
ಸಿಂದಗಿ: ಲವ್ ಜಿಹಾದ್, ಮತಾಂತರ ಹಾಗೂ ಗೋಹತ್ಯಾ ನಿಷೇಧ ತಡೆಯಲು ನಮ್ಮ ಹಿಂದೂ ಕಾರ್ಯಕರ್ತರು ಒಗ್ಗಟ್ಟಾಗಿ ನಿಲ್ಲಬೇಕು ಹಾಗೂ ಹಿಂದುತ್ವ ಬೆಳೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಹರನಾಳ ಹೇಳಿದರು.
ತಾಲೂಕಿನ ಚಾಂದಕವಠೆ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಹನುಮ ಮಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಜರಂಗದಳ ತಾಲೂಕಾ ಸಂಯೋಜಕ ಯಮನಪ್ಪ ಚೌಧರಿ ಅವರು ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಹನುಮ ಮಾಲಾ ಧಾರಣೆ ಮಾಡಿಸಿದರು.