ಸಿಂದಗಿ: ಮೊದಲು ನಮ್ಮ ಹಿರಿಯರು ಊರಿಗೊಂದು ವನ ಇರಬೇಕು ಎಂದು ಹೇಳುತ್ತಿದ್ದರು ಆದರೆ ಇಂದು ನಾವೇ ಗಿಡ-ಮರಗಳನ್ನು ಕಡಿದು ನಾಶ ಪಡಿಸಿ ವಿನಾಶ ಹಂತಕ್ಕೆ ತಲುಪುತ್ತಿದ್ದೇವೆ ಪರಿಸರವನ್ನು ನಾವು ಸಂರಕ್ಷಿಸಿದರೆ ನಮ್ಮನ್ನು ಅದು ರಕ್ಷಣೆ ಮಾಡುತ್ತದೆ ಅಂತೆಯೇ ಅಂತರಂಗದ ಪರಿಸರ ಶುದ್ಧವಾದರೆ ಬಾಹ್ಯ ಪರಿಸರ ತಾನೇ ಶುದ್ಧವಾಗುತ್ತದೆ ಅದಕ್ಕೆ ಮನೆಗೊಂದು ಮರ ಬೆಳೆಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನ ಹಿರಿಯ ನ್ಯಾಯಾಧೀಶ ಆಯ್.ಪಿ.ನಾಯಕ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡುವ ಮೂಲಕ ಮಾತನಾಡಿ, ಅನಕ್ಷರ ಮಹಿಳೆ ಸಾಲುಮರದ ತಿಮ್ಮಕ್ಕರನ್ನು ಆದರ್ಶವಾಗಿಟ್ಟುಕೊಂಡು ನಾವೆಲ್ಲರೂ ಪ್ರತಿಯೊಂದು ಮನೆಯ ಮುಂದೆ ಸಸಿ ನೆಡುವ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಮಾತನಾಡಿ, ಗಿಡ- ಮರಗಳನ್ನು ಕಡಿದರೆ ಮಾನವ ಸಂಕುಲವನ್ನು ನಾಶ ಪಡಿಸಿದಂತೆ ಏಕೆಂದರೆ ಕಳೆದ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕವಿಲ್ಲದೆ ಪರದಾಡುವಂತೆ ಮಾಡಿದೆ ಅದಕ್ಕೆ ಪರಿಸರವನ್ನು ನಾವೆಲ್ಲರು ಬೆಳೆಸಲು ಮುಂದಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮಹಾಂತೇಶ ಭೂಸಗೋಳ, ಅರವಿಂದ ಕನ್ನೂರ ವಕೀಲರು ಮಾತನಾಡಿ, ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ನಾಡ್ನುಡಿಗೆ ಅರ್ಥ ಬರಬೇಕಾದರೆ ನಾವೆಲ್ಲರು ಮನೆಗೊಂದು ಮರ ಊರಿಗೊಂದು ವನ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಧೀಶ ಹರೀಶ ಜಾಧವ, ವಕೀಲರ ಸಂಘದ ಅದ್ಯಕ್ಷ ಎಸ್.ಬಿ.ದೊಡಮನಿ, ಅರಣ್ಯಾಧಿಕಾರಿ ರಾಜೇಶ ಬಿರಾದಾರ, ಕೃಷಿ ಅಧಿಕಾರಿ ಎಚ್.ವೈ.ಸಿಂಗೇಗೋಳ, ಸರಕಾರಿ ಅಭಿಯೋಜಕರಾದ ಆನಂದ ರಾಠೋಡ, ಎಂ.ಎಸ್.ಗೊಳಸಂಗಿ, ಅಪರ ಸರಕಾರಿ ಅಭಿಯೋಜಕ ಎಂ.ಎಸ್.ಪಾಟೀಲ, ವಕೀಲರಾದ ಬಿ.ಜಿ.ನೆಲ್ಲಗಿ, ಆರ್.ಐ. ಮೊಗಲಾಯಿ, ಎಸ್.ಎಂ.ಪಾಟೀಲ, ಎಸ್.ಬಿ.ಖಾನಾಪುರ, ಆರ್.ಎಸ್.ಹೊಸಮನಿ ಸೇರಿದಂತೆ ಹಲವರು ಇದ್ದರು.