ಮಾನವ ಹಕ್ಕುಗಳು ನಮಗೆ ಸಂವಿಧಾನದತ್ತವಾಗಿ ಬಂದಿವೆ – ರಮೇಶ ಭೂಸನೂರ

Must Read

ಸಿಂದಗಿ: ಇಂದು ಮಾನವ ಹಕ್ಕುಗಳ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಮನ್ನಣೆ ಸಿಕ್ಕಿದ ಮೇಲೆ ಡಾ|| ಬಿ ಆರ್ ಅಂಬೇಡ್ಕರರವರು ನಮ್ಮ ಸಂವಿಧಾನದ ರಚನಾ ಸಮಿತಿಯಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಉಲ್ಲೇಖವನ್ನು ಮಾಡಿದ್ದಾರೆ. ಮಾನವನ ಹಕ್ಕುಗಳು ನಮಗೆ ಸಂವಿಧಾನದತ್ತವಾಗಿ ಬಂದಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಕ್ಕುಗಳು ಸೈಚ್ಚಾಚಾರ ಆಗಬಾರದು, ಹಕ್ಕುಗಳು ಮಾನವ ಕುಲಕ್ಕೆ ಕೊಡಲಿಯ ಪೆಟ್ಟುಗಳು ಹಾಕಬಾರದು, ಹಕ್ಕುಗಳು ಮಾನವ ಕುಲದ ಉದ್ಧಾರಕ್ಕಾಗಿ ಬಳಕೆ ಆಗಬೇಕು ಎಂದರು.

ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ ಮಾತನಾಡಿ, ನಾಗರಿಕತೆಯ ಪ್ರಾರಂಭದಲ್ಲಿ ಮಾನವನ ಸಂಕಷ್ಟಗಳು ಏನಿತ್ತು ಆ ಇತಿಹಾಸವನ್ನು ನಾವು ತಿಳಿದುಕೊಂಡಾಗ ಇವತ್ತು ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಹಕ್ಕುಗಳ ಮಹತ್ವ ಎಷ್ಟಿದೆ ಎಂದು ದೇಶದಲ್ಲಿ ಮತ್ತು ನಾಡಿನಲ್ಲಿ ಸಮಗ್ರವಾಗಿ ಅಧ್ಯಯನ ಮಾಡಿ ಇತಿಹಾಸವನ್ನು ತಿಳಿದು ಕೊಳ್ಳಲಾರದವನು ಇತಿಹಾಸವನ್ನು ಸೃಷ್ಟಿ ಮಾಡಲಾರ ಎಂದು ಡಾ. ಬಾಬಾಸಾಹೇಬ ಅಂಬೇಡ್ಕರವರೆ ಹೇಳಿದ್ದಾರೆ ಹಾಗಾಗಿ ಕಾಲಾನುಮತದಲ್ಲಿ ಮಹಿಳೆಯರ ಸಂಕಷ್ಟಗಳ ಅಧ್ಯಯನ ಮಾಡಿ ಹಂತ ಹಂತವಾಗಿ ಅವರ ಸಬಲೀಕರಣದ ಅಂಶವನ್ನು ಸಂವಿಧಾನದಲ್ಲಿ ಅಳವಡಿಸಿ ಇಂದು ಆರೋಗ್ಯಪೂರ್ಣವಾದ ಚರ್ಚೆಗೆ ಇಂತಹ ಒಂದು ವೇದಿಕೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿವೃದ್ಧಿಯನ್ನು ನಾವು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನ್ಯಾಯವಾದಿ ಎ ಎಮ್ ಅಂಗಡಿ ಮಾತನಾಡಿ, ಮಾನವ ಹಕ್ಕು ಎಂದರೆ ಇದರಲ್ಲಿ ಮಾನವ ಮತ್ತು ಹಕ್ಕು ಎಂಬ ಎರಡು ಶಬ್ದ ಇದೆ ಮಾನವ ಎಂದರೆ ನಾವು ನೀವೆಲ್ಲರು, ಹಕ್ಕು ಎಂದರೆ ಕಾನೂನಿನಿಂದ ಗುರ್ತಿಸಲ್ಪಟ್ಟ ಮತ್ತು ರಕ್ಷಿಸಲ್ಪಟ್ಟ ಮನುಷ್ಯನ ಹಿತಾಸಕ್ತಿ. ಅಂದರೆ ಮನುಷ್ಯನಿಗೆ ಬೇಕಾಗಿರುವ ಹಿತಾಸಕ್ತಿಯನ್ನು ಕಾನೂನಿನ ರೂಪದಲ್ಲಿ ಅದಕ್ಕೆ ರಕ್ಷಣೆ ನೀಡಬೇಕು, ಅದನ್ನು ನಾವು ಮಾನವ ಹಕ್ಕು ಎಂದು ಹೇಳುತ್ತೇವೆ. ಈ ಮಾನವ ಹಕ್ಕು ಪಾಶ್ಚಾತ್ಯ ದೇಶದಿಂದ ಬಂದಿದ್ದಲ್ಲ ಬದಲಾಗಿ ನಮ್ಮ ದೇಶದಲ್ಲಿ ಪಾಚೀನ ಕಾಲದಿಂದಲೇ ಇತ್ತು ವಸುಧೈವ ಕುಟುಂಬಕಂ ಹಾಗೂ ಸರ್ವೇಜನ ಸುಖಿನೋ ಭವಂತು ಅಂದರೆ ಎಲ್ಲ ಜನರು ಶಾಂತ ರೀತಿಯಿಂದ ಇರಲು ನಾವು ಬಯಸುತ್ತೇವೆ. ಡಿಸೆಂಬರ್ 10 ರಂದು ಅಸೆಂಬ್ಲಿಯಲ್ಲಿ ಈ ಭೂಮಿ ಮೇಲೆ ವಾಸವಾಗಿರುವ ಪ್ರತಿಯೊಬ್ಬ ಮನುಷ್ಯನಿಗೂ ಈ ರೀತಿ ಹಕ್ಕುಗಳಿವೆ ಜಾತಿ, ಜನಾಂಗ, ಧರ್ಮ, ಲಿಂಗ, ವರ್ಣಬೇದ ಮತ್ತು ಭೂ ಪ್ರದೇಶದ ಮೇಲೆ ನಿರಂತರವಾಗಿ ಮಾನವರ ಮೇಲೆ ಹಿಂಸೆ, ಬಲತ್ಕಾರ, ಶೋಷಣೆ ನಡೆಯುತ್ತಲೇ ಬಂದಿದೆ ಇವುಗಳ ವಿರುದ್ದ ರಕ್ಷಣೆಯನ್ನು ಪಡೆದು ಸುಖಿಯಾಗಿ ಗೌರವಯುತ ಜೀವನ ಸಾಗಿಸಲು ಕಂಡುಕೊಂಡ ಪರಿಹಾರವೇ ಮಾನವ ಹಕ್ಕು ಎಂದು ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಮಾತನಾಡಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸ್ಪೂರ್ತಿ ತಾಲೂಕ ಮಹಿಳಾ ಒಕ್ಕೂಟದ ಅಧ್ಯಕ್ಷ ಸವಿತಾ ಇವಣಿ, ಬ್ರದರ್ ಪೃಥ್ವಿ, ಕಟ್ಟಡ ಕಾರ್ಮಿಕರು, ಯುವಕರು, ಮಹಿಳೆಯರು, ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿಗಳಾದ ಬಸಮ್ಮ, ರಾಜೀವ ಕುರಿಮನಿ, ಶ್ರೀಧರ ಕಡಕೋಳ, ತೇಜಶ್ವಿನಿ ಹಳ್ಳದಕೇರಿನ ನಿರೂಪಿಸಿದರು, ವಿಜಯ್ ವಿ ಬಂಟನೂರ ಸ್ವಾಗತಿಸಿದರು. ಮಲಕಪ್ಪ ಹಲಗಿ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group