Homeಸುದ್ದಿಗಳುಮೂಡಲಗಿ ಪೊಲೀಸ್ ಠಾಣೆಗೆ ಪೊಲೀಸ್ ಮಹಾನಿರೀಕ್ಷಕರ ಭೇಟಿ

ಮೂಡಲಗಿ ಪೊಲೀಸ್ ಠಾಣೆಗೆ ಪೊಲೀಸ್ ಮಹಾನಿರೀಕ್ಷಕರ ಭೇಟಿ

ಮೂಡಲಗಿ – ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಚೇತನಸಿಂಗ್ ರಾಠೋಡ್ ಅವರು ಮೂಡಲಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿಸರ್ಗ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಐಜಿಯವರು ಸಸಿಯೊಂದನ್ನು ನೆಟ್ಟು ನೀರುಣಿಸಿದರು.

ಇದಕ್ಕೆ ಮುಂಚೆ ಠಾಣೆಯ ಸಿಪಿಐ ಶ್ರೀಶೈಲ ಬ್ಯಾಕೋಡ ಹಾಗೂ ಪಿಎಸ್ಐ ರಾಜು ಪೂಜಾರಿ ಅವರು ಮಹಾನಿರೀಕ್ಷಕರಿಗೆ ಹೂ ಗುಚ್ಛ ನೀಡಿ, ಪೊಲೀಸ್ ವಂದನೆ ಸಲ್ಲಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ಶ್ರುತಿ ಎನ್ ಎಸ್, ಡಿವೈಎಸ್ ಪಿ ರವೀಂದ್ರ ನಾಯಿಕ, ಠಾಣೆಯ ಸಿಬ್ಬಂದಿ ವರ್ಗದವರು, ಸಂತೋಷ ಸೋನವಾಲಕರ, ಈರಪ್ಪ ಢವಳೇಶ್ವರ ಹಾಜರಿದ್ದರು


 

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group