spot_img
spot_img

ಅಕ್ರಮ ನಳಗಳ ಜೋಡಣೆ ಸಕ್ರಮಗೊಳಿಸಬೇಕು – ಶಾಂತವೀರ

Must Read

spot_img
- Advertisement -

ಸಿಂದಗಿ; ಪುರಸಭೆಗೆ ಆದಾಯದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ವಾಸವಾಗಿರುವ ೧೨ ಸಾವಿರ ಮನೆಗಳ ಪೈಕಿ ಬರೀ ಎರಡುವರೆ ಸಾವಿರ ಮಾತ್ರ ನಳಗಳ ಜೋಡಣೆಯಿದ್ದು ಇನ್ನುಳಿದ ನಳಗಳು ಅಕ್ರಮವಾಗಿವೆ ಅದನ್ನು ತಡೆಗಟ್ಟಬೇಕಾದರೆ ಕಡಿಮೆ ಡಿಪಾಜಿಟ್ ಭರಣಾ ಮಾಡಿಕೊಂಡು ಸಕ್ರಮಗೊಳಿಸಿದ್ದಾದರೆ ಪುರಸಭೆಗೆ ಆದಾಯ ಹೆಚ್ಚಿಸಿದಂತಾಗುತ್ತದೆ ಎಂದು ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಪುರಸಭೆ ವ್ಯಾಪ್ತಿಯಲ್ಲಿ ನಳದ ಅಕ್ರಮ ಸಕ್ರಮಗೊಳಿಸುವದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ಮಾತನಾಡಿ, ಅಕ್ರಮವಾಗಿ ನಳ ಪಡೆದ ಮನೆಯವರಿಗೆ ಸಕ್ರಮಗೊಳಿಸಿಕೊಳ್ಳುವಂತೆ ಒಂದು ತಿಂಗಳ ಗಡುವು ನೀಡಿ ಪ್ರಚಾರ ಮಾಡುವ ಮೂಲಕ ನೊಟೀಸ್ ನೀಡಿದ್ದಾಗ ಅದಕ್ಕೆ ಸ್ಪಂದಿಸಿ ಕೆಲವೊಬ್ಬರು ಸಕ್ರಮಗೊಳಿಸಿಕೊಳ್ಳಬಹುದು ಸಮಯಕ್ಕೆ ಬಾರದೆ ಇರುವವರಿಗೆ ದಂಡದ ಮೂಲಕ ಅಕ್ರಮಗೊಳಿಸಿಕೊಳ್ಳಬೇಕು ಎಂದು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಮುಖ್ಯಾಧಿಕಾರಿ ಸುರೇಶ ನಾಯಕ ಮಾತನಾಡಿ, ಪಟ್ಟಣದಲ್ಲಿ ಒಟ್ಟು ೧೨ ಸಾವಿರ ಮನೆಗಳಿದ್ದು ಅದರಲ್ಲಿ ಎರಡುವರೆ ಸಾವಿರ ಮನೆಗಳಿಗೆ ಮಾತ್ರ ಅಧಿಕೃತ ನಳಗಳ ಜೊಡಣೆಯಿದ್ದು ಇನ್ನುಳಿದ ಸುಮಾರು ೧೦ ಸಾವಿರಕ್ಕೂ ಅಧಿಕ ಮನೆಗಳಿಗೆ ಅಕ್ರಮ ನಳಗಳ ಜೋಡಣೆಯಿದ್ದು ಅವುಗಳನ್ನು ಸಕ್ರಮಗೊಳಿಸುವುದು ಸೂಕ್ತ ಎಂದು ಉಲ್ಲೇಖ ಮಂಡಿಸಿದರು.

- Advertisement -

ಬಜಂತ್ರಿ ಲೇಔಟ, ವಿದ್ಯಾನಗರದಲ್ಲಿ ನೀರಿನ ಪೈಪ ಲೈನ ಒಡೆದು ಹೋಗಿ ಹಲವಾರು ತಿಂಗಳಾಯಿತು ಇದರ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಾಗ್ಯೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಾ ಕಲ್ಲೂರ ಆರೋಪಿಸಿದರು.

ಗುಂಟಾ ಪ್ಲಾಟ್‌ಗಳಿಗೂ ನೀರಿನ ಸೌಲಭ್ಯ ಪೂರೈಕೆಯಾಗಿದ್ದು ಅವರಿಂದ ಬಿಲ್ಲು ಸಂದಾಯ ಮಾಡಿಕೊಳ್ಳಲು ಅಧಿಕೃತವಾಗಿ ಪಡೆದುಕೊಳ್ಳಲು ಬರುವುದಿಲ್ಲ ಅಂಥವುಗಳಿಗೂ ಟ್ಯಾಕ್ಸ ಭರಣಾ ಮಾಡಿಕೊಳ್ಳಲು ಸರಕಾರದ ಆದೇಶವಿದ್ದು ಅವರಿಗಾಗಿ ಪ್ರತೇಕ ರಜಿಷ್ಟರ ವ್ಯವಸ್ಥೆ ಕಲ್ಪಿಸಿ ಕರ ಭರಣಾ ಮಾಡಿಕೊಳ್ಳಬೇಕು ಎಂದು ಸದಸ್ಯ ಬಸವರಾಜ ಯರನಾಳ, ಸಂದೀಪ ಚೌರ ಸಲಹೆ ನೀಡಿದರು.

ಕಂಪ್ಯೂಟರ ಉತಾರೆ ಕಲ್ಪಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ನಾಲ್ಕು ಜನ ಕಂಪ್ಯೂಟರ ಪರಿಣಿತರನ್ನು ಹೊರಗುತ್ತಿಗೆ ಆದಾರದ ಮೇಲೆ ಸೇರ್ಪಡೆ ಮಾಡಿಕೊಂಡು ಪ್ರತಿಯೊಂದು ಮನೆಯ ದಾಖಲೆಗಳನ್ನು ಕ್ರೂಢೀಕರಣ ಮಾಡುವ ಮೂಲಕ ಉತಾರೆ ನೀಡುವ ವ್ಯವಸ್ಥೆ ಕಲ್ಪಿಸಬೇಕು ಸದಸ್ಯ ಹಣಮಂತ ಸುಣಗಾರ ಹೇಳಿದರು.

- Advertisement -

ಪುರಸಭೆಗೆ ಆದಾಯ ಹೆಚ್ಚಿಸುವ ಯೋಜನೆ ರೂಪಿಸುತ್ತಿರುವುದು ಸ್ವಾಹಗತಾರ್ಹ ಆದರೆ ಪುರಸಭೆ ಸದಸ್ಯರೇ ಏಜೆಂಟ್‌ರಾಗಿ ಪುರಸಭೆಗೆ ಬರುವ ಆದಾಯಕ್ಕೆ ಕತ್ತರಿ ಬಿಳುತ್ತಿದೆ ಅಂತವರ ವಿರುದ್ಧ ಎಫ್‌ಐ ಆರ್ ದಾಖಲಿಸಿ ಕ್ರಮ ತೆಗೆದುಕೊಂಡಾಗ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ ಕಾರಣ ಬ್ಯಾಂಕ ಸಿಬ್ಬಂದಿ ಮನೆ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಕಂಪ್ಲೇಂಟ್ ದಾಖಲಿಸಿ ಎಂದು ಮಾಜಿ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಪಟ್ಟು ಹಿಡಿದ ಘಟನೆ ಚರ್ಚೆಗೆ ಗ್ರಾಸವಾಯಿತು.

ರಿ.ಸ.ನಂ ೪೭೩ ಮತ್ತು ೪೭೪ ಆಶ್ರಯ ವಸತಿ ಯೋಜನೆಯಡಿ ಮನೆಗಳ ಹಂಚಿಕೆಯಾಗಿದ್ದು, ಸದರಿ ಮನೆಗಳಿಗೆ ಕಲ್ಲು ಹಾಕಿ ಗಡಿ ಗುರ್ತಿಸಿ ಬಡವರಿಗೆ ಅನುಕೂಲ ಮಾಡುವಂತೆ ಆಶ್ರಯ ಸಮಿತಿ ಸದಸ್ಯ ಸಾಯಬಣ್ಣ ಪುರದಾಳ ತಿಳಿಸಿದರು.

ಪುರಸಭೆ ವ್ಯಾಪ್ತಿಯ ಎಲ್ಲಾ ಎನ್.ಎ.ಲೇಔಟ್ ಗಳಲ್ಲಿ ಸದರಿ ಲೇಔಟ್ ಮಾಲಿಕರು ಕಡ್ಡಾಯವಾಗಿ ಉದ್ಯಾನವನ ಮತ್ತು ನಾಗರಿಕ ಸೌಲಭ್ಯ ಜಾಗಗಳಿಗೆ ಕಂಪೌಂಡ್ ನಿರ್ಮಿಸಿ ಭದ್ರಪಡಿಸಬೇಕು. ಪಟ್ಟಣದ ಪ್ರಮುಖ ರಸ್ತೆಯಾದ ವಿವೇಕಾನಂದ ವೃತ್ತದಿಂದ ಟಿಪ್ಪುಸುಲ್ತಾನ್ ವೃತ್ತದ ವರೆಗೆ ಸಂಚಾರದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆವುಂಟಾಗುತ್ತಿದ್ದು, ಏಕಮುಖ(ಒನ್‌ವೇ) ನಿರ್ಮಿಸುವದು, ಕಚೇರಿಯ ಎಲ್ಲ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಕಾರ್ಯರೂಪಕ್ಕೆ ತರುವುದು, ೧೫ ನೇ ಹಣಕಾಸು ಯೋಜನೆಯಡಿ ನಿರ್ವಹಿಸುತ್ತಿರುವ ಕಾಮಗಾರಿಗಳಿಗೆ ಅನುಮೋದನೆ ನೀಡಿ ಕಾಮಗಾರಿ ಆದೇಶ ನೀಡುವದು. ಸಿಂದಗಿ ಪುರಸಭೆಯ ಕಾನೂನು ಸಲಹೆಗಾರರು ಪುರಸಭೆಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಕಾರಣ ಸದರಿ ಕಾನೂನು ಸಲಹೆಗಾರರನ್ನು ಬದಲಾಯಿಸಿ ನೂತನ ಕಾನೂನು ಸಲಹೆಗಾರರನ್ನು ನೇಮಿಸುವದು. ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬಳಗಾನೂರ ಕೆರೆ, ಯರಗಲ್ ಕೆನಾಲ್ ಮತ್ತು ಸಿಂದಗಿ ಕೆರೆಯ ಪಂಪಗಳನ್ನು ದುರಸ್ತಿ ಗೊಳಿಸುವ ಸೇರಿದಂತೆ ೨೨ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿ ಅನುಮೋದನೆ ಪಡೆದುಕೊಂಡವು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಮಾಜಿ ಅದ್ಯಕ್ಷ ಭಾಷಾಸಾಬ ತಾಂಬೋಳಿ, ಸದಸ್ಯರಾದ ಹಾಸೀಂ ಆಳಂದ, ಶರಣಗೌಡ ಪಾಟೀಲ, ಗೊಲ್ಲಾಳ ಬಂಕಲಗಿ, ರಹಿಮ್ ದುದ್ದನಿ, ಸಿದ್ದು ಮಲ್ಲೇದ ಸೇರಿದಂತೆ ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡಗಳ ಸಮಸ್ಯೆಗಳ ಕುರಿತು ವಿವರಣೆ ನೀಡಿದರು.
ಸಿಬ್ಬಂದಿ ಸಿದ್ದು ಅಂಗಡಿ ನಡಾವಳಿ ಪತ್ರವನ್ನು ಓದಿದರು. ಜೆಇ ಎ.ಜೆ.ನಾಟೀಕಾರ, ಸೇರಿದಂತೆ ಎಲ್ಲ ಸಿಬ್ಬಂದಿ ಹಾಜರಿದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group