spot_img
spot_img

ಹುಮನಾಬಾದ: ಜನಪ್ರತಿನಿಧಿಗಳು ಮೂವರು, ಆದರೆ ಸಮಸ್ಯೆ ಹಲವಾರು

Must Read

spot_img
- Advertisement -

ಬೀದರ – ಮೂವರು ಸಹೋದರರು. ಒಬ್ಬರು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು ಆದರೂ ಗಡಿ ಜಿಲ್ಲೆ ಬೀದರ ಎಂಬುದು ಹಿಂದುಳಿದ ಪ್ರದೇಶ ಯಾಕೆ ಕರೆಯುತ್ತಾರೆ ಅಂದರೆ ಈ ಒಂದು ಸ್ಟೋರಿ ಉದಾಹರಣೆ.

ರಾಜ್ಯ ಸರ್ಕಾರ ಬಡವರಿಗಾಗಿ ಹಲವು ಯೋಜನೆಗಳ ಅಡಿಯಲ್ಲಿ ಪೌಷ್ಟಿಕಾಹಾರ ನೀಡಿ ಎಂದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಮಾಜಕಲ್ಯಾಣ ಇಲಾಖೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿದೆ.ಆದರೆ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣವನ್ನು ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತಾರೆ.

- Advertisement -

ಹುಮನಾಬಾದ ಕ್ಷೇತ್ರ ಇಡೀ ರಾಜ್ಯದಲ್ಲಿ ಒಂದು ಕೇಂದ್ರ ಬಿಂದು ಆಗಿದೆ.. ಒಂದೇ ಕುಟುಂಬದಲ್ಲಿ ಮೂವರು ಜನಪ್ರತಿನಿಧಿಗಳು. ಒಬ್ಬರು ಕಾಂಗ್ರೆಸ್ ಶಾಸಕರು. ಇನ್ನೂ ಇಬ್ಬರು ತಮ್ಮಂದಿರು ವಿಧಾನ ಪರಿಷತ್ ಸದಸ್ಯರು.

ಮೂವರು ಚುನಾಯಿತ ಸದಸ್ಯರು ಇದ್ದರೂ ಕೂಡ ಇಲ್ಲಿನ ಹಾಸ್ಟೆಲ್ ವ್ಯವಸ್ಥೆ ನೋಡಿದರೆ ಅಯ್ಯೋ ದೇವರೇ ಅನಿಸುತ್ತದೆ. ವಿದ್ಯಾರ್ಥಿಗಳನ್ನು ಈ ಹಾಸ್ಟೆಲ್ ಗಳಲ್ಲಿ ತಂದೆ ತಾಯಿ ಬಿಟ್ಟು ಹೋಗಿ, ಮಕ್ಕಳು ಶಾಲೆ ಕಲಿತು ಒಳ್ಳೆಯ ಕೆಲಸಕ್ಕೆ ಸೇರಿಕೊಂಡರೆ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂದು ಕನಸು ಕಂಡಿರುತ್ತಾರೆ. ಮಕ್ಕಳಿಗೆ ಶಾಲೆಯ ಜೊತೆ ವಸತಿ ವ್ಯವಸ್ಥೆಯೂ ಚೆನ್ನಾಗಿರಬೇಕಾಗುತ್ತದೆ. ಆದರೆ ಈ ಕ್ಷೇತ್ರದ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಶೋಚನೀಯವಾಗಿದೆ. ಯಾರಿಗೂ ಊಟ ಹೋಗದ ಪರಿಸ್ಥಿತಿ. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಇದ್ದರೂ ಕುಡಿಯುವ ನೀರಿನಲ್ಲಿ ಹುಳು ಕಾಣುತ್ತವೆ. ತರಕಾರಿ ಎಲ್ಲಿ ಅಂದರೆ ಅಲ್ಲಿ ಬಿದ್ದಿದೆ. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಅವರಿಗೆ ವಿಚಾರಿಸಿದರೆ ನಮ್ಮ ಶಾಸಕರಿಗೆ ಕೇಳಿ ಎಂದು ಉಡಾಫೆಯ ಉತ್ತರ ನೀಡುತ್ತಾರೆ.

- Advertisement -

ಮೂವರೂ ಅಣ್ಣ ತಮ್ಮ ಹುಮನಾಬಾದ ಕ್ಷೇತ್ರದಲ್ಲಿ ಅಧಿಕಾರದಲ್ಲಿದ್ದರೂ ಯಾವುದೇ ಪ್ರಯೋಜನವಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳು ಆಡಿದ್ದೇ ಆಟ, ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟ. ಇದೆಲ್ಲ ಗೊತ್ತಿದ್ದರೂ ಕ್ಯಾರೆ ಎನ್ನದ ಜನಪ್ರತಿಧಿಗಳು.

ಹುಮನಾಬಾದ ತಾಲೂಕಿನ ಹಳ್ಳಿಖೇಡ(ಕೆ)ಗ್ರಾಮದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಮ್ಯಾಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕರು ಅಡಿದ್ದೆ ಆಟವಾಗಿದೆ. ವಿದ್ಯಾರ್ಥಿಗಳು ಇರಬೇಕಾದ ವಸತಿ ನಿಲಯದಲ್ಲಿ ಎಮ್ಮೆ,ನಾಯಿ, ಕೋಳಿ, ಜೊತೆಗೆ ಕಾರ್ಮಿಕರು ವಾಸ ಮಾಡಬೇಕಿದೆ.ವಸತಿ ನಿಲಯದಲ್ಲಿ ಮಕ್ಕಳಿಗೆ ಸಿಗಬೇಕಾದ ಮೂಲ ಸೌಕರ್ಯಗಳ ಕೊರತೆ, ಹರಿದ ಹಾಸಿಗೆಗಳು, ಸ್ಥಗಿತಗೊಂಡ ಜನರೇಟರ್, ಗಬ್ಬು ಹಿಡಿದ ಶೌಚಾಲಯ,ಅಶುದ್ಧ ಕುಡಿಯುವ ನೀರು, ರಾತ್ರಿ ವೇಳೆಯಲ್ಲಿ ವಿದ್ಯುತ್ ಸಮಸ್ಯೆ….ಹೀಗೆ ಎಲ್ಲ ಅಸ್ತವ್ಯಸ್ತ.

ಕಲ್ಯಾಣ ಕರ್ನಾಟಕ ಭಾಗ ಇದೆ ಕಾರಣಕ್ಕೆ ಹಿಂದುಳಿದ ಪ್ರದೇಶ ಎಂದು ಕರೆಯುತ್ತಾರೆ ಎಂಬುದು ಇಡೀ ದೇಶಕ್ಕೆ ಮತ್ತು ರಾಜ್ಯಕ್ಕೆ ಗೊತ್ತು. ಇದನ್ನೆಲ್ಲ ನೋಡುತ್ತಿದ್ದರೆ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ತೆಗೆದು ಹಾಕಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಬಹುದು.

ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಹಾಸ್ಟೆಲ್ ಅವ್ಯವಸ್ಥೆ ಒಂದು ಉದಾಹರಣೆ. ಇನ್ನೂ ಮುಂದಾದರು ಜಿಲ್ಲಾ ಆಡಳಿತ ಎಚ್ಚತ್ತುಕೊಂಡು ಬಡ ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿಕೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಮನಮೋಹನ ಸಿಂಗ್ ನಿಧನ : ಕಡಾಡಿ ಸಂತಾಪ

ಮೂಡಲಗಿ: ಕೇಂದ್ರ ಹಣಕಾಸು ಸಚಿವರಾಗಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ, ಪ್ರಧಾನ ಮಂತ್ರಿಗಳಾಗಿ ಅನೇಕ ಹುದ್ದೆಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group