ಹೈಟೆಕ್ ಕೈ ತೊಳೆಯುವ ಘಟಕ ಸ್ಥಾಪನೆ

Must Read

ಬೆಳಗಾವಿ – ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಬೆಳಗಾವಿ ಇವರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ 7 ಫುಲಬಾಗ ಗಲ್ಲಿ ಬೆಳಗಾವಿ ನಗರ ಇಲ್ಲಿ ನಾವಿನ್ಯಯುತ ಕೈತೊಳೆಯುವ ಘಟಕ ( Hi-tech Hand Wash Unit) ನಿರ್ಮಾಣಗೊಂಡಿದೆ.

ಅಭಿಯಂತರರಾದ ಗಿರಿಧರ ಜೋಗಿನ ಅವರು ವಿಶೇಷ ಕಾಳಜಿ ವಹಿಸಿ ನಾವಿನ್ಯಯುತ ತಾಂತ್ರಿಕತೆಯ ಮೂಲಕ ಕೈ ತೊಳೆಯುವ ಘಟಕಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.

ಕರ್ನಾಟಕ ಶಾಲಾ ದತ್ತು ಯೋಜನೆಯಡಿಯಲ್ಲಿ ನಮ್ಮ ಶಾಲೆಯನ್ನು ದತ್ತು ಪಡೆದು, ಭೌತಿಕವಾಗಿ ಹಾಗೂ ಗುಣಾತ್ಮಕವಾಗಿ ಆರೋಗ್ಯವರ್ಧಕ ಶಾಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ನ ಸಂಸ್ಥಾಪಕ ನಿರ್ದೇಶಕರಾದ ಡಾ. ಶಶಿಕಾಂತ ವಾಯ್. ಕುಲಗೋಡ, ಡಾ. ವಿಜಯಲಕ್ಷ್ಮಿ ಎಸ್. ಕುಲಗೋಡ ಹಾಗೂ ಎಲ್ಲ ಭಾಗೀದಾರರಿಗೆ ಶಾಲಾ ಮಕ್ಕಳು, ಪಾಲಕರು, ಎಸ್ ಡಿ ಎಮ್ ಸಿ ಹಾಗೂ ಶಿಕ್ಷಕರಿಂದ ಹೃದಯಪೂರ್ವಕ ಧನ್ಯವಾದ ತಿಳಿಸುವುದಾಗಿ ಫೌಂಡೇಶನ್ ಸದಸ್ಯರು ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group