ಸಿಂದಗಿ: 2030 ರೊಳಗೆ ಹೆಚ್.ಐ.ವಿ/ಏಡ್ಸ್ ಹಪೆಟೈಟಸ್ ಬಿ ಮತ್ತು ಸಿಫಿಲಿಸ್ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಬೆಂಗಳೂರು ಇವರು ಹೆಚ್.ಐ.ವಿ/ಏಡ್ಸ್, ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ನಿಯಂತ್ರಿಸಲು ಮತ್ತು ತಡೆಗಟ್ಟಲು ಬದ್ಧವಾಗಿವೆ ಎಂದು ಐ.ಸಿ.ಟಿ.ಸಿ ಕೇಂದ್ರದ ಆಪ್ತ ಸಮಾಲೋಚಕ ಮಲ್ಲೇಶಪ್ಪ ಪಿ ಸಾಗರ ಹೇಳಿದರು.
ಪಟ್ಟಣದ ಬಸ್ ಡಿಪೋದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಐ.ಸಿ.ಟಿ.ಸಿ ಕೇಂದ್ರ, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ವಿಜಯಪುರ ಇವರ ಸಹಯೋಗದಲ್ಲಿ 2ನೇ ಹಂತದ ಸಮುದಾಯ ಆಧಾರಿತ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಹೆಚ್.ಐ.ವಿ/ಏಡ್ಸ್ ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ನಿಯಂತ್ರಿಸಲು ಮತ್ತು ತಡೆಗಟ್ಟಲು ನಾವುಗಳು ಸತತ ಪ್ರಯತ್ನ ಪಡುತ್ತಿದ್ದೇವೆ ಜನರಲ್ಲಿ ಹೆಚ್.ಐ.ವಿ/ಏಡ್ಸ್ , ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ಬಗ್ಗೆ ಅರಿವು ಮೂಡಿಸಬೇಕಾಗಿದೆ.
ಆದ್ದ ರಿಂದ ಎಲ್ಲರೂ ಆರೋಗ್ಯದಿಂದ ಇರಬೇಕಾದರೆ ಕ್ರಮಬದ್ಧ ತಪಾಸಣೆ ಅಗತ್ಯ, ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ಇತ್ತೀಚಿನ ದಿನ ಮಾನಗಳಲ್ಲಿ 30 ವರ್ಷ ಮೇಲ್ಪಟ್ಟ ಜನ ಸಾಮಾನ್ಯರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಂಡು ಬರುತ್ತಿದ್ದು ಇದರಿಂದ ಮುಂದೆ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಪ್ರತಿಯೋಂದು ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ತಾಲೂಕಾ ಆಸ್ಪತ್ರೆಯ ಡಾ. ಎ.ಎ.ಮಾಗಿ ಮಾತನಾಡಿ, ಉಚಿತ ಹೆಚ್.ಐ.ವಿ, ಹೆಪಟೈಟಸ್ ಬಿ ಮತ್ತು ಸಿಫಿಲಿಸ್ ಬಿ.ಪಿ, ಶುಗರ್, ಆಭಾಕಾರ್ಡ್, ಟಿ.ಬಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಘಟಕ ವ್ಯವಸ್ಥಾಪಕ ರೇವಣಸಿದ್ದ ಎಮ್ ಖೈನೂರ ಮಾತನಾಡಿ, ಹಿಂದೊಂದು ಸಂದರ್ಭದಲ್ಲಿ ಮನುಷ್ಯನಿಗೆ ಹೆಚ್.ಐ.ವಿ/ಏಡ್ಸ್ ತಗುಲಿದೆ ಎಂದರೆ ಸಮಾಜ ಅವರನ್ನು ತಾರತಮ್ಯ ಮತ್ತು ಕಿರುಕುಳ ನೀಡುವಂತ ಸನ್ನಿವೇಶಗಳನ್ನು ಕಂಡಿದ್ದೇವೆ ಸದ್ಯ ಆ ಸೊಂಕು ತಗುಲಿದೆ ಎಂದರೆ ಸಮಾಜದಲ್ಲಿ ಎಲ್ಲ ರೀತಿಯಲ್ಲಿ ಭಾಗಿಯಾಗಬಹುದು ಮತ್ತು ಎಲ್ಲರಂತೆ ಜೀವನ ನಡೆಸಬಹುದು ಅದಕ್ಕಾಗಿ ಸರಕಾರ ಮಾತ್ರೆಗಳನ್ನು ಕಂಡು ಹಿಡಿದಿದೆ ಹಿಂದೆ ಮಾರಕ ರೋಗವಾಗಿದ್ದ ಈ ಏಡ್ಸ್ ಇಂದು ಅದು ಎಲ್ಲ ರೋಗಗಳಂತೆ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಆನಂದ ಬಡಿಗೇರ, ನವಸ್ಪೂರ್ತಿ ಸಂಘದ ಆಪ್ತ ಸಮಾಲೋಚಕ ಡಿ.ಎಮ್.ಸಜ್ಜನ ಪ್ರಾರ್ಥನೆ ಗೀತೆಯ ಹಾಡಿದರು. ನಂತರ ಕಾರ್ಯಕ್ರಮದ ಜಾಗೃತಿ ನಾಮ ಫಲಕಗಳ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.