ಮೂಡಲಗಿಯಲ್ಲಿ ತಾಲೂಕಾ ಆಡಳಿತದಿಂದ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಣೆ

0
744

ಮೂಡಲಗಿ: ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾ ಆಡಳಿತದಿಂದ ಶಿವಶರಣೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಿಸಲಾಯಿತು.

ಹೇಮರಡ್ಡಿ ಮಲ್ಲಮ್ಮಳ ಭಾವ ಚಿತ್ರಕ್ಕೆ ಮೂಡಲಗಿ ಪುಸರಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ ಮತ್ತು ತಹಶೀಲ್ದಾರ ಡಿ.ಜಿ.ಮಹಾತ ಪೂಜೆ ಸಲ್ಲಿಸಿದರು.

ಈ ಸಮಯದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗು ವಾಣಿಜ್ಯ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ಕೆ.ರಡ್ಡೇರ ಮಾತನಾಡಿ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಜೀವನ ಚರಿತ್ರೆ ವೈವಿಧ್ಯಮಯವಾಗಿದ್ದು, ಅವಳು ಇಡಿ ಮಹಿಳಾ ಕುಲಕ್ಕೆ ಆದರ್ಶ ಪ್ರಿಯಳಾಗಿ ಬೆಳೆದು ಮಲ್ಲಿಕಾರ್ಜುನನ ಭಕ್ತಳಾಗಿ,ತವರು ಮತ್ತು ಗಂಡನ ಮನೆಯ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಮಹಾ ಸಾಧ್ವಿ ಮಲ್ಲಮ್ಮನ ತತ್ವಾದರ್ಶಗಳು ಇಂದಿಗೂ ಮನುಕುಲಕ್ಕೆ ಆದರ್ಶವಾಗಿವೆ ಎಂದರು.

ಹೆಮ್ಮರಡ್ಡಿ ಮಲ್ಲಮ್ಮ ಶ್ರೀಮಂತ ಮನೆಯಲ್ಲಿ ಹುಟ್ಟಿ ಮಂದ ಪತಿ ಭರಮರಡ್ಡಿಯನ್ನು ಮದುವೆಯಾಗಿ ಸದಾ ಉಸಿರು ಉಸಿರಿನಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ್ನು ನೆನೆಯುತ್ತಾ ಅವನನ್ನು ಭಾಗವಹಿಸಿದ್ದರುಗಂಡನ ಮನೆಯಲ್ಲಿ ಅತ್ತೆ ನೆಗೆನ್ನಿಯರ ಕಷ್ಟ ಹೇಳತ್ತಿರದಷ್ಟಿದ್ದರೂ ಸದಾ ಹಸನ್ಮುಖಿಯಾಗಿ ಮಲ್ಲಿಕಾರ್ಜುನನಿಗೆ ಭಕ್ತಿ ಸಮರ್ಪಿಸಿ ಜ್ಞಾನದ ವ್ಯವಸ್ಥೆಯಲ್ಲಿ ಇರುತ್ತಿದ್ದ ಹೇಮರಡ್ಡಿ ಮಲ್ಲಮ್ಮ ತನ್ನ ವಿವೇಕದಿಂದ ನಾಡಿಗೆ ವೇಮನನನ್ನು ಮಹಾಯೋಗಿಯನ್ನಾಗಿ ಮಾಡಿದ ಕೀರ್ತಿ ಹೇಮರಡ್ಡಿ ಮಲ್ಲಮ್ಮಳಿಗೆ ಸಲ್ಲುತದೆ. ಇಂತಹ ವಿಚಾರಗಳನ್ನು ಪ್ರತಿಯೊಬ್ಬ ಮಹಿಳೆಯು ಅನುಸರಿಸಿದರೆ ಆ ಮನೆಯು ಸ್ವರ್ಗವಾಗುವುದು ಎಂದರು.

ಸಮಾರಂಭದಲ್ಲಿ ಬಿಇಒ ಅಜೀತ ಮನ್ನಿಕೇರಿ, ಪಿಎಸ್‍ಐ ಎಚ್.ವಾಯ್.ಬಾಲದಂಡಿ, ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ, ಹೆಸ್ಕಾಂ ಅಧಿಕಾರಿ ಬಿ.ವಾಯ್.ಕುರಿ, ಪುರಸಭೆಯ ಚಿದಾನಂದ ಮುಗಳಖೋಡ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಸದಸ್ಯರು ಹಾಗೂ ರಡ್ಡಿ ಸಮಾಜದ ಮುಖಂಡರು, ಬಾಂಧವರು ಮತ್ತಿತರರು ಭಾಗವಹಿಸಿದ್ದರು.

ಫೋಟೋ : ಶಿವಶರಣೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಜಯಂತಿಯಲ್ಲಿ ತಹಶೀಲ್ದಾರ ಡಿ.ಜಿ.ಮಹಾತ ಅವರು ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.