ಗೃಹ ಪ್ರವೇಶದ ನಿಮಿತ್ಯ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ

Must Read

ಸವದತ್ತಿ : ಪಟ್ಟಣದ ಶಿವಬಸವ ನಗರದಲ್ಲಿ ಕವಿ ನಾಗೇಶ್ ಜೆ. ನಾಯಕ ಅವರ ಹೊಸಮನೆ ಪ್ರವೇಶದ ನಿಮಿತ್ತ ಮೇ ೨ ರಂದು ಬೆಳಿಗ್ಗೆ ೧೦ ಗಂಟೆಗೆ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಸು ಬೇವಿನಗಿಡದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸವದತ್ತಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವಾಯ್. ಎಮ್. ಯಾಕೊಳ್ಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಖ್ಯಾತ ಗಜಲ್ ಕವಿ ಅಲ್ಲಾಗಿರಿರಾಜ್ ಹಾಗೂ ಸವದತ್ತಿ ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ವೈ. ಕರಮಲ್ಲಪ್ಪನವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ಬಿ. ಎ. ಶೆಟ್ಟೆಪ್ಪನವರ ಹಾಗೂ ಅಭಿಯಂತರ ಕೃಷ್ಣರೆಡ್ಡಿ ಗಣಿ ಅವರಿಗೆ ಅಭಿನಂದನಾ ಸಮಾರಂಭ ನೆರವೇರಲಿದೆ. ಧಾರವಾಡದ ಖ್ಯಾತ ಗಾಯಕರಾದ ರಾಘವ ಕಮ್ಮಾರ ಇವರಿಂದ ಗಜಲ್ ಗಾಯನ ನಡೆಯಲಿದೆ. ನಂತರ ನಡೆಯುವ ಕವಿಗೋಷ್ಠಿಯಲ್ಲಿ ವಾಯ್.ಬಿ. ಕಡಕೋಳ, ಪ್ರಕಾಶ ಕಡಮೆ, ಆನಂದ ಭೋವಿ, ಶೇಖರ ಹಾದಿಮನಿ, ಹಿಪ್ಪರಗಿ ಸಿದ್ಧರಾಮ, ಎಫ್.ಎಲ್. ಮದಹಳ್ಳಿ, ಆಶಾ ಪರೀಟ್, ಬಿ.ಎಮ್.ಬಾವಾಖಾನ್, ಜಗದೀಶ ಸಂಗನ್ನವರ, ಸುನಂದಾ ಭರಮನಾಯ್ಕರ, ಜ್ಯೋತಿ ಮಾಳಿ, ಇಬ್ರಾಹಿಂ ಚಾಂದಖಾನವರ, ಎಮ್.ಡಿ. ಬಾವಾಖಾನ್, ಶಿವಾನಂದ ಉಳ್ಳಿಗೇರಿ, ದೇವೇಂದ್ರ ಕಮ್ಮಾರ, ಆನಂದ ಪಾಟೀಲ, ಬಿ.ವಿ. ಪತ್ತಾರ, ಬಿ. ಎಮ್. ಬಿರಾದಾರ ತಮ್ಮ ಕವಿತೆ ವಾಚಿಸಲಿದ್ದಾರೆ. ಕವಿ ವಿಠಲ ದಳವಾಯಿ ನಿರೂಪಿಸಲಿದ್ದಾರೆ ಎಂದು ಸಾಹಿತಿ ನಾಗೇಶ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group