ವೈಶಾಖ ಮಾಸದ ಅಮಾವಾಸ್ಯೆ; ಮಹತ್ವ ತಿಳಿದುಕೊಳ್ಳಿ

Must Read

ಪ್ರತಿ ತಿಂಗಳ ಕೃಷ್ಣಪಕ್ಷದ ಕೊನೆಯ ತಿಥಿಯಂದು ಅಮಾವಾಸ್ಯೆ ಇರುತ್ತದೆ. ಈ ಅಮಾವಾಸ್ಯೆಯನ್ನು ಮಾಸದ ಹೆಸರಿನಿಂದ ಗುರುತಿಸಲಾಗುತ್ತದೆ. ವೈಶಾಖ ಮಾಸದ ಅಮಾವಾಸ್ಯೆಯನ್ನು ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ದಿನ ಶನಿವಾರ ಬಂದ ಕಾರಣ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಈ ಬಾರಿಯ ವೈಶಾಖ ಅಮವಾಸ್ಯೆಯು ಏಪ್ರಿಲ್ 30, ಅಂದರೆ ಶನಿವಾರದಂದು ಇರಲಿದೆ ಶನಿವಾರವಾದ್ದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ.

ಈ ದಿನದಂದು ನ್ಯಾಯದ ದೇವರು ಶನಿ ದೇವರನ್ನು ವಿಧಿವಿಧಾನಗಳಿಂದ ಪೂಜಿಸಲಾಗುತ್ತದೆ.ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಲೆಕ್ಕಾಚಾರ ಇಡುತ್ತಾನೆ ಮತ್ತು ಅವುಗಳ ಆಧಾರದ ಮೇಲೆ ಫಲಗಳನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಶ್ಚರಿ ಅಮಾವಾಸ್ಯೆಯ ದಿನದಂದು ಕೆಲವು ಉಪಾಯಗಳನ್ನು ಕೈಗೊಳ್ಳಲು ಸಲಹೆ ನೀಡಲಾಗಿದೆ. ಈ ಉಪಾಯಗಳನ್ನು ಅನುಸರಿಸುವ ಮೂಲಕ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಶನಿ ಅಮಾವಾಸ್ಯೆಯ ದಿನ ಶನಿಗೆ ಪೂಜೆ ಸಲ್ಲಿಸುವುದರ ಜೊತೆಗೆ ಶ್ರೀ ಆಂಜನೇಯನನ್ನು ಕೂಡ ಪೂಜಿಸುವುದು ಮಂಗಳಕರವಾಗಿದೆ. ಈ ದಿನದಂದು ಬೂಂದಿ ಲಡ್ಡುಗಳು, ಬೇಳೆಕಾಳು ಮತ್ತು ಬೆಲ್ಲದ ಪ್ರಸಾದವನ್ನು ನೀಡುವ ಮೂಲಕ ಬಜರಂಗಬಲಿ ಹನುಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಗಾಗಿ ಶನಿ ಅಮವಾಸ್ಯೆಯ ಒಂದು ದಿನ ಮೊದಲು, ಅಂದರೆ ಶುಕ್ರವಾರದಂದು ಕಪ್ಪು ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಕಪ್ಪು ಉದ್ದಿನ ಬೇಳೆಯನ್ನು ಕಟ್ಟಿ, ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಶನಿ ಅಮಾವಾಸ್ಯೆಯ ದಿನ ಅದನ್ನು ಶನಿ ದೇವಸ್ಥಾನದಲ್ಲಿ ಇರಿಸಿ. ಇದರೊಂದಿಗೆ, ಸಂಜೆ ಒಂದು ಕಾಡಿಗೆ ಡಬ್ಬಿಯನ್ನು ನಿಮ್ಮ ಇಡೀ ದೇಹದ ಮೇಲಿಂದ 9 ಬಾರಿ ನಿವಾಳಿಸಿ ಅಥವಾ ಇಳಿಸಿ ಅದನ್ನು ಜನವಿರದ ಸ್ಥಳದಲ್ಲಿ ಹುದುಗುವುದರಿಂದ ಶೀಘ್ರದಲ್ಲೇ ಪರಿಣಾಮ ಗೋಚರಿಸುತ್ತದೆ.

ಶನಿ ಅಮಾವಾಸ್ಯೆಯ ದಿನ ಶನಿದೇವರ ಆರಾಧನೆಯ ಜೊತೆಗೆ ಶನಿ ಚಾಲೀಸ ಮತ್ತು ದಶರಥನ ಶನಿ ಸ್ತೋತ್ರವನ್ನು ಪಠಿಸುವುದರಿಂದ ಆರ್ಥಿಕ ಲಾಭ ಪ್ರಾಪ್ತಿಯಾಗುತ್ತದೆ.

ಈ ವಿಶೇಷ ದಿನದಂದು ಶನಿ ದೇವರಿಗೆ ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮತ್ತು ನೀಲಿ ಹೂವುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೋಷ, ಸಾಡೇಸಾತಿ ಮತ್ತು ಎರಡೂ ವರ್ಷಗಳ ಶನಿ ದೆಸೆ ನಿವಾರಣೆಯಾಗುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group