ನಾನೇ ಬ್ರಹ್ಮನಲ್ಲ, ನನ್ನಿಂದ ಬ್ರಹ್ಮನಲ್ಲ, ನಾನ್ಯಾರು?

Must Read

ಅದ್ವೈತದ ಅನುಭವ ಅದ್ಯಯನದಿಂದ ಕಷ್ಟವಿದೆ.ಇಲ್ಲಿ ಅವರವರ ಅನುಭವವನ್ನು ಬರೆದಿಟ್ಟಿದ್ದಾರೆ. ಅದರಲ್ಲಿದ್ದ ಸತ್ಯ,ತತ್ವವನ್ನು ಅಳವಡಿಸಿಕೊಂಡಾಗ ನಮ್ಮಲ್ಲಿ ಒಂದು ಅನುಭವವಾಗುತ್ತದೆ. ಇದು ನಮಗೆ ಸತ್ಯವೆನಿಸಿದರೂ ಅದಕ್ಕಿಂತ ದೊಡ್ಡ ಸತ್ಯದ ಅನುಭವಿಗಳು ಒಪ್ಪದಿದ್ದರೆ ಅಲ್ಲಿ ದ್ವೈತ.

ಹೀಗೇ ಶ್ರೀ ಶಂಕರಾಚಾರ್ಯರ ಕಾಲದಲ್ಲಿಯೇ ಮಹಾಜ್ಞಾನಿಗಳಲ್ಲಿ ದ್ವೈತದ ದ್ವಂದ್ವ,ವಾದ ವಿವಾದಗಳಿತ್ತು ಈಗ ಎಲ್ಲಾ ಓದಿಕೊಂಡಿರುವ ನಮಗೆ ಎಲ್ಲಾ ಒಂದೆ ಎಂದರೆ ನಾವು ಒಪ್ಪಲು ನಮ್ಮಲ್ಲಿ ಆತ್ಮಜ್ಞಾನದ ಕೊರತೆಯಿದೆ.

ವಿಜ್ಞಾನವನ್ನು ಒಳಗಿಟ್ಟುಕೊಂಡು ಆಧ್ಯಾತ್ಮ ಸಾಧನೆ ಮಾಡಲು ಸತ್ಯವೆ ದೇವರಾಗಬೇಕು. ಕೇವಲ ತತ್ವಪ್ರಚಾರಕ್ಕೆ ಧರ್ಮ ರಕ್ಷಣೆ ಆಗೋದಿಲ್ಲ. ಸತ್ಯದ ಅನುಭವ ಅಗತ್ಯ.ಬ್ರಹ್ಮನ ಸೃಷ್ಟಿ ಗೆ ತಕ್ಕಂತೆ ಸ್ಥಿತಿ, ಲಯವೂ ಇರೋವಾಗ ನಮ್ಮ ಸೃಷ್ಟಿಯ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ನಡೆಸಿದರೆ ಉತ್ತಮ ಜ್ಞಾನ.ಅದಕ್ಕೆ ವಿರುದ್ದ ನಡೆದು ಧರ್ಮ ಪುರಾಣ ತಿಳಿದರೆ ಸತ್ಯ ಅರ್ಥವಾಗದೆ ಅಧರ್ಮ ಬೆಳೆದಿದೆ.

ನಾನು ಹೋದರೆ ಅದ್ವೈತ. ನಾನು ಇದ್ದರೆ ದ್ವೈತ ಅಂದರೆ ಜೀವವೇ ನಾನೆಂಬುದಾಗಿರುವಾಗ ಪರಮಾತ್ಮನ ಕಾಣಲು ನಾನು ಹೋಗಬೇಕೆಂದು ಸಂನ್ಯಾಸಿಗಳಿಗೆ ಸಾಧ್ಯವಿತ್ತು. ಸಂಸಾರದಲ್ಲಿದ್ದೂ ಆಧ್ಯಾತ್ಮ ಸಾಧನೆ ಮಾಡಿದ ರಾಮಕೃಷ್ಣ ಪರಮಹಂಸರ ಜೀವನದಲ್ಲಿಯೂ ನಾನು ಇತ್ತು.

ಇನ್ನು ಈಗ? ನಾನೇ ದೇವರು ಎನ್ನುವವರೆ ಹೆಚ್ಚು. ಹಾಗಾದರೆ ನಾನ್ಯಾರು? ಪ್ರಶ್ನೆಗೆ ಉತ್ತರ ಹೊರಗಿಲ್ಲ.ಒಳಗೇ ಅಡಗಿದೆ. ಬ್ರಹ್ಮಾಂಡದೊಳಗಿರುವ ನಾನೇ ಬ್ರಹ್ಮನಲ್ಲ. ಆದರೆ ಬ್ರಹ್ಮಾಂಡದೊಳಗಿನ ಸೃಷ್ಟಿ ಗೆ ಕಾರಣವೆ ನಾನು. ನಾನು ಹೋದರೆ ಸೃಷ್ಟಿ ಇಲ್ಲವೆ? ನಾನಿಲ್ಲದಿದ್ದರೂ ಸೃಷ್ಟಿ ಇರೋವಾಗ ನಾನೆಂಬುದಿಲ್ಲ ಎನ್ನುವುದು ಸತ್ಯವಲ್ಲವೆ? ನಾನೇ ಎಲ್ಲವನ್ನೂ ಸೃಷ್ಟಿ ಮಾಡಿರುವುದಾದರೆ ನಾನಿದ್ದೇನೆ.

ಜೊತೆಗೆ ನೀನೂ ಅವನೂ ಅವಳೂ ಇರೋವಾಗ ನಾನೇ ಎಲ್ಲಾ ನನ್ನಿಂದಲೇ ಎನ್ನುವ ಅಹಂಕಾರ ಸ್ವಾರ್ಥ ಬಿಟ್ಟರೆ ಅದ್ವೈತ. ಆತ್ಮವಿಶ್ವಾಸಕ್ಕೂ ಅಹಂಕಾರಕ್ಕೂ ವ್ಯತ್ಯಾಸವಿದ್ದ ಹಾಗೆ. ನಾನೇ ಬ್ರಹ್ಮನಲ್ಲ.ನನ್ನಿಂದ ಬ್ರಹ್ಮನಲ್ಲ. ನಾನ್ಯಾರು?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

Latest News

ಅರಳಿಮಟ್ಟಿ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದ ಕಲಾ ಉತ್ಸವಕ್ಕೆ ಆಯ್ಕೆ

ಮೂಡಲಗಿ: ತಾಲ್ಲೂಕಿನ ಅರಳಿಮಟ್ಟಿ ಪಿಎಂಶ್ರೀ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು ನವದೆಹಲಿಯ ಎನ್‌ಸಿಆರ್‌ಟಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ನಡೆಸುವ ಕಲಾ ಉತ್ಸವ ಸ್ಪರ್ಧೆಯ ವಾದ್ಯ...

More Articles Like This

error: Content is protected !!
Join WhatsApp Group