ಬೆಳಗಾವಿ: ಸ್ವಾತಂತ್ರ್ಯೋತ್ಸವ ಸಂಭ್ರಮ ಪ್ರತಿ ಮನೆ ಮನಗಳಿಗೆ ಮುಟ್ಟುವಂತೆ ಆಚರಿಸುವ ಉದ್ದೇಶದಿಂದ ಪ್ರತಿಯೊಬ್ಬರ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸಬೇಕು. ತ್ರಿವರ್ಣ ಧ್ವಜ ರಾರಾಜಿಸಿ ಪ್ರತಿ ಭಾರತೀಯನ ಹತ್ತಿರವಿರುವ ದೇಶಭಕ್ತಿ, ಸದ್ಭಕ್ತಿ, ಶ್ರದ್ಧೆ ತೋರ್ಪಡಿಸಬೇಕೆಂದು ರಾಜ್ಯ ಸಭಾ ಸಂಸದ ಈರಣ್ಣಾ ಕಡಾಡಿ ಕರೆ ನೀಡಿದರು.
ಮಾಧ್ಯಮ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದ ಅವರು, ಬಿಜೆಪಿ, ರಾಷ್ಟ್ರವ್ಯಾಪಿ ‘ಹರ್ ಘರ್ ತಿರಂಗ’ ಅಭಿಯಾನ ಹಮ್ಮಿಕೊಂಡಿದ್ದು ಎಲ್ಲ ಜಿಲ್ಲೆ, ವಿಧಾನಸಭಾ ಕ್ಷೇತ್ರ, ಪ್ರತಿ ಗ್ರಾಮದಲ್ಲೂ ಕಾರ್ಯಕರ್ತರು ತಮ್ಮ ಹಾಗೂ ಎಲ್ಲರ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಶ್ರಮವಹಿಸಿಬೇಕು.
‘ಹರ್ ಘರ್ ತಿರಂಗ’ ಸಂಬಂಧಿತ ಕಾರ್ಯಕ್ರಮದಲ್ಲಿ ತಮ್ಮ ಸ್ಥಳದಲ್ಲಿರುವ ಮಹಾನ್ ಪುರುಷರ ಪ್ರತಿಮೆ ಸ್ಮಾರಕಗಳ ಸ್ವಚ್ಚತಾಕಾರ್ಯ, ತಿರಂಗ ಬೈಕ್‌ಯಾತ್ರೆ, ಪಂಜಿನ ಮೆರವಣಿಗೆ ನಡೆಸುವ ಮೂಲಕ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮನಗಳಲ್ಲಿ ಮೂಡಬೇಕೆಂದರು.