spot_img
spot_img

ಹೆಸ್ಕಾಂ ಗ್ರಾಹಕರ ಜಾಗ್ರತಿ ಅಭಿಯಾನ ಕಾರ್ಯಕ್ರಮ

Must Read

- Advertisement -

ವಿದ್ಯುತ್ ಮಿತವಾಗಿ ಎಚ್ಚರಿಕೆಯಿಂದ ಬಳಸಬೇಕು – ಎಇಇ ವಿಶಾಲ್

ಸಿಂದಗಿ: ಮೀಟರ ಪರವಾನಿಗೆ ಇಲ್ಲದೆ ಅನಧಿಕೃತ ವಿದ್ಯುತ್ ಬಳಕೆದಾರರು ಕಂಡು ಬಂದಲ್ಲಿ ಜೈಲು ವಾಸ ಕಟ್ಟಿಟ್ಟ ಬುತ್ತಿ ಕಾರಣ ಗ್ರಾಹಕರು ಅಗತ್ಯತೆಗೆ ತಕ್ಕಂತೆ ಮತ್ತು  ವಿದ್ಯುತ್ ಮಿತವಾಗಿ ಬಳಕೆ ಮಾಡಬೇಕು ಎಂದು ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ವಿಶಾಲ್ ಧರೆಪ್ಪಗೋಳ ಸಲಹೆ ನೀಡಿದರು.

ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ಹೆಸ್ಕಾಂ ಗ್ರಾಹಕರ ಜಾಗ್ರತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದಿನ ದಿನದಲ್ಲಿ ವಿದ್ಯುತ್ ಇಲ್ಲದೆ ಯಾವ ಕೆಲಸ ಕಾರ್ಯಗಳು ಮಾಡಲು ಸಾಧ್ಯವಿಲ್ಲ ವಿದ್ಯುತ್ ಮಿತವಾಗಿ ಬಳಸಿ ಪ್ರತಿ ತಿಂಗಳ ನಿಗದಿ ಪಡಿಸಿದ ದಿನಾಂಕದಂದು ತಪ್ಪದೆ ಹಣವನ್ನು ಸಂದಾಯ ಮಾಡಬೇಕು ಎಂದು ಹೇಳಿದ ಅವರು ಗ್ರಾಮದಲ್ಲಿ ಹಗಲು ರಾತ್ರಿ ಬಿಡುವಿಲ್ಲದೆ ಅನವಶ್ಯವಾಗಿ ದಾರಿ ದೀಪಗಳು ಉರಿಯುತ್ತಿವೆ ಇದನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಗ್ರಾ. ಪಂ. ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು ಹಾಗೂ ಸರ್ವ ಸದಸ್ಯರು  ನಿಗಾ ವಹಿಸಿ ವಿದ್ಯುತ್ ಉಳಿಸುವ ವ್ಯವಸ್ಥೆ ಮಾಡಬೇಕು ಎಂದರು.

- Advertisement -

ನಂತರ ಶಾಖಾಧಿಕಾರಿ ಕೆ. ಎನ್. ಶಿವಣಗಿ ಹಾಗೂ ಪವರ್ ಮ್ಯಾನ್ ಆಶಿಫ್ ಮಣಿಯಾರ ಮಾತನಾಡಿ, ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಸಬ್ಸಿಡಿ ರೂಪದಲ್ಲಿ ಸೌರಶಕ್ತಿ ಬಳಕೆ ಮಾಡಿಕೊಳ್ಳಿ ಹೊಲ ಗದ್ದೆಗಳಲ್ಲಿ ಅಥವಾ ಮನೆಯ ಎದುರುಗಡೆ ಇರುವ ವಿದ್ಯುತ್ ಕಂಬಗಳಿಗೆ ಅಥವಾ ಗೈ ವಾಯರ್ ಗಳಿಗೆ ದನಕರಗಳನ್ನು ಯಾವತ್ತೂ ಕಟ್ಟಬೇಡಿ ವಿದ್ಯುತ್ ತಂತಿಹರಿದು ಹಸುಗಳ ಪ್ರಾಣಕ್ಕೆ ಧಕ್ಕೆ ಬರುತ್ತದೆ ಮತ್ತು ಮನೆಯಲ್ಲಿ ತಾಯಂದಿರು ಕೂಡ ನೀರಿನಿಂದ ಮನೆ ಒರೆಸುವಾಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷ ಅಮೋಘಸಿದ್ಧ ಒಡಿಯರ್, ಇನಾಯತ ದೊಡಮನಿ, ಸುಭಾಷ ಭಾರತಿ, ರಜಾಕ್ ಭಾಗವಾನ್, ಗ್ರಾಮ ವಿದ್ಯುತ್ ಪ್ರತಿನಿಧಿ ರಫೀಕ್ ಕಣ್ಣಿ, ಮೇಲ್ವಿಚಾರಕ ಆರ್. ಎಂ. ಯಡ್ರಾಮಿ, ಬಾಬು ನದಾಫ್, ದತ್ತಾ ಸಿನ್ನೂರ, ಎಚ್. ಡಿ.ಪಾಟೀಲ್, ಗೌತಮ್ ಸಿಂಗ ಸಿಲ್ಲೆದಾರ, ಮಲ್ಲು ದೇಸಾಯಿ, ಎಸ್. ಎಂ. ಕುಂಬಾರ್, ಮಾಳಿಂಗರಾಯ ಪೂಜೇರಿ ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾ. ಪಂ. ಸರ್ವ ಸದಸ್ಯರು ಇದ್ದರು.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group