ಬೀದರ – ಬಡವರು ತಿನ್ನುವ ಪಡಿತರ ಅಕ್ಕಿಯ ಮೇಲೆ ಖದೀಮರ ಕಣ್ಣು ಬಿದ್ದಿದ್ದು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ಧ ಅಕ್ಕಿ ದಾಸ್ತಾನಿನ ಮೇಲೆ ಆಹಾರ ಇಲಾಖೆ ಮತ್ತು ಪೊಲೀಸ ಇಲಾಖೆ ಜಂಟಿ ದಾಳಿ ನಡೆಸಿ ಅಪಾರ ಪ್ರಮಾಣದ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಡವರು ಹಸಿವಿನಿಂದ ಬಳಲು ಬಾರದೆಂದು ಸರ್ಕಾರ ಈ ಯೋಜನೆ ಜಾರಿಗೆ ತಂದಿವೆ. ಆದರೆ ಬಡವರ ಅಕ್ಕಿಯ ಮೇಲೆ ದಂಧೆಕೋರರ ಕಣ್ಣು ಬಿದ್ದಿದೆ ಎಂದು ಹೇಳಬಹುದು.

ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದಲ್ಲಿ ಬಡವರಿಗೆ ಸಿಗಬೇಕಾದ ಪಡಿತರ ಧಾನ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಲಾರಿ ಹಾಗೂ ಲ್ಯಾಪ್ ಟಾಪ್ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿ ಚಾಲಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪಡಿತರ ಧಾನ್ಯದ ಮೊತ್ತ ಸುಮಾರು 2,97,000 ರೂ. ಆಗಿದ್ದು ಲಾರಿ ಮೊತ್ತ 6 ಲಕ್ಷ ಎನ್ನಲಾಗಿದೆ. ಹಳ್ಳಿಗಳಿಂದ ಪಡಿತರ ಧಾನ್ಯ ಕಡಿಮೆ ದರದಲ್ಲಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಆಹಾರ ಧಾನ್ಯದ ದಾಖಲೆಗಳನ್ನು ಕೇಳಿದರೆ ದಾಖಲೆ ನೀಡದಿದ್ದಾಗ ಲಾರಿ ಸಮೇತ ಆರೋಪಿಯನ್ನು ಚಿಟಗುಪ್ಪ ಠಾಣೆ ಎಸ್ ಐ ಮಹೇಂದ್ರ ಕುಮಾರ್ ಹಾಗೂ ಆಹಾರ ನಿರೀಕ್ಷಕ ಶೇಖರ ಜೊತೆಗೂಡಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

