spot_img
spot_img

ಸಹಕಾರಿ ಸಂಘಗಳು ಹೆಚ್ಚಾಗಿ ಬೆಳೆದರೆ ಜನಸಾಮಾನ್ಯರಿಗೆ ಅನುಕೂಲ

Must Read

- Advertisement -

ಸಿಂದಗಿ: ರಾಷ್ಟ್ರೀಕೃತ ಬ್ಯಾಂಕುಗಳು ನೂರೆಂಟು ದಾಖಲೆಗಳನ್ನು ಕೇಳಿ ಸಾಲ ಮಂಜೂರು ನೀಡಲು ಮುಂದಾಗುತ್ತಾರೆ ಆದರೆ ಸಹಕಾರಿ ಬ್ಯಾಂಕುಗಳು ಮನುಷ್ಯನ ಮುಖ ನೋಡಿ ಅಥವಾ ಅವನ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಲ ನೀಡುತ್ತದೆ ಅದಕ್ಕೆ ರಾಜ್ಯದಲ್ಲಿ ಸಹಕಾರಿ ಸಂಘಗಳು ಅಪಾರವಾಗಿ ಬೆಳೆದು ಜನ ಮನ್ನಣೆ ಪಡೆದುಕೊಂಡಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಸಂಘದ 18ನೇ ಸರ್ವ ಸಾಧಾರಣ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಾಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದಕ್ಕೆ ಪೂರಕವಾಗಿ ಬ್ಯಾಂಕಿನ ಅಡಳಿತ ಮಂಡಳಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಬ್ಯಾಂಕುಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.  18 ವರ್ಷಗಳ ಹಿಂದೆ ಅಲ್ಪ ಸದಸ್ಯರಿಂದ ಪ್ರಾರಂಭಗೊಂಡ ಹಡಪದ ಅಪ್ಪಣ್ಣ ಸಹಕಾರಿ ಬ್ಯಾಂಕು ಇಂದು ಸಾವಿರಾರು ಸದಸ್ಯರನ್ನು ಹೊಂದಿದ್ದಲ್ಲದೆ ರೂ. 8 ಕೋಟಿಗೂ ಅಧಿಕ ಹಣದ ವ್ಯವಹಾರ ಮಾಡಿ ಸಾವಿರಾರು ಜನರ ಕಷ್ಠಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದೆ ಗ್ರಾಹಕರು ಬ್ಯಾಂಕಿನ ಸರ್ವತೊಮುಖ ಬೆಳವಣಿಗೆಗೆ ಕಾರಣಿಕರ್ತರಾಗಿ ಎಂದು ಮನವಿ ಮಾಡಿಕೊಂಡ ಅವರು ಈ ಬ್ಯಾಂಕಿಗೆ ಮನಗೂಳಿ ಮನೆತನಕ್ಕೆ ಅವಿನಾವಭಾವ ಸಂಬಂಧವಿದೆ ಹಾಗೆ ಮುಂದೆ ಇದರ ಬೆಳವಣಿಗೆಗೆ ನನ್ನ 5 ವರ್ಷದ ಅವಧಿಯಲ್ಲಿ ಸರಕಾರಿ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಮಾತನಾಡಿ, ಮೊದಲು ಬ್ಯಾಂಕುಗಳು ಅಂದರೆ ಪ್ರಬಲರ ಮತ್ತು ಶ್ರೀಮಂತರ ಸ್ವತ್ತಾಗಿದ್ದವು ಆದರೆ ಇಂದು ಪ್ರತಿಯೊಂದು ಹಳ್ಳಿಗಳಲ್ಲಿ ಸಹಕಾರಿ ಸಂಘಗಳು ಹುಟ್ಟಿಕೊಂಡು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಮತ್ತು ಬೆಳವಣಿಗೆಯ ಪ್ರತೀಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಈ ರಾಜ್ಯದಲ್ಲಿ ದೊಡ್ಡ ದೊಡ್ಡ ಮಹನೀಯರ ಹೆಸರಲ್ಲಿ ಸಹಕಾರಿ ಸಂಘಗಳು ಹುಟ್ಟಿಕೊಂಡಿವೆ ಆದರೆ ಕಾಯಕ ಶರಣರ ಹೆಸರಲ್ಲಿ ಹೆಸರಲ್ಲಿ ಸಂಘಗಳು ತೆರೆದಿರುವುದು ವಿರಳ. ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣನವರ ಹೆಸರಲ್ಲಿ ಹೆಸರಲ್ಲಿ ಬ್ಯಾಂಕು ತೆರೆದಿರುವ ಕಾರ್ಯ ಶ್ಲಾಘನೀಯ ಎಂದರು.

- Advertisement -

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಬ್ಯಾಂಕುಗಳು ಬೆಳೆಯಬೇಕಾದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿ ಬಹುಮುಖ್ಯ. ಅಲ್ಲದೆ ಗ್ರಾಹಕರು ತಮ್ಮ ಸಮಸ್ಯೆಗಳ ನಿವಾರಣೆಗೆ ಪಡೆದ ಸಾಲ ಸಕಾಲಕ್ಕೆ ಮರು ಪಾವತಿ ಮಾಡಿದ್ದಾದರೆ ಬ್ಯಾಂಕುಗಳು ಅಭಿವೃದ್ಧಿ ಮಾತ್ರವಲ್ಲದೆ ಮತ್ತೊಬ್ಬರಿಗೆ ಸಹಾಯ ಮಾಡಲು ಅನೂಕೂಲವಾಗುತ್ತದೆ. ಅದಕ್ಕೆ ಸಿಬ್ಬಂದಿಗಳು ಗ್ರಾಹಕರ ಪರಿಪೂರ್ಣ ಮಾಹಿತಿ ಪಡೆದು ಸಾಲ ನೀಡಬೇಕು ಎಂದು ಸಲಹೆ ನೀಡಿದ ಅವರು ಸಣ್ಣ ಸಣ್ಣ ಸಮೂದಾಯಗಳಿಗೆ ರಾಜಕೀಯ ಪ್ರವೇಶ ವಿರಳ ಅದನ್ನು ಜನಪ್ರತಿನಿಧಿಯಾದವರು ಅವರನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಗುರುದೇವಾಶ್ರಮದ ಪೀಠಾಧ್ಯಕ್ಷ ಶಾಂತಗಂಗಾಧರ  ಸ್ಡಾಮೀಜಿ ಆಶಿರ್ವಚನ ನೀಡಿದರು. ಬ್ಯಾಂಕ ಅಧ್ಯಕ್ಷ ಶಿವಾನಂದ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಎಸ್‍ಎಸ್ ಎಲ್ ಸಿ ಪರಿಕ್ಷೆಯಲ್ಲಿ ಹಡಪದ ಸಮಾಜದ ವಿದ್ಯಾರ್ಥಿನಿ ನೂರಕ್ಕೆ 91 ಅಂಕ ಪಡೆದ ರೇಷ್ಮಾ ರೇವೂರ ಅವರನ್ನು ಗೌರವಿಸಲಾಯಿತು. 

- Advertisement -

ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಾಂತವೀರ ಬಿರಾದಾರ, ಹಡಪದ ಅಪ್ಪಣ್ಣ ಬ್ಯಾಂಕಿನ ನಿರ್ದೇಶಕರಾದ ಶ್ರಿಮತಿ ನಾಗಮ್ಮ ಪರಶುರಾಮ, ಕಾಶೆ, ಶ್ರೀಶೈಲ, ಸಂಗಪ್ಪ ಹಡಪದ, ಚಿದಾನಂದ, ದೊಡ್ಡಪ್ಪ, ಹಡಪದ, ಕಂಠಪ್ಪ. ಮಹಾದೇವಪ್ಪ, ಹಡಪದ, ರಾಜು, ಕಲ್ಲಪ್ಪ, ನಾವಿ, ಸುಭಾಸ. ಮಲ್ಲಪ್ಪ, ದೇವರನಾವದಗಿ, ಲಕ್ಷ್ಮಣ. ಈರಪ್ಪ, ನಾವಿ, ಸುರೇಶ. ನಾಮದೇವ, ಶಿಂಧೆ, ಶ್ರೀಮತಿ ವಿಜಯಲಕ್ಷ್ಮೀ, ಶಿವಾನಂದ. ಹಡಪದ, ಶ್ರೀಮತಿ ಮಂಜುಶ್ರೀ ಮಂಜುನಾಥ, ಹಡಪದ, ಕಾರ್ಯದರ್ಶಿ ಮಲ್ಲಪ್ಪ, ಮಡಿವಾಳಪ್ಪ ಹಡಪದ ವೇದಿಕೆ ಮೇಲಿದ್ದರು.

ರಾಜು ನಾವಿ ಸ್ವಾಗತಿಸಿದರು. ಈ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group