ಸವದತ್ತಿ: ನವರಸಗಳೊಂದಿಗೆ ಸದಾ ಹೊಸತನ್ನು ತೆರೆದಿಡುತ್ತಾ ಸಮಾಜದ ದಿಕ್ಸೂಚಿಯಾಗಿ ಕಾರ್ಯ ಮಾಡುತ್ತಾ ಬಂದಿರುವುದು ರಂಗಭೂಮಿ. ಎಳೆಯರಿಂದ ವೃದ್ಧರವರೆಗೆ ಅವರ ಭಿನ್ನ ಭಾವನೆಗಳನ್ನು ಬೆಳೆಸುತ್ತಾ ಉಳಿಸುತ್ತಾ ಬಂದಿರುವ ಮಾಧ್ಯಮ ಎಂದರೆ ರಂಗಭೂಮಿ ಮಾತ್ರ. ಶಾಲೆಯ ನಾಲ್ಕು ಗೋಡೆಯ ಕೊಠಡಿ ಒಳಗೆ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ, ಆ ಪಾಠವನ್ನು ರಂಗ ಚಟುವಟಿಕೆಯ ಮೂಲಕ ಹೇಳುವುದರಿಂದ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದರಿಂದ ಅವರ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು ಎಂದು ಕಲಾವಿದೆ ಸನ್ಮತಿ ಅಂಗಡಿ ಅಭಿಪ್ರಾಯ ಪಟ್ಟರು.
ಅವರು ಸವದತ್ತಿ ಪಟ್ಟಣದ ದೇಸಾಯಿ ಕೋಟೆಯಲ್ಲಿ ಜರುಗಿದ ರಂಗ ಆರಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ರವಿವಾರ ಸಾಯಂಕಾಲ ದಲ್ಲಿ ಜರುಗಿದ ರಂಗಕಲೆಗೆ ಸಂಬಂಧಿಸಿದ ವಿವಿಧ ಪ್ರಶಸ್ತಿ ಸಮಾರಂಭದಲ್ಲಿ ರಂಗ ಚಂದ್ರ ಪ್ರಶಸ್ತಿ ಸ್ವೀಕರಿಸಿದ ವಿಷಯಾ ಜೇವೂರ ಮಾತನಾಡಿ, ರಂಗಭೂಮಿ ನನ್ನ ಜೀವನದ ಉಸಿರು. ಮಾನವೀಯ ಸಂಬಂಧಗಳನ್ನು ಬೆಸೆಯುವ ಕೊಂಡಿ. ಶಾಲಾ-ಕಾಲೇಜು ದಿನಗಳಲ್ಲಿ ತಂದೆ-ತಾಯಿಯರು ಹಾಗೂ ಶಿಕ್ಷಕರು ನನ್ನ ರಂಗಾಸಕ್ತಿಗೆ ನೀರೆರೆದು ಪೋಷಿಸಿದ ಕಾರಣ ನಿಮ್ಮ ಮುಂದೆ ನಿಲ್ಲಲು ಕಾರಣ. ಸವದತ್ತಿ ಯಲ್ಲಿ ಕೂಡ ನನಗೆ ಮೂರು ನಾಟಕಗಳಲ್ಲಿ ಅಭಿನಯಿಸಲು ಝಕೀರ ನದಾಫ್ ಅವಕಾಶ ಕೊಟ್ಟಿರುವರು. ಇಂದು ನನಗೆ ನೀಡಿದ ಪ್ರಶಸ್ತಿ ಮರೆಯಲಾಗದು.ರಂಗಭೂಮಿ ಉಳಿಯಬೇಕು. ಅದರಲ್ಲೂ ಮಹಿಳೆಯರು ರಂಗಭೂಮಿಯ ಲ್ಲಿ ಬೆಳೆಯಲು ಮನೆಯವರ ಹಾಗೂ ಸಮಾಜದ ಪ್ರೋತ್ಸಾಹ ಅಗತ್ಯ ಎಂದು ರಂಗ ಕಲಾವಿದೆ ವಿಷಯಾ ಜೇವೂರ ಹೇಳಿದರು.
ರಂಗ ಆರಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆರತಿ ದೇವಶಿಖಾಮಣಿ “ಸವದತ್ತಿ ರಂಗ ಆರಾಧನಾ ಸಂಸ್ಥೆ ನನ್ನ ಲ್ಲಿನ ಕಲಾವಿದೆ ಗೆ ಹೊಸ ರೀತಿಯ ಪ್ರೋತ್ಸಾಹ ನೀಡಿತು. ಝಕೀರ ಮತ್ತು ಅವರ ಕುಟುಂಬದ ಸಹಕಾರ ಮರೆಯಲಾಗದು” ಎಂದು ತಿಳಿಸಿದರು.
ವೇದಿಕೆಯಲ್ಲಿ ಸುಮಿತ್ರ ಬಸವರಾಜ ಕಾರದಗಿ,
ಶೋಭಾ ಮೌನೇಶ್ವರ ಸುಳ್ಳದ, ಕಮಲತಾಯಿ ರುದ್ರಪ್ಪ ಶಿಂಧೆ, ಸ್ವಾತಿ ಸಿದ್ದಯ್ಯ ವಡಿಯರ, ಸುನಿತಾ ಮಲ್ಲನಗೌಡ ದ್ಯಾಮನಗೌಡರ, ಲಕ್ಷ್ಮಿ ಮಹಾದೇವ ಆರಿಬೆಂಚಿ,
ಜಯಶ್ರೀ ನಾಗರಾಜ್ ಬೋನಗೇರಿ, ಪ್ರಭಾವತಿ ನಾರಾಯಣ ಧನ್ಯಾಳ ಮೊದಲಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಲಕ್ಷ್ಮೀ ಅರಿಬೆಂಚಿ ಮಾತನಾಡಿ, ಸ್ವಾತಂತ್ರ್ಯ ದ ಕಿಡಿ ಹಚ್ಚಿದ ಮೊದಲ ದಿನದ ನಾಟಕ ಮಹಿಳಾ ಸ್ವಾತಂತ್ರ್ಯ ಹೋರಾಟದ ಜೀವನ ಬಿಂಬಿಸುವ ನಾಟಕಗಳು ಮುಂದಿನ ದಿನಗಳಲ್ಲಿ ಬರಲಿ. ಝಕೀರ ನದಾಫ್ ಅವರ ಪ್ರಯತ್ನ ಹಾಗೂ ಪ್ರೋತ್ಸಾಹ ದ ಫಲವಾಗಿ ಮಹಿಳಾ ಕಲಾವಿದರು ಇಂದು ರಂಗ ಆರಾಧನಾ ಸಂಘಟನೆ ಮೂಲಕ ತಮ್ಮ ಪ್ರತಿಭೆ ಹೊರಹೊಮ್ಮಿಸುತ್ತಿರುವರು. ಈ ದಿಸೆಯಲ್ಲಿ ಝಕೀರ ಹಾಗೂ ಅವರ ತಂಡವನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಝಕೀರ ನದಾಫ್, ಶಿವಾನಂದ ತಾರೀಹಾಳ, ಮಯೂರ ಶಿಂಧೆ, ಶ್ರೀನಿವಾಸ ಗದಗ, ಗೋಪಾಲ ಫಾಸಲಕರ ಸೇರಿದಂತೆ ರಂಗ ಕಲಾವಿದರು ಉಪಸ್ಥಿತರಿದ್ದರು. ಪ್ರತಿಭಾ ವಕ್ಕುಂದ ಕಾರ್ಯ ಕ್ರಮ ನಿರೂಪಿಸಿದರು