ಸಿಂದಗಿ: ಕಲಬುರಗಿಯ ರಾಜಾಪೂರ ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘವು ನೀಡುವ ೨೦೨೫—೨೬ನೇ ಸಾಲಿನ ರಾಜ್ಯಮಟ್ಟದ “ಆದರ್ಶ ಶಿಕ್ಷಕ” ಪ್ರಶಸ್ತಿಗೆ ಸಿಂದಗಿಯ ಓಂಕಾರ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಅರ್ಥಶಾಸ್ತ್ರ ಉಪನ್ಯಾಸಕ ಪರಶುರಾಮ ಡಿ. ಬಿರಾದಾರ ಆಯ್ಕೆಯಾಗಿದ್ದಾರೆ.
ಅವರು ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ, ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ನೀಡಿರುವ ಮೌಲ್ಯಯುತ ಕೊಡುಗೆ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಯನ್ನು ಅಕ್ಟೋಬರ್ ೫ರಂದು ರಾಷ್ಟ್ರೀಯ ಶಿಕ್ಷಕರ ದಿನದಂದು ಕಲಬುರಗಿಯ ಡಾ. ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ (ಹೊಸ ಜಯದೇವ ಆಸ್ಪತ್ರೆ ಎದುರುಗಡೆ, ಅನ್ನಪೂರ್ಣಕ್ರಾಸ್) ನಡೆಯುವ ವಿಸ್ತೃತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

