ಭೀಕರ ಅಪಘಾತ ; ಕುಂಭಮೇಳ ಪುಣ್ಯ ಸ್ನಾನಕ್ಕೆ ಹೋಗಿದ್ದ ಬೀದರ ಜಿಲ್ಲೆಯ ಐವರು ಸಾವು

Must Read

ಕಾಶಿ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತ

ಬೀದರ : ಕಾಶಿ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತವಾಗಿ ಕಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಮಿರಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ನಡೆದಿದೆ… ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳು ದುರ್ಮರಣವಾಗಿದ್ದು ಒಂದೇ ಕುಟುಂಬದ‌ ಮೂರು ಜನ ಸೇರಿದಂತೆ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ…

ಕಾಶಿಯಿಂದ 20 ಕಿಲೋ‌ ಮೀಟರ ದೂರದಲ್ಲಿ ಲಾರಿಗೆ ಹಿಂಬದಿಯಿಂದ ರಭಸವಾಗಿ ಕ್ರೂಸರ್ ಡಿಕ್ಕಿಯಾಗಿ ಐದು ಜನ ಸಾವನ್ನಪ್ಪಿದ್ದು ಉಳಿದ 7 ಜ‌ನರ ಸ್ಥಿತಿ ಗಂಭೀರವಾಗಿದೆ… 57 ವರ್ಷದ ಲಕ್ಷ್ಮಿ, 62 ವರ್ಷದ ನೀಲ್ಲಮ್ಮ, 45 ವರ್ಷದ ಸಂತೋಷ, 40 ವರ್ಷದ ಸುನೀತಾ, ಕಲಾವತಿ ಸೇರಿದಂತೆ ಐದು ಜನ ಸಾವನ್ನಪ್ಪಿದ ದುರ್ದೈವಿಗಳಾಗಿದ್ದು ಪ್ರಯಾಗ್ ರಾಜ್ ನಿಂದ ಕಾಶಿ ಕಡೆ ಹೋಗುವಾಗ ಭೀಕರ ರಸ್ತೆ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

ಎರಡು ದಿನಗಳ ಹಿಂದೇ ಒಂದೇ ಗಾಡಿಯಲ್ಲಿ ಕುಂಭ ಮೇಳಕ್ಕೆ ತೆರಳಿದ್ದ 13 ಜನರಲ್ಲಿ ಐದು ಜನ ಸಾವನ್ನಪ್ಪಿದು ಶವಗಳನ್ನು ಶವಾಗಾರಕ್ಕೆ ರವಾನಿಸಿದ್ದು ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ… ಈ ಕುರಿತು ಮಿರ್ಜಾ ಮುರಾರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group