ಸಿಂದಗಿ; ಎಚ್. ಐ.ವಿ ಸೊಂಕು ಅಷ್ಟೊಂದು ಭಯಪಡಿಸುವ ರೋಗವಲ್ಲ ಅದು ಮಾದಕ ವಸ್ತುಗಳ ಸೇವನೆಯಿಂದ ಅನೇಕ ರೋಗಗಳಿಗೆ ಅಹ್ವಾನಿಸದಂತಾಗುತ್ತಿದೆ ಅಲ್ಲದೆ ಮಾದಕ ವಸ್ತುಗಳ ಸೇವನೆಯಿಂದ ದಿನದಿಂದ ದಿನಕ್ಕೆ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತಿದ್ದು ಅಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಕುಲಕರ್ಣಿ ಸಲಹೆ ನೀಡಿದರು.
ಪಟ್ಟಣದ ಸಿ ಎಂ ಮನಗೂಳಿ ಮಹಾವಿದ್ಯಾಲಯದ ಅಪರಾಧ ಶಾಸ್ತ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಚ್. ಐ.ವಿ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಅದು ಬರೀ ಲೈಗಿಂಕ ಕ್ರಿಯೆಯಿಂದ ಮಾತ್ರ ಹರಡುವುದಿಲ್ಲ. ಮತ್ತು ಒಬ್ಬರಿಂದ ಒಬ್ಬರಿಗೆ ಹರಡುವಂತ ರೋಗವಲ್ಲ. ಮತ್ತು ಆಕಸ್ಮಿಕವಾಗಿ ಈ ರೋಗ ನಿಮ್ಮ ದೇಹದಲ್ಲಿ ಅಕ್ರಮಿಸಿದರೆ ಅದರ ಚಿಕಿತ್ಸೆಗೆ ಸರಕಾರ ಗುಪ್ತ ಸಮಾಲೋಚನಾ ಕೇಂದ್ರವನ್ನು ತೆರೆದು ಅಲ್ಲಿಂದ ಪ್ರತಿತಿಂಗಳು ಮಾತ್ರೆಗಳು ಪಡೆದುಕೊಳ್ಳುವುದರಿಂದ ಹೆಚ್ಚು ಕಾಲ ಬದುಕಬಹುದು ಎಲ್ಲರಂತೆ ಜೀವನ ನಡೆಸಬಹುದು ಎಂದು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಂ ಆರ್ ಬಡಿಗೇರ್, ವಿದ್ಯಾ ಹಿರೇಪಟ್ಟ, ಶುಶ್ರೂಕ ಅಧಿಕಾರಿ ರಾಯಣ್ಣ ಸೋನಳಿ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ ನರಗೋದಿ ಯವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎಂ ಸಿ ಮನಗೂಳಿ ಕಾಲೇಜಿನ ಪ್ರೊ. ಬಿ.ಡಿ. ಮಾಸ್ತಿ ಕೂಡ ಭಾಗಿಯಾಗಿದ್ದರು.