ಬೀದರ – ಹೆಂಡತಿಯು ಮಕ್ಕಳೊಡನೆ ಬಿಟ್ಟು ಹೋಗಿದ್ದಕ್ಕೆ ಮನ ನೊಂದ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಗೆ ಪ್ರಯತ್ನಿಸಿದ ಘಟನೆ ನಡೆದಿದ್ದು ಆತ ಸೇತುವೆಯಿಂದ ನದಿಗೆ ಹಾರುವ ವಿಡಿಯೋ ವೈರಲ್ ಆಗಿದೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ೩೮ ವರ್ಷದ ಪ್ರಭಾಕರ ಸೂರ್ಯವಂಶಿ ನದಿಗೆ ಹಾರಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈತನ ಪತ್ನಿ ಕೆಲವು ವರ್ಷಗಳ ಹಿಂದೆ ಈತನನ್ನು ಬಿಟ್ಟು ಮಕ್ಕಳೊಂದಿಗೆ ಹೋಗಿದ್ದಳು. ಇದರಿಂದ ಈತ ಕುಡಿತದ ಚಟಕ್ಕೆ ದಾಸನಾಗಿದ್ದ. ಈಗ ಮನನೊಂದು ನದಿಗೆ ಹಾರಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಆತನಿಗಾಗಿ ಮೆಹಕರ್ ಪೊಲೀಸರು ಶೋಧ ನಡೆಸಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

