ಬೀದರ – ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾರಂಜಾ ಜಲಾಶಯ ಭರ್ತಿಯಾಗಿದೆ. ಮೂರು ಕ್ರಷ್ಟ್ ಗೇಟ್ ಮೂಲಕ 3 ಸಾವಿರ ಕ್ಯೂಸೆಕ್ ನೀರನ್ನು ಮಾಂಜ್ರಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು ನದಿ ಮೈದುಂಬಿಕೊಂಡು ಹರಿಯುತ್ತಿದೆ.
ನದಿ ತೀರದ ಜನರು ಬಟ್ಟೆ ತೊಳೆಯಲು ಜಾನುವಾರುಗಳಿಗೆ ನೀರು ಕುಡಿಸಲು ನದಿಗೆ ಇಳಿಯದಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ
ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಕಾರಂಜಾ ಜಲಾಶಯದಲ್ಲಿ ಒಳಹರಿವು_4000 ಕ್ಯೂಸೆಕ್ ಹೆಚ್ಚಾದ ಹಿನ್ನೆಲೆಯಲ್ಲಿ 3709 ಕ್ಯೂಸೆಕ್ ನೀರನ್ನು ಮಾಂಜ್ರಾ ನದಿಗೆ ಹೊರ ಹರಿ ಬಿಡಲಾಗಿದೆ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ ಬಳಿಯ ಶಿವನ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಮಾಂಜ್ರಾ ನದಿಯ ಪಕ್ಕದಲ್ಲಿರುವ ಪುರಾತನ ಇತಿಹಾಸ ಪ್ರಸಿದ್ಧ ಶಿವನ ದೇವಾಲಯ ಮುಳುಗಡೆಯಿಂದಾಗಿ ದೂರದಲ್ಲಿಯೇ ಭಕ್ತರು ನಮಸ್ಕಾರ ಮಾಡಿ ಹೋಗುತ್ತಿದ್ದಾರೆ
ಈ ಮುಂಚೆ ಮೊನ್ನೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಕಟ್ಟೆಗಳು ಒಡೆದು ಅಪಾರ ಹಾನಿ ಸಂಭವಿಸಿದ್ದು ಗಡಿ ಭಾಗದ ಔರಾದ್ ಹಾಗೂ ಕಮಲನಗರ ತಾಲೂಕಿನ ಹಳ್ಳಗಳು ಉಕ್ಕಿ ಹರಿದು ಅವಘಡ ಸಂಭವಿಸಿದೆ. 40 ಕ್ಕೂ ಹೆಚ್ಚು ಎಮ್ಮೆಗಳು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ನಂದಿ ಬಿಜಲಗಾಂವ್ ಗ್ರಾಮದ ರೈತರ ಎಮ್ಮೆಗಳು, ಎತ್ತುಗಳು ನೀರುಪಾಲಾಗಿ, ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೇಗಲೂರ ತಾಲೂಕಿನ ಮುಕ್ರಾಂಬಾದ ಬಳಿ ಪತ್ತೆಯಾಗಿವೆ
ತಡರಾತ್ರಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದರು.
ವರದಿ : ನಂದಕುಮಾರ ಕರಂಜೆ, ಬೀದರ

