ಹುನಗುಂದ :-ಧರ್ಮ ಮಾನವನ ಅವಿಭಾಜ್ಯ ಅಂಗ ಧರ್ಮ ಎಂದರೆ ಬದುಕಿನ ರೀತಿ ಮಾನವ ಕುಲ ಸುಖದಿಂದ ಇರಬೇಕಾದ ಧರ್ಮ ಬೇಕೇ ಬೇಕು ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂದು ಕೊಡಗೋಳಿ ಹಿರೇಮಠದ ಪ್ರಶಾಂತ ದೇವರು ಹೇಳಿದರು.
ಅವರು ನಗರದ ಗಚ್ಚಿನಮಠದಲ್ಲಿ ದಿ>೧೩ ರಂದು ಶುಕ್ರವಾರ ನಡೆದ ಮುರಫೇಂದ್ರ ಶ್ರೀಗಳ ೫೯ ನೇ ಪುಣ್ಯಸ್ಮರಣೋತ್ಸವ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಹುನಗುಂದದ ಗಚ್ಚಿನಮಠ ನಡೆದು ಬಂದ ದಾರಿ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀವಚನದಲ್ಲಿ ಮಾತನಾಡಿ, ಹುನಗುಂದದ ಜನ ಭಕ್ತಿವಂತರು ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ರೂಡಿಸಿಕೊಂಡು ಬಂದಿದ್ದಾರೆ ಎಂದು ವಿವರಿಸಿದರು
ಮುಂದುವರಿದು ಧಾರ್ಮಿಕ ಬೋಧನೆ ಜೊತೆಗೆ ನಮ್ಮ ಬದುಕಿಗೆ ಬೇಕಾಗಿರುವುದು ಕೃಷಿ ಸಾವಿರಾರು ವರ್ಷಗಳಿಂದ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಯುವಕರು ವಿಮುಖವಾಗಿರುವ ಈ ಸಂಧರ್ಭದಲ್ಲಿ ಕೃಷಿ ಪ್ರಧಾನವಾಗಿ ಇಟ್ಟುಕೊಂಡಿರುವ ಹುನಗುಂದ ತಾಲೂಕಿನ ಕಮತಗಿ ಸೇರಿದಂತೆ ಗಚ್ಚಿನಮಠ ಇಂದಿನಿಂದ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಹುನಗುಂದ ವಿ.ಎಂ.ಎಸ್. ಆರ್.ವ್ಹಿ.ಪದವಿ ಮಹಾವಿದ್ಯಾಲಯವಿದ ಪ್ರಾಧ್ಯಾಪಕರಾದ ಡಾ. ಎಂ.ಬಿ.ಒಂಟಿ ಹುನಗುಂದದ ಗಚ್ಚಿನಮಠ ನಡೆದು ಬಂದದಾರಿ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತ, ಮಾನವನನ್ನು ಸತ್ಯ ನ್ಯಾಯ, ಧರ್ಮ,ನೈತಿಕ ಹಾಗೂ ಆಧ್ಯಾತ್ಮ ಮಾರ್ಗದಲ್ಲಿ ನಡೆಯುವಂತೆ ಮಾಡುವಲ್ಲಿ ಮಠಗಳು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ನಾಡಿನ ಅನೇಕ ಮಠಗಳು ಈ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂಥ ಮಠಗಳಲ್ಲಿ ಈ ಮಠವೂ ಒಂದು ಅದರೆ ಸರಿಯಾಗಿ ಪ್ರಚಾರ ಸಿಕ್ಕಿಲ್ಲ ಎಂದು ಹೇಳಬಹುದು, ಕ್ಷಣಿಕವಾದ ಪ್ರಾಪಂಚಿಕ ಸುಖದಿಂದ ಮನುಷ್ಯ ನನ್ನ ಬಿಡುಗಡಗೊಳಿಸಿ ಶಾಶ್ವತವಾದ ಆನಂದವನ್ನುಂಟು ಮಾಡುವ ಪಾರಮಾರ್ಥಿಕತೆಯನ್ನು ಬೆಳೆಸುವ ಆಧ್ಯಾತ್ಮಿಕ ಕೇಂದ್ರಗಳ ಮಠಗಳ ಕಾರ್ಯ ಅಭಿನಂದನೀಯ ಹಾಗೂ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಹುನಗುಂದ ಪತ್ರಕರ್ತ ಜಾಕೀರ ಹುಸೇನ ತಾಳಿಕೋಟಿ ಶ್ರೀಮಠ ಸನ್ಮಾನ ಸ್ವೀಕರಿಸಿ ಮಾತನಾಡಿ ನಾವು ಕೂಡ ಶ್ರೀಮಠದ ಭಕ್ತರಾಗಿ ಪ್ರತಿಯೊಂದು ಮಠದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಮ್ಮದೆಯಾದ ಸೇವೆ ಸಲ್ಲಿಸುತ್ತಿದ್ದೇವೆ ಆ ಕಾರ್ಯಕ್ಕಾಗಿ ಇಂದು ಹೊನ್ನನುಡಿ ಕನ್ನಡ ದಿನಪತ್ರಿಕೆ ಸಂಪಾದಕರಾಗಿ ಪತ್ರಿಕಾರಂಗದಲ್ಲಿ ಬಾಗಲಕೊಟ ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷನಾಗಿ ಪೂಜ್ಯರಿಂದ, ಈ ಮಣ್ಣಿನ ಶಕ್ತಿಯಿಂದ ನನ್ನಗೆ ಸೇವೆ ಮಾಡಲು ಅವಕಾಶ ಸಿಕ್ಕಿದೆ ಅದರಿಂದ ಶ್ರೀಮಠ ಭಕ್ತರೆಲ್ಲರು ಸೇರಿ ಆದರ್ಶ
ಶ್ರೀಮಠವನ್ನಾಗಿಸಲು ಶ್ರಮಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಚಿತ್ತರಗಿ ಇಲಕಲ್ ದ ಗುರುಮಹಾಂತ ಶ್ರೀಗಳು ವಹಿಸಿದ್ದರು ಶ್ರೀಮಠದ ಅಮರೇಶ್ವರ ದೇವರು ನೇತೃತ್ವ ವಹಿಸಿದ್ದರು
ಇದೇ ಸಂಧರ್ಭದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾಂವಿಯ ಜಿ,ಎಚ್, ಪಿ.ಎಸ್. ಜಿ.ಪಿ.ಟಿ.ಸಿ. ಶಿಕ್ಷಕ ಮುತ್ತು ವಡ್ಡರ ರಾಜೀವಗಾಂಧಿ ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎ.ಬಿ.ಮೂಲಿಮನಿ . ಕಜಾಪ ತಾಲುಕ್ಷಾಧ್ಯಕ್ಷ ಶಿಕ್ಷಕ ಬಿ.ಡಿ. ಚಿತ್ತರಗಿ ಇತರರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.
ಚಂದ್ರು ಹಲಕಾವಟಗಿ ಪ್ರಾರ್ಥಿಸಿದರು. ಅರುಣೋದಯ ದುದ್ದಗಿ ವಂದಿಸಿದರು ಶಿಕ್ಷಕಿ ಗೀತಾ ತಾರಿವಾಳ ನಿರೂಪಿಸಿದರು.