Homeಸುದ್ದಿಗಳುಸಂವಿಧಾನದ ವಿರುದ್ಧವಾಗಿ ನಡೆದರೆ ಅದು ಜನರಿಗೆ ಮಾಡಿದ ದ್ರೋಹ - ಸಿದ್ಧರಾಮಯ್ಯ

ಸಂವಿಧಾನದ ವಿರುದ್ಧವಾಗಿ ನಡೆದರೆ ಅದು ಜನರಿಗೆ ಮಾಡಿದ ದ್ರೋಹ – ಸಿದ್ಧರಾಮಯ್ಯ

spot_img

ಸಿಂದಗಿ: ಪರಧರ್ಮ ಸಹಿಷ್ಣುತೆ, ಸಹಬಾಳ್ವೆ ಇದು ಸಂವಿಧಾನದ ಅಡಿಪಾಯ ಇದನ್ನು ಯಾರು ಮರೆಯಲಿಕ್ಕೆ ಸಾಧ್ಯವಿಲ್ಲ ಆದರೆ ಕೇಂದ್ರ, ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಸಂವಿಧಾನದ ಗೌರವವಿಲ್ಲ. ಯಾರೆ ಅಧಿಕಾರಕ್ಕೆ ಬಂದರೂ ಕೂಡಾ ಆ ಸರಕಾರ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವುದು ಅವರ ಆದ್ಯ ಕರ್ತವ್ಯ ಸಂವಿಧಾನ ವಿರುದ್ಧ ನಡೆದು ಕೊಂಡರೆ ಈ ಜನರಿಗೆ ಮಾಡುತ್ತಿರುವ ಜನದ್ರೋಹವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಬಿಜೆಪಿಗೆ ಕುಟುಕಿದರು.

ತಾಲೂಕಿನ ಮಲಘಾಣ ಗ್ರಾಮದಲ್ಲಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಡಾ. ಅಂಬೇಡ್ಕರರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ನಮ್ಮ ಸಮಾಜ ಬಹುತ್ವ ಸಮಾಜ ಇಲ್ಲಿ ಅನೇಕ ಜಾತಿಗಳು, ಅನೇಕ ಬಾಷೆಗಳು, ಅನೇಕ ಪ್ರಾಂತ್ಯಗಳು ಈ ದೇಶದಲ್ಲಿವೆ. ಈ ದೇಶಕ್ಕೆ ಅತ್ಯಂತ ಅಗತ್ಯವಾದ ಸೂಕ್ತ ವಿಶ್ವಶ್ರೇಷ್ಠವಾದ ಸಂವಿಧಾನ ಕೊಟ್ಟಿದ್ದನ್ನು ನಾವ್ಯಾರು ಮರೆವಂತಿಲ್ಲ. ಡಾ. ಅಂಬೇಡ್ಕರರವರು ಕರಡು ಸಮಿತಿ ಅಧ್ಯಕ್ಷರಾಗಿ ಸಂವಿಧಾನವನ್ನು ರಚಿಸದಿದ್ದರೆ ಸಮಾನ ಅವಕಾಶ, ಸಮಸಮ ಸಮಾಜ ನಿರ್ಮಾಣ ಮಾಡತಕ್ಕ ಸಂದರ್ಭ ನಾವ್ಯಾರು ನೋಡುತ್ತಿರಲ್ಲಿಲ್ಲ. ಎಲ್ಲ ಸಮಾಜಗಳನ್ನು ಸಮಾನ ಗೌರವ ಹಾಗೂ ಸಮಾನ, ಸಮಾಜದ ಕಟ್ಟಕಡೆಯ ವ್ಯಕ್ತಿಯು ಸೌಲಭ್ಯದಿಂದ ವಂಚಿತರಾಗಬಾರದು ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎನ್ನುವ ನಿಲುವು ಹೊಂದಿ ಬದ್ಧತೆಯಿಂದ ಸರಕಾರ ನಡೆಸಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಅಂತಹ ಧ್ಯೇಯ ಧೋರಣೆಗಳನ್ನು ಇಟ್ಟುಕೊಂಡ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿಯವರು ಡಾ. ಅಂಬೇಡ್ಕರ ಪ್ರತಿಮೆ ಸ್ಥಾಪನೆಗೆ ಸಹಾಯ ಮಾಡಿದ್ದು ಅವರ ಆತ್ಮಕ್ಕೆ ಎಲ್ಲ ದಲಿತ ಸಂಘಟನೆಗಳ ಪರವಾಗಿ ಶಾಂತಿ ಸಿಗಲೆಂದು ಕೋರುವೆ ಎಂದರು.

ಕಳೆದ ಅಧಿಕಾರಾವಧಿಯಲ್ಲಿ 130 ಕೋಟಿ ಜನಸಂಖ್ಯೆವುಳ್ಳ ಇಡೀ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಾರು ಹಸಿವಿನಿಂದ ಮಲಗಬಾರದು ಎನ್ನುವ ನಿಟ್ಟಿನಲ್ಲಿ 4ಕೋಟಿ 30 ಲಕ್ಷ ಜನರಿಗೆ ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ಕೊಟ್ಟಂತ ಸರಕಾರ.ಅಂಬೇಡ್ಕರ ಅಭಿವೃದ್ಧಿ ನಿಗಮದಲ್ಲಿ ಸಾಲ ಪಡೆದವರೆಲ್ಲರಿಗೂ ಸಾಲ ಮನ್ನಾ ಮಾಡಿದ್ದು ಮೊದಲ ಸರಕಾರ. ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ರೂ. 29669 ಕೋಟಿ ಅನುದಾನ ಮಿಸಲಿಟ್ಟಿದ್ದನ್ನು ಈಗೀನ ಬಿಜೆಪಿ ಸರಕಾರ 14 ಸಾವಿರ ಕೋಟಿ ಅನುದಾನ ಕಸಿದುಕೊಂಡಿದೆ, ದಲಿತರಿಗೆ ನಿರೂದ್ಯೋಗಿಗಳಿಗೆ ವಾಹನ ಖರೀದಿಗೆ ರೂ 5 ಲಕ್ಷ ಸಬ್ಸಿಡಿ ಕಸಿದುಕೊಂಡು ರೂ. 1 ಲಕ್ಷಕ್ಕೆ ಇಳಿಸಿದೆ ಇದೇನಾ ದಲಿತರ ಮೇಲಿನ ಕಾಳಜಿ ಇಡೀ ಮೀಸಲಾತಿ ಕಲ್ಪಿಸಿಕೊಟ್ಟಿದ್ದೆ ಕಾಂಗ್ರೆಸ್ ಪಕ್ಷ ಮಾತ್ರ ಅದನ್ನು ಬೇರೆ ರೀತಿಯಲ್ಲಿ ತಿರುಚುತ್ತ ಒಡೆದಾಳುವ ನೀತಿಯನ್ನು ಮುಂದಿಟ್ಟು ಅಧಿಕಾರ ನಡೆಸುತ್ತಿದೆ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಡಿಎಸ್‍ಎಸ್ ರಾಜ್ಯ ಸಂಚಾಲಕ ಡಿ.ಜಿ.ಸಾಗರ, ಉಪಸಭಾಪತಿ ಯು.ಟಿ.ಖಾದರ, ಶಿವಾನಂದ ಪಾಟೀಲ, ಮಾಜಿ ಸಚಿವರಾದ ಎಚ್.ಆಂಜನೇಯ, ಎಚ್.ಸಿ.ಮಹದೇವಪ್ಪ, ಮುಖಂಡ ಅಶೋಕ ಮನಗೂಳಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಗುಲಬರ್ಗಾ ಬುದ್ಧವಿಹಾರದ ಸಂಗಪಾಲ ಬಂತೇಜಿ, ಆಸಂಗಿಹಾಳ ಅರೂಢಮಠದ ಶಂಕರಾನಂದ ಮಹಾರಾಜರು, ಪಾಧರ ಅಲ್ವಿನ್, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರಾದ ಯಶವಂತ್ರಾಯಗೌಡ ಪಾಟೀಲ, ಡಾ. ಅಜಯಸಿಂಗ್, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಅಲ್ಲಮಪ್ರಭು ಪಾಟೀಲ, ಪ್ರಕಾಶ ರಾಠೋಡ, ಜಿಲ್ಲಾಧ್ಯಕ್ಷ ರಾಜು ಆಲಗೂರ, ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ, ಮಲ್ಲಣ್ಣ ಸಾಲಿ, ಬಿ.ಆರ್.ಯಂಟಮಾನ, ಎಸ್.ಎಂ.ಪಾಟೀಲ ಗಣಿಹಾರ, ಸುಜಾತಾ ಕಳ್ಳಿಮನಿ, ಮಹಿಬೂಬ ತಾಂಬೋಳಿ(ಎಂ.ಆರ್‍ಟಿ), ವಿನಾಯಕ ಗುಣಸಾಗರ, ಬಿ.ಎಸ್.ಪಾಟೀಲ ಸಾಸನೂರ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

ಡಿಎಸ್‍ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಸ್ವಾಗತಿಸಿದರು. ರಾಜಶೇಖರ ಕೂಚಬಾಳ ನಿರೂಪಿಸಿದರು. ವಿಠ್ಠಲ ಕೊಳ್ಳುರ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯನವರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.

RELATED ARTICLES

Most Popular

error: Content is protected !!
Join WhatsApp Group