ನಾನು ಒಬ್ಬ ಪಕ್ಷಾತೀತ ಶಾಸಕ – ಅಶೋಕ ಮನಗೂಳಿ

Must Read

ಸಿಂದಗಿ – ಸಿಂದಗಿ ಮತಕ್ಷೇತ್ರ ಹಂತ ಹಂತವಾಗಿ ಅಭಿವೃದ್ಧಿ ಕಡೆ ಸಾಗುತ್ತಿದೆ. ನಾನು ಒಬ್ಬ ಪಕ್ಷಾತೀತ ಶಾಸಕ ಚುನಾವಣೆಯಲ್ಲಿ ಮಾತ್ರ ರಾಜಕಾರಣ. ಕ್ಷೇತ್ರದ ಅಭಿವೃದ್ಧಿ, ನೀರಾವರಿ ವಿಚಾರ ಸೇರಿದಂತೆ ಅಭಿವೃದ್ಧಿ ಪರವಾಗಿರುವ  ವಿವಿಧ ವಿಚಾರಗಳಲ್ಲಿ ನಾನು ಯಾವತ್ತೂ ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಅವರು ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ರವಿವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ಹಮ್ಮಿಕೊಂಡಿರುವ  ಸಾಸಬಾಳ ಎಲ್. ಟಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಂದಾಜು ರೂ. 42 ಲಕ್ಷ ರೂಪಾಯಿಗಳಲ್ಲಿ ಮನೆ ಮನೆಗೆ ನೀರು ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಈ ಕ್ಷೇತ್ರದ ಜನತೆಯ ಪರವಾಗಿ ನಾನು ಇದ್ದೇನೆ. ಚುನಾವಣೆ ಮಾಡಿದವರು ನನ್ನವರು ಚುನಾವಣೆ ಮಾಡದಿದ್ದವರು ನನ್ನವರು ನಾನು ಈ ಕ್ಷೇತ್ರದ ಪ್ರತಿನಿಧಿಯಾಗಿ ಎಲ್ಲರ ಏಳಿಗೆಗೆ ಸಿದ್ದನಾಗಿದ್ದೇನೆ. ತಮ್ಮ ನೂರೆಂಟು ಕಾರ್ಯಗಳಿಗೆ ನನ್ನನ್ನ ಮುಕ್ತ ಭಾವದಿಂದ ಸಂಪರ್ಕಿಸಿ ಎಲ್ಲರ ಸಮಸ್ಯೆಗಳಿಗೂ ನಾನು ಸ್ಪಂದಿಸುವ ಸಾಮಾನ್ಯ ಶಾಸಕನಿದ್ದಂತೆ. ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ನೀರು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗ್ರಾಮದ ಪ್ರತಿ ಮನೆಮನೆಗಳಿಗೂ ನೀರನ್ನ ಹರಿಸುವ ಕಾರ್ಯ ಶ್ರೇಷ್ಠವಾಗಿರುವ ಕಾರ್ಯವಾಗಿದೆ. ಈ ಕಾಮಗಾರಿ ವ್ಯವಸ್ಥಿತವಾಗಿ ನಡೆದು ಗ್ರಾಮಸ್ಥರ ಪಾಲಿಗೆ ಉತ್ತಮ ರೀತಿಯಲ್ಲಿ ನೆರವಾಗಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ 108 ಯೋಜನೆಗಳ ಕನಸುಗಳನ್ನು ಕಂಡಿದ್ದೇನೆ ಆ ನನ್ನ ಎಲ್ಲ ಕನಸುಗಳು ನಾನು ಈಡೇರಿಕೆ ಮಾಡೇ ಮಾಡುತ್ತೇನೆ ಜನತೆ ನಮ್ಮ ಅಭಿವೃದ್ಧಿಪರ ಕಾರ್ಯಗಳಿಗೆ ಸದಾ ಮಾರ್ಗದರ್ಶನ, ಸರಕಾರ ನೀಡಬೇಕು ಎಂದರು.

ಇದೆ ಸಂಧರ್ಭದಲ್ಲಿ ,ಗ್ರಾಮ ಪಂಚಾಯತಿ ಅಧ್ಯಕ್ಷರಾದ   ಸೈಫನ ಕೊರವಾರ , ಧರ್ಮರಾಯ ಒಡೆಯರ ಮಲ್ಲಣ್ಣ ಸಾಲಿ. ಬಸವರಾಜ ಮಾರಲಭಾವಿ. ಧರ್ಮಣ್ಣ ರಾಠೋಡ ,ಬಸವರಾಜ ತೆಲ್ಲೂರ, ಬಾಬುಗೌಡ ಬಿರಾದಾರ, ನಿಂಗನಗೌಡ ಡವಳರ ,ನಾಡಗೌಡ ಪೊಲೀಸ,  ಮುದ್ದೇಗೌಡ ಬಿರಾದಾರ, ಶಿವು ಕುದರಗೊಂಡ, ಶರಣಾಗೌಡ ಬಿರಾದಾರ. ಸೇರಿದಂತೆ ಅನೇಕ ರಾಜಕೀಯ ಮುಖಂಡರು ಗ್ರಾಮಸ್ಥರು ಗ್ರಾಮ ಪಂಚಾಯತಿ ಸದ್ಯಸರು ಉಪಸ್ಥಿತಿ ಇದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group