ಚ ಗಿಲಗಿಲಿ” ಮತ್ತು “ಭರ್ಜರಿ ಬ್ಯಾಚುಲರ್” ಸೀಜನ್ ನಂ 1 ಖ್ಯಾತಿಯ ರಾಗಿಣಿ (ರಾಘು) ಇವರು ಮುಖ್ಯ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಂಪನಿ ಮಾಲೀಕರಾದ ಖತಾಲಸಾಬ ಬಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.