ಮೂಡಲಗಿ:-ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ತಂಗುದಾನಕ್ಕೆ ಹಾಗೂ ಜಿಮ್ ಮಾಡಲು ಜಾಗ ಕೇಳಿದರೂ ಕೊಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಪ್ರಕಾಶ ಮಾದರ ಆರೋಪಿಸಿದರು.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯಸಭಾ ಸದಸ್ಯರ ಅನುದಾಣದಲ್ಲಿ ಮೂಡಲಗಿ ನಗರದಲ್ಲಿ ಬಸ್ ತಂಗುದಾಣ ಮತ್ತು ಓಪನ್ ಜಿಮ್ ಮಾಡಲು ಸ್ಥಳಗಳನ್ನು ಗೊತ್ತು ಮಾಡಿ ಕಾಮಗಾರಿ ಪ್ರಾರಂಭಿಸಲು ಅಗತ್ಯ ವಾದ ದಾಖಲಾತಿಗಳನ್ನು ಪುರಸಭೆ ಮುಖ್ಯಾಧಿಕಾರಿಗಳು ಕೊಡುತ್ತಿಲ್ಲ. ಮೂಡಲಗಿ ನಗರದ “ಬೀರಪ್ಪನ ಗುಡಿ ಹತ್ತಿರ ಶಿವಾಪೂರ ಕ್ರಾಸ್”, “ಧರ್ಮಟ್ಟಿ ರಸ್ತೆ”, ಬಿಎಸ್ಎನ್ ಎಲ್ ಆಫೀಸ ಹತ್ತಿರ ಹಾಗೂ “ಓಪನ್ ಜಿಮ್” ಮಾಡಲು ಕೆ.ಇ.ಬಿ. ಹತ್ತಿರ. ಶಿವಬೋಧ ರಂಗ ನಗರದ ಉದ್ಯಾನವನಗಳಲ್ಲಿ ಚಿಕ್ಕ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಓಪನ ಜಿಮ್ ಮಾಡಲು ಅನುದಾನ ಬಿಡುಗಡೆಯಾಗಿದ್ದು ಮುಖ್ಯಾಧಿಕಾರಿಗಳು ಸ್ಥಳೀಯ ವಾರ್ಡಿನ ಸದಸ್ಯರ ತಕರಾರು ಇದೆ ಎಂದು ನಮಗೆ ಲಿಖಿತವಾಗಿ ತಿಳಿಸಿದ್ದಾರೆ ಎಂದರು.
ಸದರಿ ಉದ್ಯಾನವನಗಳಲ್ಲಿ ಚಿಕ್ಕಮಕ್ಕಳಿಗೆ ಆಟವಾಡಲು ಮೀಸಲಿಟ್ಟಿದ್ದು ಆದರೆ ಅಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತದೆ ಅಂತಾ ನೆಪ ಹೇಳಿ ಚಿಕ್ಕಮಕ್ಕಳ ದೈಹಿಕ ಆರೋಗ್ಯಕ್ಕಾಗಿ ಓಪನ್ ಜಿಮ್ ಮಾಡಲು ಸಾರ್ವಜನಿಕರ ವಿರೋಧವಿದೆ ಅಂತಾ ಹೇಳಿ ಕೇಂದ್ರ ಸರ್ಕಾರದ ಅನುದಾನ ಜಾರಿ ಮಾಡಲು ಅಡೆ ತಡೆಯುಂಟು ಮಾಡುತ್ತಿದ್ದಾರೆ. ಸಾರ್ವಜನಿಕ ಉದ್ಯಾನವನಗಳು ಮಕ್ಕಳು ಆಟವಾಡಲು ಮೀಸಲಿಟ್ಟಿದ್ದು ಅಲ್ಲಿ ಕಾರ್ಯಕ್ರಮಗಳನ್ನು ಮಾಡಲು ಪುರಸಭೆಯವರು ಅನುಮತಿ ನೀಡುತ್ತಿದ್ದು ಚಿಕ್ಕ ಮಕ್ಕಳಿಗೆ ವ್ಯಾಯಾಮ ಮಾಡಲು ಓಪನ್ ಜಿಮ್ ಗೆ ವಿರೋಧ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿರುವ ಅವರು, ಸಾರ್ವಜನಿಕರು ಅಲ್ಲಿ ಕಾರ್ಯಕ್ರಮ ಮಾಡಲು ನಮ್ಮದೇನೂ ತಕರಾರು ಇಲ್ಲ, ಅಲ್ಲಿ ಉದ್ಯಾನವನ ಮಾಡಲಿಕ್ಕೆ ಮತ್ತು ನಮ್ಮ ಮೂಡಲಗಿ ನಗರದ ಚಿಕ್ಕ ಮಕ್ಕಳಿಗೆ ಅನೂಕೂಲವಾಗಲು ನಾನು ಸಹ ನಮ್ಮ ವಾರ್ಡಿನ ಹಿರಿಯರೊಂದಿಗೆ ಕೂಡಿ ಹೋರಾಟ ಮಾಡಿ ಇಲ್ಲಿನ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸಹಕಾರದಿಂದ ಉದ್ಯಾನವನ ಮಾಡಿದ್ದೇವೆ. ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಯವರು ಮೂಡಲಗಿ ನಗರದ ಅಭಿವೃದ್ದಿಗಾಗಿ ತಮ್ಮ ರಾಜ್ಯಸಭಾ ಸದಸ್ಯರ ಅನುದಾನಲ್ಲಿ 1 ಕೋಟಿ ರೂಪಾಯಿ ನೀಡಲು ಸಿದ್ದರಿದ್ದು, ಅವರ ಅನುದಾನವನ್ನು ನಮ್ಮ ಮೂಡಲಗಿ ನಗರದ ಜನತೆ ಸದ್ಬಳಕೆ ಮಾಡಿಕೊಳ್ಳಲು ಸಿದ್ದರಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಂಜೂರಾದ ಕಾಮಗಾರಿಗಳಿಗೆ ಅಗತ್ಯವಾದ ದಾಖಲಾತಿಗಳನ್ನು ನೀಡದೆ ಅಡೆತಡೆಯುಂಟು ಮಾಡುತ್ತಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಬಿಜೆಪಿ ಹಿರಿಯ ದಲಿತ ಮುಖಂಡರಾದ ಪ್ರಕಾಶ ಮಾದರ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.