ಮರ್ಯಾದಾ ಹತ್ಯೆ; ಪ್ರೀತಿಸಿದ ಮಗಳ ರುಂಡ ಮುಂಡ ಬೇರ್ಪಡಿಸಿದ ತಂದೆ

Must Read

ಹೈದರಾಬಾದ್: ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳ ರುಂಡ-ಮುಂಡವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ  ದೇಹವನ್ನು ಕಾಡಿನಲ್ಲಿ ಎಸೆದುಬಂದ ತಂದೆಯ ಕಥೆಯಿದು.

ಈ ಮರ್ಯಾದಾ ಹತ್ಯೆ ಪ್ರಕರಣ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಸನ್ನ (21) ಮೃತ ದುರ್ದೈವಿ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಮಗಳನ್ನು ಕೊಂದ ಆರೋಪಿ. ರೆಡ್ಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ ಪ್ರಸನ್ನಗೆ ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ಮದುವೆಯ ಬಳಿಕ ಪ್ರಸನ್ನ ಹೈದರಾಬಾದ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದಳು. ಮದುವೆಯಾಗಿ ಎರಡು ವರ್ಷದ ಬಳಿಕ ಹೈದರಾಬಾದಿನಿಂದ ಹಳ್ಳಿಗೆ ಬಂದು ತನ್ನ ಮನೆಯಲ್ಲಿ ವಾಸವಾಗಿದ್ದಳು.

ಈ ವೇಳೆ ಮದುವೆಗೂ ಮುನ್ನ ಪ್ರೇಮ ಸಂಬಂಧ ಹೊಂದಿದ್ದವನ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದಲ್ಲದೆ, ವಾಪಸ್ ಹೈದರಾಬಾದ್‌ಗೆ ಹೋಗಲೂ ಮನಸ್ಸು ಮಾಡಿರಲಿಲ್ಲ.

ಇದು ತಂದೆಗೆ ಇಷ್ಟವಾಗಿರಲಿಲ್ಲ. ಇದರಿಂದ ತನ್ನ ಪ್ರತಿಷ್ಠೆ ಹಾಳಾಗುತ್ತದೆ ಎಂದು ಕೋಪಗೊಂಡಿದ್ದ ದೇವೇಂದ್ರ ರೆಡ್ಡಿ ಮನೆಯಲ್ಲಿಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಬಳಿಕ ಕೆಲವರ ಜತೆ ಸೇರಿ ಕಾರಿನಲ್ಲಿ ಮಗಳ ಶವವನ್ನು ನಂದ್ಯಾಲ-ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶಕ್ಕೆ ತಂದು ದೇಹದ ರುಂಡ ಹಾಗೂ ಮುಂಡವನ್ನು ಬೇರೆ ಮಾಡಿದ್ದಾರೆ. ರುಂಡವನ್ನು ಕಾಡಿನ ಒಂದು ಕಡೆ ಎಸೆದಿದ್ದರೆ, ಇನ್ನೊಂದು ಕಡೆ ಉಳಿದ ಭಾಗವನ್ನು ಎಸೆದು ಮನೆಗೆ ಬಂದಿದ್ದರು.

ಮನೆಯ ಸದಸ್ಯರು ಪ್ರಸನ್ನಳ ಬಗ್ಗೆ ಪ್ರಶ್ನೆ ಮಾಡಿದಾಗ ವಿಧಿಯಿಲ್ಲದೆ ಕೊಲೆಯ ಬಗ್ಗೆ ಒಪ್ಪಿಕೊಂಡ ರೆಡ್ಡಿ ದೇಹದ ಭಾಗಗಳನ್ನು ತೋರಿಸಿದ್ದು ಪೊಲೀಸರು ಅವುಗಳ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group