ರೆಂಟೆ, ಕುಂಟೆಗಳನ್ನೇ ಮನೆ ದೇವರಾಗಿ ಮಾಡಿಕೊಂಡ್ರೆ ರೈತರ ಬದುಕು ಸಾರ್ಥಕ – ಶ್ರೀ ಚನ್ನಬಸವ ಸ್ವಾಮೀಜಿ

0
539

ಮೂಡಲಗಿ – ಎಲ್ಲರಿಗೂ ಹಲವಾರು ಮನೆ ದೇವರುಗಳಿವೆ ಆದರೆ ರೈತರು ತಮ್ಮ ಹಗ್ಗ, ನೇಗಿಲು, ರೆಂಟೆ, ಕುಂಟೆ, ಎತ್ತು, ಎಮ್ಮೆ ಕರುಗಳನ್ನು ಮನೆದೇವರನ್ನಾಗಿ ತಿಳಿದು ನಡೆದರೆ ರೈತನ ಬಾಳೇ ಉದ್ಧಾರವಾಗುತ್ತದೆ ಎಂದು ಅಥಣಿಯ ಮೋಟಗಿ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.

ಮೂಡಲಗಿಯ ಪತ್ತಿನ ಸಹಕಾರ ಸಂಘದ ೭೫ ನೇ ವರ್ಷದ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಹಕಾರ ಎಂದರೆ ಒಬ್ಬರಿಗೊಬ್ಬರು ಸಹಕರಿಸಿ ನಡೆಯುವುದು. ಎಲ್ಲಿಯವರೆಗೆ ಸಹಕಾರ ಇರುತ್ತದೆಯೋ ಅಲ್ಲಿಯವರೆಗೆ ರೈತನ ಬದುಕು ಚೆನ್ನಾಗಿರುತ್ತದೆ. ಸಹಕಾರ ತತ್ವದ ಮೇಲೆಯೇ ಎಲ್ಲರ ಬದುಕು ನಿಂತಿದೆ ಎಂದರು.

ಈ ಮುಂಚೆ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು.

ಒಂದು ವೇಳೆ ಸಹಕಾರಿ ಎಂಬ ಪದ ಇರದಿದ್ದರೆ, ಸಹಕಾರ ಸಂಘಗಳನ್ನು ನಾವು ಕಟ್ಟದಿದ್ದರೆ ರೈತರ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಉತ್ತಮವಾಗಿ ಇರುತ್ತಿರಲಿಲ್ಲ

ಸ್ವಾತಂತ್ರ್ಯ ಪೂರ್ವದಿಂದಲೂ ಸಂಸ್ಥೆಗಳನ್ನು ಕಟ್ಟುವ ಕೆಲಸ ಮೊದಲು ಕರ್ನಾಟಕದಿಂದಲೇ ಆರಂಭವಾಗಿದೆ ಎಂದರು.

ಆತ್ಮ ನಿರ್ಭರ ಭಾರತ ಎಂಬ ಪ್ರಧಾನಿ ಮೋದಿಯವರ ಕರೆಯಂತೆ ಸಹಕಾರದಿಂದ ಸಮೃದ್ಧಿ ಎಂಬ ಮಾತನ್ನೂ ಅವರು ಹೇಳಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆ ಮಾಡಿದರು. ಸಹಕಾರಿ ಕ್ಷೇತ್ರದಲ್ಲಿ ಬೃಹತ್ ಪ್ರಮಾಣದಲ್ಲಿ ಬದಲಾವಣೆಗಳಾಗಿವೆ, ಉತ್ಪಾದಕರು, ಬಳಕೆದಾರರು, ನೀರಾವರಿ, ಆಸ್ಪತ್ರೆಗಳು, ಪತ್ತಿನ ಸಂಘಗಳು ಅಪಾರ ಪ್ರಮಾಣದಲ್ಲಿ ಸಹಕಾರದ ಬಲದಿಂದ ನಡೆಯುತ್ತಲಿವೆ. ಪತ್ತಿನ ಸಂಘಗಳು ರೈತರ ಬದುಕು ಸುಧಾರಿಸಲು ಶ್ರಮಿಸುತ್ತಿವೆ.ಶೂನ್ಯ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತಿವೆ. ಇಂಥ ಸಂಸ್ಥೆಗಳಲ್ಲಿ ರಾಜಕಾರಣ ಹೊಕ್ಕು ಹಲವಾರು ಸಂಸ್ಥೆಗಳು ಹಾಳಾದ ಉದಾಹರಣೆಗಳಿವೆ ಆದ್ದರಿಂದ ಇಂಥ ಸಂಘಗಳಲ್ಲಿ ರಾಜಕಾರಣ ಪ್ರವೇಶ ಮಾಡದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯ ಮೇಲೆ ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯರು, ಪತ್ತಿನ ಸಂಘದ ಅಧ್ಯಕ್ಷ ಸಂದೀಪ ಸೋನವಾಲಕರ, ಉಪಾಧ್ಯಕ್ಷೆ ಶ್ರೀಮತಿ ನೀಲವ್ವಾ ಮಠಪತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.