spot_img
spot_img

ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಪಾತ್ರ ಪ್ರಮುಖವಾಗಿತ್ತು – ಪ್ರೊ. ಪ್ರಕಾಶ ಎಸ್. ಕಾಂಬ್ಳೆ

Must Read

spot_img
- Advertisement -

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ-ಧಾರವಾಡ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಕ.ವಿ.ವಿ. ಧಾರವಾಡ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಮಾಲೆ : ಜ್ಞಾನ ಭಿತ್ತಿ -2 ರ ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ. ಪ್ರಕಾಶ ಎಸ್. ಕಾಂಬ್ಳೆ ( ಹಿರಿಯ ಪ್ರಾಧ್ಯಾಪಕರು, ಅರ್ಥಶಾಸ್ತ್ರ ಅಧ್ಯಯನ ವಿಭಾಗ ಶಿವಾಜಿ ವಿಶ್ವವಿದ್ಯಾಲಯ, ಕೊಲ್ಹಾಪುರ) ಅವರು ಆಧುನಿಕ ಭಾರತದ ಆರ್ಥಿಕ ಹಾಗೂ ಸಮಗ್ರ ಅಭಿರುದ್ಧಿಯಲ್ಲಿ ಡಾ. ಬಾಬುಜಗಜೀವನರಾಮ್ ಅವರ ಚಿಂತನೆ ಎಂಬ ವಿಷಯದ ಮೇಲೆ ಮಾತನಾಡುತ್ತಾ, ಡಾ. ಬಾಬು ಜಗಜೀವನರಾಮ್ ಅವರು ರಾಷ್ಟ್ರದ ಪ್ರಗತಿಗೆ ಒತ್ತುಕೊಡುವ ಕೊಡುವ ಮೂಲಕ ಹಲವಾರು ಸಾಮಾಜಿಕ ಚಳವಳಿಯನ್ನು ಕಟ್ಟಿ ಹೋರಾಡಿದವರು ಅಷ್ಟೇ ಅಲ್ಲದೇ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವುದರಲ್ಲಿಯೂ ಕೂಡ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಮಾತನಾಡಿದರು.

ಹಾಗೆಯೇ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಅರವಿಂದ ಎ. ಮೂಲಿಮನಿ(ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಭೂಗೋಳಶಾಸ್ತ್ರ ಅಧ್ಯಯನ ವಿಭಾಗ ಕ. ವಿ. ವಿ. ಧಾರವಾಡ) ಅವರು ಡಾ. ಬಾಬು ಜಗಜೀವನರಾಮ್ ಅವರು ದೇಶದ ಆರ್ಥಿಕ ಚಿಂತನೆಯ ಮೂಲಕ ಶೋಷಿತ ಸಮುದಾಯಗಳ ಬದುಕನ್ನು ಅವಲೋಕಿಸಿ ಎಲ್ಲಾ ಕ್ಷೇತ್ರದಲ್ಲಿಯೂ ಮೀಸಲಾತಿ ದೊರೆಯಬೇಕು ಅಂದಾಗ ಮಾತ್ರ ದೇಶವನ್ನು ಒಗ್ಗೂಡಿಸಲು ಸಾಧ್ಯ ಎಂದು ಚಿಂತನೆ ಮಾಡಿದವರೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಚ್. ಎಚ್. ಭರಡಿ (ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ ಕ. ವಿ. ವಿ. ಧಾರವಾಡ) ಅವರು ಎಲ್ಲಾ ಸಾಮಾಜಿಕ ಹೋರಾಟಗಾರರ ಚಳುವಳಿ ಮತ್ತು ಜೀವನ ಚರಿತ್ರೆಯೊಂದಿಗೆ ಡಾ. ಬಾಬು ಜಗಜೀವನರಾಮ್ ಅವರ ಬದುಕನ್ನೂ ಕೂಡ ತಿಳಿಯುವುದು ತುಂಬಾ ಅವಶ್ಯಕವಾಗಿದೆ ಎಂದರು.

- Advertisement -

ಕಾರ್ಯಕ್ರಮದ ಆಯೋಜಕರಾಗಿದ್ದ ಡಾ. ಶಿವಶರಣ ಸಿ. ಟಿ. (ಸಂಯೋಜಕರು, ಡಾ. ಬಾಬು ಜಗಜೀವನರಾಮ್ ಅಧ್ಯಯನ ವಿಭಾಗ ಕ. ವಿ. ವಿ. ಧಾರವಾಡ) ಅವರು ಉಪಸ್ಥಿತರಿದ್ದರು.

ಈ ವೇಳೆ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಪಕರಾದ ಡಾ. ಎನ್. ಎಸ್. ಮುಗದುರ, ಡಾ. ಬಾಬು ಜಗಜೀವನರಾಮ್ ಅಧ್ಯಯನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಡಾ. ಜಯಶ್ರೀ ದೇಶಮಾನೆ ಹಾಗೂ ಉಮಾ ಎಸ್. ಚೌಹಾಣ್(ಸಮಾಜ ಸೇವಕರು, ಧಾರವಾಡ) ಮತ್ತು ಕ. ವಿ. ವಿ. ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -

More Articles Like This

- Advertisement -
close
error: Content is protected !!
Join WhatsApp Group