ಆರೋಗ್ಯವೇ ನಿಜವಾದ ಸಂಪತ್ತು – ಡಾ ಸುರೇಶ ನೆಗಳಗುಳಿ

Must Read

ಉಪ್ಪಪು ದಲ್ಲಿ ಕಣಚೂರ್ ಆಯುರ್ವೇದ ಆಸ್ಪತ್ರೆ ಉಚಿತ ವೈದ್ಯಕೀಯ ಶಿಬಿರ

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಶಾಖೆಯ ಆಶ್ರಯದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ದಿ 11 ಏಪ್ರಿಲ್ ತಿಂಗಳ ಶುಕ್ರವಾರ ಉಚಿತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.

ಮುಂಜಾನೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು
ಆರೋಗ್ಯವೇ ನಿಜವಾದ ಸಂಪತ್ತು. ಇಂತಹ ಸಂಪತ್ತು ನೀಡುವ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ ಕ್ಷಾರ ಕರ್ಮ ಯೋಗ ಪಿಸಿಯೋತೇರಪಿ ಸಹಿತ ಎಲ್ಲಾ ಕಾಯಿಲೆಗಳಿಗೂ ತಜ್ಞ ವೈದ್ಯರಿದ್ದು ಅಗತ್ಯವುಳ್ಳ ರೋಗಿಗಳಿಗೆ ಇದು ವರದಾನವಾಗಿದೆ ಎಂದರು.

ಚೇರ್ಮನ್ ಡಾ ಕಣಚೂರು ಹಾಜಿ ಮೋನು ಹಾಗೂ ನಿರ್ದೇಶಕ ಅಬ್ದುಲ್ ರೆಹಮಾನ್ ರವರ ಸೇವೆ ಅನನ್ಯ, ಹಾಗೆಯೇ ಸಮೀಪದಲ್ಲಿಯೇ ಇದೇ ಆಢಳಿತದ ಆಧುನಿಕ ವೈದ್ಯಕೀಯ ಕಾಲೇಜ್ ಆಸ್ಪತ್ರೆಯೂ ಇರುವುದು ಎಲ್ಲಾ ತರಹದ ಕಾಯಿಲೆಗೂ ಅನುಕೂಲ ಎಂದರು.

ವ್ಯಾಪಾರಿ ಭವನದ ಮುಖ್ಯಸ್ಥರಾದ ಜಬ್ಬಾರ್ ಮಂಡ ಅವರು ಮಾತನಾಡುತ್ತ ಕಣಚೂರು ಆಸ್ಪತ್ರೆ ನಮಗೆ ಚಿಕಿತ್ಸಾ ಸೌಲಭ್ಯ ನೀಡುವುದು ನಮ್ಮ ಊರ ಜನರ ಭಾಗ್ಯ ಹಾಗೂ ಇಲ್ಲಿ ಆಗಾಗ ಶಿಬಿರ ನಡೆಸುವ ಬಗ್ಗೆ ಆಹ್ವಾನ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ ಕಾರ್ತಿಕ್, ಪಂಚಕರ್ಮ ತಜ್ಞ ಡಾ ಜೈನುದ್ದೀನ್, ಡಾ ಆರ್ಯ, ಡಾ ಚರಣ್ ಎಲಿಯಾಣ, ಡಾ ಆನ್ ಮೇರಿ ಅವರು ರೋಗಿಗಳಿಗೆ ಚಿಕಿತ್ಸಾ ಸಲಹೆ ನೀಡಿದರು.

ದಾದಿಯರಾದ ರಕ್ಷಿತಾ ಸುಪ್ರಿಯಾ, ಎಂ ಆರ್ ಡಿ ಯ ಮೌಸೀತಾ ಫಾರ್ಮಸಿ ಯ ಶ್ರಾವ್ಯ, ಝೋಹ್ರ ಅವರು ಸಹಕರಿಸಿದರು
ಸಂಸ್ಥೆಯ ಪಿ ಆರ್ ಒ ಆಗೋಶ್ ಅವರು ಮೇಲುಸ್ತುವಾರಿ ವಹಿಸಿದ್ದರು
ನೂರಾರು ರೋಗಿಗಳು ಉಚಿತ ಚಿಕಿತ್ಸೆ ಪಡೆದರಲ್ಲದೆ ಅಗತ್ಯ ಉಳ್ಳವರಿಗೆ ಉಚಿತ ಒಳರೋಗಿ ಚಿಕಿತ್ಸೆ ನೀಡುವ ಕರೆ ನೀಡಲಾಯಿತು.

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group