spot_img
spot_img

ಪಟಗುಂದಿಯಲ್ಲಿ ಜೈನ ಮುನಿಗಳ ಪುಣ್ಯತಿಥಿ ಕಾರ್ಯಕ್ರಮ

Must Read

- Advertisement -

ಮೂಡಲಗಿ: ತಾಲೂಕಿನ ಪಟಗುಂದಿ ಗ್ರಾಮದ ಸುಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ಶುಕ್ರವಾರ ಸೆ.೨೦ ರಂದು ಚಾರಿತ್ರ್ಯ ಚಕ್ರವರ್ತಿ ಪ್ರಥಮಾಚಾರ್ಯ ೧೦೮ ಶ್ರೀ ಶಾಂತಿ ಸಾಗರ್ ಮುನಿ ಮಹಾರಾಜರ ೬೯ನೇ ಪುಣ್ಯತಿಥಿ ಹಾಗೂ ೧೦೮ ನಮನಸಾಗರ ಮಹಾರಾಜರ ೫ ನೇ ಪುಣ್ಯತಿಥಿ, ಕ್ಷುಲ್ಲಿಕಾರತ್ನ ೧೦೫ ಕಾಂಚನಶ್ರೀ ಮಾತಾಜಿಯವರ ಎರಡನೆಯ ಪುಣ್ಯತಿಥಿ ಕಾರ್ಯಕ್ರಮವನ್ನು ಜರುಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ ೭.೪೫ ಧ್ವಜಾರೋಹಣ, ೮ ಗಂಟೆಗೆ ಶ್ರೀ ಭಗವಾನರ ಅಭಿಷೇಕ, ೧೦ ಗಂಟೆಗೆ ಮಹಾರಾಜರ ಭಾವಚಿತ್ರ ಭವ್ಯ ಮೆರವಣಿಗೆ ಜರುಗುವುದು. ಮಧ್ಯಾಹ್ನ ೩ ಗಂಟೆಗೆ ಜರುಗುವ ವೇದಿಕೆಯ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೊಲ್ಲಾಪುರ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಶ್ರೀಗಳು, ನಾಂದನಿ ಮಠದ ಶ್ರೀ ಜಿನಸೇನ ಭಟ್ಟಾರಕ ಶ್ರೀಗಳು, ವರೂರ ಮಠದ ಶ್ರೀ ಧರ್ಮಸೇನ ಭಟ್ಟಾರಕ ಶ್ರೀಗಳು ವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಲ. ಜಾರಕಿಹೊಳಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕ ಹಾಗೂ ಬೆಮೂಲ್ ಅಧ್ಯಕ್ಷ ಸನ್ಮಾನ್ಯ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುವರು, ಅ.ಕ.ಕ.ಬೆ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಅ. ಕಮತೆ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಮಾಜಿ ವಿಧಾನಸಭಾ ಸದಸ್ಯ ವೀರಕುಮಾರ್ ಪಾಟೀಲ, ಬೆಳಗಾವಿ ಉತ್ತರ ಶಾಸಕ ಅಭಯ ಪಾಟೀಲ, ಬೋರಗಾಂವ್ ಅರಿಹಂತ ಸಮೂಹ ಸಂಸ್ಥೆಯವ ಅಧ್ಯಕ್ಷ ಉತ್ತಮ್ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಶ್ರಾವಕರತ್ನ ಮಾನಿಕ ಬೋಳಿ, ಬೆಳಗಾವಿ ಡಿ.ವೈ.ಎಸ್.ಪಿ ಬರಮಪ್ಪ ಎಸ್ ಲೋಕಾಪೂರ, ರಬಕವಿಯ ಉದ್ಯಮಿ ಗಣಪತರಾವ ಹಜಾರೆ ನೇತ್ರ ತಜ್ಞ ಪದ್ಮಜಿತ ನಾಡಗೌಡ, ಬಹನಹಟ್ಟಿಯ ಉದ್ಯಮಿ ಮಹಾವೀರ ದೇಸಾಯಿ ಭಾಗವಹಿಸುವರು.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group