ಕಾಂಗ್ರೆಸ್ ಗೆ ಬಿಸಿ ತುಪ್ಪವಾದ ಹಿಜಾಬ್: ಅರಗ ಜ್ಞಾನೇಂದ್ರ

Must Read

ಬೀದರ – ಹಿಜಾಬ್ ವಿಚಾರ ಕಾಂಗ್ರೆಸ್ ನವರಿಗೆ ಬಿಸಿ ತುಪ್ಪ ಆಗಿದೆ. ಅವರಿಗೆ ನುಂಗಲಿಕ್ಕೂ ಆಗುತ್ತಿಲ್ಲ ಹೊರಗೆ ಹಾಕಲಿಕ್ಕೂ ಆಗುತ್ತಿಲ್ಲ. ಕೆಲ ಕಾಂಗ್ರೆಸ್ ನಾಯಕರು ಹಿಜಾಬ್ ವಿವಾದಕ್ಕೆ ಹಿಂದಿನಿಂದ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.

ಹೈದ್ರಾಬಾದ್ ಮೂಲಕ ಕಲ್ಬುರ್ಗಿ ಯತ್ತ ಪ್ರಯಾಣ ಮಾಡುವ ವೇಳೆಯಲ್ಲಿ ಹುಮನಾಬಾದ್ ಹೊರ ವಲಯದ ಹೆದ್ದಾರಿ ಬಳಿ ಪತ್ರಕರ್ತರೊಡನೆ ಅವರು ಮಾತನಾಡಿದರು.

ಕೆಲವೊಂದು ಕಡೆಯಲ್ಲಿ ಮತೀಯ ಶಕ್ತಿಗಳು ವಿವಾದ ತಾರಕ್ಕಕ್ಕೇರಿಸ್ತಾ ಇದ್ದಾರೆ ಎಂದರು.

ಪದೇ ಪದೇ ಕಾಂಗ್ರೆಸ್ ಶಾಸಕರು ಪೊಲೀಸರು ವಿರುದ್ಧ ಹೇಳಿಕೆ ನೀಡುತ್ತಿರುವ ವಿಚಾರ ಪ್ರಸ್ತಾಪಿಸಿದ ಅವರು ಹದಗೆಟ ವ್ಯವಸ್ಥೆಯನ್ನು ಸ್ಥಳೀಯ ಶಾಸಕರು ಸುಧಾರಣೆ ಮಾಡಬೇಕು ಎಂದು ಟಾಂಗ್ ಕೊಟ್ಟರು.

ಹಿಜಾಬ್ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತು ಎಂದು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ರಾಜ್ಯದ ಗ್ರಹ ಮಂತ್ರಿ ಮಲ್ಲೇಶ್ಚರಂ ನಲ್ಲಿ ಯುವ ಕಾಂಗ್ರೆಸ್ ನಾಯಕ ಹಿಜಾಬ್ ಬೆಂಬಲಿಸಿದ್ದಾರೆ.

ಆದರೆ ಒಮ್ಮಲ್ಲೆ ಬಹಿರಂಗವಾಗಿ ಹೊರಗೆ ಬರಲು ಆಗುತ್ತಿಲ್ಲ. ಕೋರ್ಟ್ ಆದೇಶ ಬರೋವರೆಗೆ ಕಾಯಬೇಕಾಗಿದೆ. ಹುಮನಾಬಾದ್ ನಲ್ಲಿ ಹೆಚ್ಚುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ಸ್ಥಳೀಯ ಶಾಸಕರೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅರಗ ಜ್ಞಾನೇಂದ್ರ ಹೇಳಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group